/newsfirstlive-kannada/media/post_attachments/wp-content/uploads/2025/02/RAMYA.jpg)
ದುನಿಯಾ ವಿಜಯ್ ಅವರ ಕಿರಿಯ ಮಗಳು ಮೋನಿಷಾ ವಿಜಯ್ ಚಂದನವನಕ್ಕೆ ಕಾಲಿಟ್ಟಿದ್ದಾರೆ. ‘ಸಿಟಿ ಲೈಟ್ಸ್’ ಮೂಲಕ ಮಗಳನ್ನು ಸಿನಿಮಾ ಇಂಡಸ್ಟ್ರಿಗೆ ಕರೆ ತರ್ತಿದ್ದಾರೆ ದುನಿಯಾ ವಿಜಯ್. ‘ಸಿಟಿ ಲೈಟ್ಸ್’ ಸಿನಿಮಾಗೆ ವಿನಯ್ ರಾಜ್ ಕುಮಾರ್ ಹೀರೋ ಆಗಿದ್ದಾರೆ.
ಇನ್ನು ಮೋನಿಷಾ ವಿಜಯ್ ಅವರನ್ನು ಮೋಹಕ ತಾರೆ ರಮ್ಯಾಗೆ ಹೋಲಿಕೆ ಮಾಡಲಾಗುತ್ತಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ದುನಿಯಾ ವಿಜಯ್, ನನ್ನ ಸಿನಿಮಾವನ್ನು ಸೈಡ್ಗೆ ಇಟ್ಟು ಮಗಳಿಗೋಸ್ಕರ ಚಿತ್ರ ಮಾಡ್ತಿದ್ದೇನೆ. ಅವಳಿಗೆ ಒಂದು ಅವಕಾಶ ಕೊಡಬೇಕಿತ್ತು. ಈಗ ಅವಳ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮಗಳಿಗೆ ಆಶೀರ್ವಾದ ಬೇಕಿದೆ ಎಂದರು.
ಇದನ್ನೂ ಓದಿ: ಟೀಂ ಇಂಡಿಯಾದ ಮೂವರು ಸ್ಟಾರ್ಗಳಿಗೆ ಕೊಕ್; ನಾಳೆ ಬಲಿಷ್ಠ ತಂಡ ಕಣಕ್ಕೆ..!
ನನ್ನ ಮಗಳಿಗೆ ಒಳ್ಳೆಯದಾಗಲಿ. ರಮ್ಯಾ ಜೊತೆ ನನ್ನ ಮಗಳನ್ನು ಹೋಲಿಕೆ ಮಾಡ್ತಿರೋದು ಖುಷಿ ಇದೆ. ಆಗಲಿ, ಸಂತೋಷ! ರಮ್ಯಾ ಅವರಿಗೆ ದೊಡ್ಡ ಸ್ಥಾನ ಇದೆ. ನನ್ನ ಮಗಳಿಗೂ ಒಂದು ಸ್ಥಾನ ಸಿಗಲಿ. ಅವರ ಆಶೀರ್ವಾದ ಸಿಗಲಿಎಂದು ಕೇಳಿಕೊಳ್ತೇನೆ. ರಮ್ಯಾ ಅವರೂ ಈ ಕಾರ್ಯಕ್ರಮ ನೋಡುತ್ತಿದ್ದರೆ ಮಗಳನ್ನು ಹರಿಸಿ. ಒಳ್ಳೆಯದಾಗಲಿ ಅಂತಾ ಆಶೀರ್ವಾದ ಮಾಡಿ ಎಂದು ಕೇಳಿಕೊಳ್ತೇನೆ ಎಂದಿದ್ದಾರೆ.
ಇದೇ ವೇಳೆ ಚಿತ್ರ ಹೀರೋ ವಿನಯ್ ರಾಜ್ ಕುಮಾರ್ ಬಗ್ಗೆ ಮಾತನಾಡಿ.. ದೊಡ್ಮನೆಯ ಹುಡುಗ ವಿನಯ್. ಅಷ್ಟು ದೊಡ್ಡ ಕುಟುಂಬದ ವಿನಯ್, ಯುವ ಇಬ್ಬರೂ ತುಂಬಾ ಹಂಬಲ್ ಇದ್ದಾರೆ. ಅವರಲ್ಲಿ ಯಾರಿಗೂ ದುರಹಂಕಾರ ಇಲ್ಲ. ವಿನಯ್ ಗುಣ ನನಗೆ ತುಂಬಾನೇ ಇಷ್ಟ. ಎಲ್ಲೇ ಇದ್ದರೂ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಾರೆ ಎಂದರು.
ಇದೇ ವೇಳೆ ಸಿಟಿ ಲೈಟ್ಸ್ ಸಿನಿಮಾ ಬಗ್ಗೆ ಮಾತನಾಡಿ.. ಚಿತ್ರದ ಟೈಟಲ್ ಹೇಳುವಂತೆಯೇ ನೋವುಗಳಿಗೆ ಸಂಬಂಧಿಸಿದ ಚಿತ್ರವಾಗಿದೆ. ದೀಪ ಹಚ್ಚಿದಾಗ ನಾವು ಅದರ ಕೆಳಗೆ ನೆರಳನ್ನು ನೋಡುತ್ತೇವೆ. ಆದರೆ ಅಲ್ಲಿ ಬರೀ ನೆರಳು ಮಾತ್ರ ಇರೋದಿಲ್ಲ. ನೆರಳಲ್ಲಿ ಏನೇನೋ ಅಂಟಿಕೊಂಡು ಇರುತ್ತದೆ. ಆ ನೆರಳಲ್ಲಿ ಏನೇನಿದೆ ಅಂತಾ ಬಿಡಿಸಿ ಹೇಳೋಕೆ ಟ್ರೈ ಮಾಡ್ತಿದ್ದೇನೆ ಎಂದರು.
ಇದನ್ನೂ ಓದಿ: ಜೂನಿಯರ್ ರಮ್ಯಾ ಆಗ್ತಾರಾ ದುನಿಯಾ ವಿಜಿ ಪುತ್ರಿ..? ಹೋಲಿಕೆ ಬಗ್ಗೆ ಮೋನಿಷಾ ವಿಜಯ್ ಮಾತು..! Video
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ