newsfirstkannada.com

‘ಭೀಮ’ ಸಿನಿಮಾದ ಮತ್ತೊಂದು ಸಾಂಗ್ ಔಟ್​.. ಬ್ಯೂಟಿ ರಕುಲ್​ಗೆ ಮದುವೆ; ಇಲ್ಲಿದೆ ಸಿನಿಮಾದ 3 ಸುದ್ದಿಗಳು!

Share :

Published January 3, 2024 at 10:07am

    ಸುಂದರಿ ರಕುಲ್ ಮದುವೆ ವಿಷ್ಯ ಕೇಳಿ ಹುಡುಗ್ರು ಫುಲ್ ಫೀಲಿಂಗ್?

    ಡೈರೆಕ್ಷನ್ ಜೊತೆಗೆ ಅಭಿನಯ ಮಾಡಿರೋ ದುನಿಯಾ ವಿಜಯ್

    ಧರ್ಮ ಕೀರ್ತಿರಾಜ್ ಅಭಿನಯದ ‘ಬುಲೆಟ್’ ರೈಡಿಂಗ್​ ರೆಡಿನಾ.?

ದುನಿಯಾ ವಿಜಯ್ ಅಭಿನಯದ ಭೀಮ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ದುನಿಯಾ ವಿಜಯ್ ಡೈರೆಕ್ಷನ್ ಕೂಡ ಮಾಡಿರೋದ್ರಿಂದಲೇ ಈ ನಿರೀಕ್ಷೆ ಇನ್ನು ಡಬಲ್ ಮಾಡಿದೆ. ನಟನೆ ಮತ್ತು ನಿರ್ದೇಶನ ಎರಡನ್ನೂ ಮಾಡಿರೋ ಈ ಚಿತ್ರದಲ್ಲಿ ಒಳ್ಳೆ ಕ್ಯಾರೆಕ್ಟರ್ ಡಿಸೈನ್ ಆಗಿದ್ದು ಆ ಪಾತ್ರಗಳ ಪ್ರಸೆಂಟ್‌ಟೇಷನ್‌ ಕೂಡ ವಿಶೇಷವಾಗಿದೆ ಎಂದು ಹೇಳಲಾಗುತ್ತಿದೆ. ಎಲ್ಲದರ ಬೆನ್ನಲ್ಲೇ ಈ ಸಿನಿಮಾದ ಮತ್ತೊಂದು ಸಾಂಗ್ ಟ್ರೆಂಡ್​ ಶುರು ಮಾಡಿದೆ.

ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ಹಾಡುಗಳಿಂದಲೇ ಭರ್ಜರಿ ಸದ್ದು ಮಾಡ್ತಿದೆ. ಬ್ಯಾಡ್​ ಬಾಯ್ಸ್​ ಹಾಗೂ ಐ ಲವ್ ಯೂ ಕಣೆ ಹಾಡುಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಭೀಮ ಚಿತ್ರತಂಡ ಈಗ ‘ನೂರು ರೂಪಾಯಿ ಮಿಕ್ಸ್’​ ಎನ್ನುವ ಮತ್ತೊಂದು ಸಾಂಗ್ ರಿಲೀಸ್ ಮಾಡಿದೆ. ನಿರೀಕ್ಷೆಯಂತೆ ಈ ಸಾಂಗ್​ಗೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ. ಚರಣ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಎಂಜಿ ಬಿಜ್ಜು ಹಾಗೂ ಚರಣ್ ರಾಜ್ ಹಾಡಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಮದುವೆ ಡೇಟ್ ಫಿಕ್ಸ್!

ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಏನೆಂದರೆ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಹೌದು ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಹಾಗೂ ಬ್ಯೂಟಿ ರಕುಲ್ ಪ್ರೀತ್ ಸಿಂಗ್ ಬಹುಕಾಲದ ಗೆಳೆಯರು ಆಗಿದ್ದರು. ಈ ಗೆಳೆತನ ಸದ್ಯ ಮದುವೆವರೆಗೆ ಕರೆದುಕೊಂಡು ಹೋಗಿದೆ. ನ್ಯೂ ಇಯರ್ ಮೂಡ್​ನಲ್ಲಿರುವ ಈ ಸ್ಟಾರ್ ಬ್ಯೂಟಿ ಮುಂದಿನ ಫೆಬ್ರವರಿ 22 ರಂದು ಹಸೆಮಣೆ ಏರುವ ಪ್ಲಾನ್ ಮಾಡಿದ್ದಾರೆ. ಹಾಗಾದ್ರೆ ಮದುವೆ ಎಲ್ಲಿರಬಹುದು ಎಂದು ನಿಮ್ಮನ್ನುಕಾಡುತ್ತಿದ್ದರೇ ಅದಕ್ಕೆ ಉತ್ತರ ಸಿಂಪಲ್​. ಸಂಭ್ರಮದಿಂದ ಗೋವಾದ ಹೋಟೆಲ್​ವೊಂದರಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಧರ್ಮ ಅಭಿನಯದ ಬುಲೆಟ್ ರೆಡಿ

ಧರ್ಮ ಕೀರ್ತಿರಾಜ್ ಅಭಿನಯದ ಬುಲೆಟ್ ಸಿನಿಮಾ ಇತ್ತೀಚೆಗಷ್ಟೇ ಸೆನ್ಸಾರ್ ಮುಗಿಸಿದ್ದು, ಇನ್ನೇನು ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ ಬುಲೆಟ್ ಸಿನಿಮಾ ಬೆಂಗಳೂರು, ಗೋವಾ, ಮಾಲೂರು, ತುಮಕೂರು ಮುಂತಾದ ಕಡೆ 45 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ವಿಶೇಷ ಅಂದ್ರೆ ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಸತ್ಯಜಿತ್‌ ಬುಲೆಟ್ ಮೂವಿಯನ್ನು ನಿರ್ದೇಶನ ಮಾಡಿ ನಿರ್ಮಾಣ ಮಾಡಿದ್ದಾರೆ. ಈ ಮೂವಿಯಲ್ಲಿ ಹೀರೋನ ತಂದೆಯ ಪಾತ್ರದಲ್ಲಿ ಸತ್ಯಜಿತ್ ಅಭಿನಯಿಸಿರುವುದು ವಿಶೇಷ ಎನಿಸಿದ್ದು ಇದು ಕನ್ನಡದಲ್ಲಿ ಅವರ ಮೊಟ್ಟ ಮೊದಲ ಸಿನಿಮವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಭೀಮ’ ಸಿನಿಮಾದ ಮತ್ತೊಂದು ಸಾಂಗ್ ಔಟ್​.. ಬ್ಯೂಟಿ ರಕುಲ್​ಗೆ ಮದುವೆ; ಇಲ್ಲಿದೆ ಸಿನಿಮಾದ 3 ಸುದ್ದಿಗಳು!

https://newsfirstlive.com/wp-content/uploads/2024/01/DUNIYA_VIJAY-1.jpg

Load More