/newsfirstlive-kannada/media/post_attachments/wp-content/uploads/2025/02/MONISHA-VIJAY-1.jpg)
ದುನಿಯಾ ವಿಜಯ್ ಅವರ ಕಿರಿಯ ಮಗಳು ಮೋನಿಷಾ ವಿಜಯ್ ಚಂದನವನಕ್ಕೆ ಕಾಲಿಟ್ಟಿದ್ದಾರೆ. ವಿನಯ್ ರಾಜ್ಕುಮಾರ್ ಹೀರೋ ಆಗಿ ನಟಿಸುತ್ತಿರುವ ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಮಿಂಚಲಿದ್ದಾರೆ. ಸಿಟಿ ಲೈಟ್ಸ್ ಸಿನಿಮಾವನ್ನು ಸ್ವತಃ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.
ಅಂತೆಯೇ ನಿನ್ನೆ ಬೆಂಗಳೂರಿನ ಬಂಡೆ ಮಹಕಾಳಿ ಸನ್ನಿಧಿಯಲ್ಲಿ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿತು. ವಿಜಿ ಮಗಳು ಸ್ಯಾಂಡಲ್ವುಡ್ನಲ್ಲಿ ತುಂಬಾ ವರ್ಷಗಳ ಕಾಲ ಉಳಿಯುತ್ತಾರೆ. ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ರೀತಿಯಲ್ಲೇ ಬೆಳೆಯುತ್ತಾರೆ. ಅವರು ಲಂಡನ್ನಿಂದ ಅಭಿನಯ ಕಲಿತುಕೊಂಡು ಬಂದಿದ್ದಾರೆ ಎಂದು ನಿರ್ಮಾಪಕರು ಕೊಂಡಾಡಿದ್ದಾರೆ.
ಇದನ್ನೂ ಓದಿ: ಫೆ.14ಕ್ಕೆ ರಾಜು ಜೇಮ್ಸ್ ಬಾಂಡ್ ಎಂಟ್ರಿ.. ಪ್ರೀ ರಿಲೀಸ್ ಇವೆಂಟ್‌ಗೆ ರಮ್ಯಾ, ಡಾ.ಜಿ ಪರಮೇಶ್ವರ್ ಸಾಥ್!
ತಮ್ಮನ್ನು ರಮ್ಯಾ ಅವರಿಗೆ ಹೋಲಿಕೆ ಮಾಡಿರೋದ್ರ ಬಗ್ಗೆ ನ್ಯೂಸ್ಫಸ್ಟ್ಗೆ ಪ್ರತಿಕ್ರಿಯಿಸಿರುವ ಮೋನಿಷಾ, ನಿಜ ಹೇಳಬೇಕು ಅಂದರೆ ಅದು ತುಂಬಾ ದೊಡ್ಡ ಮಾತು. ರಮ್ಯಾ ಮೇಡಂ ಅವರು ಸೂಪರ್ ಸ್ಟಾರ್. ಅವರು ತುಂಬಾ ಚೆನ್ನಾಗಿದ್ದಾರೆ. ನಾನು ಚಿಕ್ಕ ವಯಸ್ಸಿನಿಂದಲೂ ಅವರ ಫ್ಯಾನ್. ಅವರು ನಮ್ಮ ತಂದೆ ಜೊತೆ ಜಾನಿ ಮೇರಾ ನಾಮ್ ಸಿನಿಮಾ ಮಾಡಿದ್ದರು. ಆಗ ನಾನು ಅವರ ಜೊತೆಯೇ ಇರುತ್ತಿದ್ದೆ. ಆಗ ನಮ್ಮ ಅಪ್ಪ ಹೇಳೋರು, ರಮ್ಯಾ ಅವಳನ್ನ ನಿಮ್ಮ ಕ್ಯಾರವಾನ್ಗೆ ಕರೆದುಕೊಂಡು ಹೋಗು ಎಂದು ಹೇಳೋರು. ಅಷ್ಟು ದೊಡ್ಡ ಫ್ಯಾನ್ ನಾನು. ನನಗೆ ಅವರನ್ನು ಕಂಪೇರ್ ಮಾಡಿ ಹೇಳ್ತಾರೆ ಅಂದ್ರೆ ಇದು ದೊಡ್ಡ ಕಾಂಪ್ಲಿಮೆಂಟ್ ಎಂದಿದ್ದಾರೆ.
ಇದನ್ನೂ ಓದಿ: ಬಂಧನದ ಭೀತಿಯಲ್ಲಿ ರಣವೀರ್ ಅಲಹಾಬಾದಿಯಾ.. ಕ್ಷಮೆ ಕೇಳಿದ ಯೂಟ್ಯೂಬರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ