/newsfirstlive-kannada/media/post_attachments/wp-content/uploads/2025/01/DUNIYA_VIJAY.jpg)
ದುನಿಯಾ ವಿಜಯ್ ಸದ್ಯ ಸಿನಿಮಾಗಳ ಯಶಸ್ಸಿನ ಅಲೆಯಲ್ಲಿ ಇದ್ದಾರೆ. ಸಲಗ, ಭೀಮ ಸಕ್ಸಸ್ ಕಂಡ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳು ಹುಡುಕಿಕೊಂಡು ಬಂದಿವೆ. ಇದರಲ್ಲಿ ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ಮೂವಿ ಮಾಡಲು ಓಕೆ ಹೇಳಿದ್ದಾರೆ. ಆದರೆ ಸಿನಿಮಾ ಟೈಟಲ್ ಅಂತಿಮವಾಗಿಲ್ಲ. ಹೀಗಾಗಿ ದುನಿಯಾ ವಿಜಯ್ ಬರ್ತ್ಡೇಯಂದು ಫಸ್ಟ್ ಲುಕ್ ಬಿಡುಗಡೆ ಮಾಡಲಾಗುತ್ತದೆ ಎಂದು ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ.
ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಕೊಟ್ಟರೇ, ಇನ್ನೊಂದು ಮನಸ್ಸಿಗೆ ಹಿಡಿಸದ ಸುದ್ದಿಯನ್ನು ದುನಿಯಾ ವಿಜಯ್ ಅವರು ಕೊಟ್ಟಿದ್ದಾರೆ. ಜನವರಿ 20 ರಂದು ದುನಿಯಾ ವಿಜಯ್ ಅವರು 51ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಸುಸಂದರ್ಭವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ದುನಿಯಾ ವಿಜಯ್ ಅವರು ಹೇಳಿದ್ದಾರೆ. ಇದರಿಂದ ಅವರ ಅಭಿಮಾನಿಗಳ ಮನಸಿಗೆ ಕೊಂಚ ಘಾಸಿಯಾದಂತೆ ಆಗಿದೆ ಎನ್ನಲಾಗಿದೆ.
ಪ್ರತಿ ವರ್ಷವೂ ನನ್ನ ಹುಟ್ಟು ಹಬ್ಬವನ್ನು ನಿಮ್ಮ ಮನೆಯ, ಊರಿನ ಹಬ್ಬವನ್ನಾಗಿ ಅಭಿಮಾನಿಗಳು ಆಚರಣೆ ಮಾಡಿದ್ದೀರಿ. ಈ ಬಾರಿನು ನಿಮ್ಮ ಜೊತೆ ಬರ್ತ್ಡೇ ಸೆಲೆಬ್ರೆಷನ್ ಮಾಡಿಕೊಳ್ಳಬೇಕು ಎನ್ನುವ ಆಸೆ ಇತ್ತು. ಆದರೆ ಹೊಸ ಸಿನಿಮಾದ ಕೆಲಸದ ಜವಾಬ್ದಾರಿ ಇರುವುದರಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.
ಇದನ್ನೂ ಓದಿ:BIGG BOSS; ಇವತ್ತು ಒಬ್ಬರು, ನಾಳೆ ಒಬ್ಬರು ಮನೆ ಖಾಲಿ ಮಾಡ್ತಾರಾ.. ಎಲಿಮಿನೇಷನ್ ಹೇಗೆ?
ಪ್ರತಿ ಬಾರಿಯಂತೆ ಈ ಸಲ ನನ್ನ ತಂದೆ, ತಾಯಿ ಸಮಾಧಿ ಬಳಿ ನಾನು ಸಿಗುವುದಿಲ್ಲ. ಅಂದು ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿರುವ ವಿಕೆ29 ಸಿನಿಮಾದ ಶೂಟಿಂಗ್ನಲ್ಲಿ ಇರುತ್ತೇನೆ. ಅಂದು ನಿಮಗಾಗಿ ವಿಕೆ29 ಸಿನಿಮಾದ ಫಸ್ಟ್ ಲುಕ್ ರಿವೀಲ್ ಮಾಡಲಾಗುತ್ತದೆ. ಅಲ್ಲದೇ ಶನಿವಾರ ಹಾಗೂ ಭಾನುವಾರ ಕೂಡ ಮನೆಯಲ್ಲಿ ಇರಲ್ಲ. ಹೀಗಾಗಿ ಯಾರು ಕೂಡ ಮನೆ ಬಳಿ ಬರಬಾರದು ಎಂದು ದುನಿಯಾ ವಿಜಯ್ ಅವರು ಮನವಿ ಮಾಡಿಕೊಂಡಿದ್ದಾರೆ.
ಜಡೇಶ್ ಹಂಪಿ ನಿರ್ದೇಶನದಲ್ಲಿ ಕೆಲಸ ಮಾಡಲು ದುನಿಯಾ ವಿಜಯ್ ಓಕೆ ಎಂದಿರುವ ಸಿನಿಮಾಕ್ಕೆ ಟೈಟಲ್ ಇನ್ನು ಫಿಕ್ಸ್ ಮಾಡಿಲ್ಲ. ಹೀಗಾಗಿ ಹುಟ್ಟುಹಬ್ಬದ ದಿನವೇ ಹೆಸರಿಡದ ವಿಕೆ29 ಸಿನಿಮಾದ ಟೈಟಲ್ ಘೋಷಣೆ ಮಾಡುವ ಸಾಧ್ಯತೆ ಇದೆ. ಇದರ ಜೊತೆಗೆ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗುತ್ತದೆ. ಜಂಟಲ್‌ಮನ್ ಹಾಗೂ ಶರಣ್ ನಟನೆಯ ಗುರುಶಿಷ್ಯರು ಸಿನಿಮಾಗಳನ್ನು ಜಡೇಶ್ ಹಂಪಿ ಅವರು ಡೈರೆಕ್ಟ್ ಮಾಡಿದ್ದರು. ಇದಿಷ್ಟೇ ಅಲ್ಲದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಮೂವಿಗೆ ಜಡೇಶ್ ಹಂಪಿ ಅವರೇ ಕಥೆ ನೀಡಿದ್ದರು ಎನ್ನುವುದು ಇಲ್ಲಿ ನೆನಪಿಸಿಕೊಳ್ಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ