/newsfirstlive-kannada/media/post_attachments/wp-content/uploads/2024/01/DUNIYA_VIJAY-3.jpg)
ಸ್ಯಾಂಡಲ್​ವುಡ್ ಸಲಗ ವಿಜಯ್ ಕುಮಾರ್ ಅವರಿಗೆ ಇಂದು 50ನೇ ವರ್ಷದ ಜನ್ಮದಿನದ ಸಂಭ್ರಮ. ಕಳೆದ ವರ್ಷದಂತೆ ಈ ವರ್ಷವೂ ಕೂಡ ವಿಜಯ್ ಕುಮಾರ್ ಅವರು ತನ್ನ ಅಪ್ಪ-ಅಮ್ಮನ ಸಮಾಧಿ ಮುಂದೆ ಬರ್ತ್​​ಡೇಯನ್ನು ಅಭಿಮಾನಿಗಳೊಟ್ಟಿಗೆ ಸೆಲೆಬ್ರೆಷನ್ ಮಾಡಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/01/DUNIYA_VIJAY_2.jpg)
ಆನೇಕಲ್​ನಲ್ಲಿರುವ ಬಳಿಯ ಕುಂಬಾರನಹಳ್ಳಿಯಲ್ಲಿನ ತಮ್ಮ ಜಮೀನಿನಲ್ಲಿ ವಿಜಯ್ ಕುಮಾರ್ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ತನ್ನ ತಂದೆ-ತಾಯಿ ಸಮಾಧಿಯನ್ನ ದೇವಸ್ಥಾನದ ರೀತಿ ಕಟ್ಟಿಸಿ ವಿಶೇಷವಾಗಿ ಅಲಂಕಾರ ಮಾಡಿದ್ದರು. ಬಳಿಕ ಪೂಜೆ ಮಾಡಿ, ಬರೋ ಅಭಿಮಾನಿಗಳನ್ನು ಭೇಟಿ ಮಾಡಿ ಅವರೊಟ್ಟಿಗೆ ದಿನ ಪೂರ್ತಿ ಕಳೆಯಲಿದ್ದಾರೆ.
ರಾತ್ರಿಯಿಂದಲೇ ಬರ್ತ್​ಡೇಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು. ಅಲ್ಲದೇ ಸಾಕಷ್ಟು ಅಭಿಮಾನಿಗಳು ರಾತ್ರಿಯೇ ಆಗಮಿಸಿ ವಿಶ್ ಮಾಡಿದ್ದರು. ಒಟ್ಟು 5 ಸಾವಿರ ಅಭಿಮಾನಿಗಳಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2024/01/DUNIYA_VIJAY_1.jpg)
ದುನಿಯಾ ವಿಜಯ್ ಬರ್ತ್ ಡೇ ಪ್ರಯುಕ್ತ ಈಗಾಗಲೇ ಭೀಮಾ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಸಲಗ ಬಳಿಕ ದುನಿಯಾ ವಿಜಯ್ ಅವರು ತಾವೇ ನಿರ್ದೇಶನ ಮಾಡಿ, ಅಭಿನಯಿಸಿದ ಭೀಮ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದ್ದು ಟೀಸರ್ ಫುಲ್ ಮಾಸ್ ಲುಕ್​ನಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us