/newsfirstlive-kannada/media/post_attachments/wp-content/uploads/2025/03/NAYANATARA_DUNIYA_VIJAY.jpg)
ಸ್ಯಾಂಡಲ್ವುಡ್ನ ದುನಿಯಾ ವಿಜಯ್ ಸಿನಿಮಾಗಳ ಯಶಸ್ಸಿನ ಅಲೆಯ ಉಯ್ಯಾಲೆಯಲ್ಲಿದ್ದಾರೆ. ಸಲಗ, ಭೀಮ ಮೂವಿ ಯಶಸ್ವಿಯಾದ ಮೇಲೆ ದುನಿಯಾ ವಿಜಯ್ ಅವರನ್ನು ಹುಡುಕಿಕೊಂಡು ಪರಭಾಷೆ ಸಿನಿಮಾಗಳು ಬರುತ್ತಿವೆ. ಅದರಂತೆ ದುನಿಯಾ ವಿಜಯ್ ಅವರು ಸ್ಯಾಂಡಲ್ವುಡ್ನಿಂದ ಕಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದು ಸಿನಿಮಾವೊಂದರ ಮೂಹರ್ತದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೂವಿ ಯಾವುದು, ಹೀರೋಯಿನ್ ಯಾರು ಇತ್ಯಾದಿ ಮಾಹಿತಿ ಈ ಕೆಳಗೆ ಇದೆ.
ದುನಿಯಾ ವಿಜಯ್ ಸ್ವಂತ ಸಾಮರ್ಥ್ಯದ ಮೇಲೆ ಸ್ಯಾಂಡಲ್ವುಡ್ನಲ್ಲಿ ಗುರುಸಿಕೊಂಡವರು. ತನ್ನ ಸಿನಿಮಾ ಹೆಸರೇ ತನಗೆ ಸ್ಟಾರ್ಗಿರಿಯಾಗಿದ್ದು ದುನಿಯಾ ಎಂದು ಗುರುತಿಸಿ ಬಿಟ್ಟಿದೆ. ಚಿತ್ರರಂಗದಲ್ಲಿ ಕೆಳಮಟ್ಟದಿಂದ ದುಡಿಮೆ ಮಾಡಿದ ಇವರು ಇಂದು ಪರಭಾಷೆಯ ಸಿನಿಮಾಗಳಲ್ಲೂ ಅಭಿನಯ ಮಾಡುವ ಹಂತಕ್ಕೆ ಬೆಳೆದಿದ್ದಾರೆ ಎಂದರೇ ಕನ್ನಡಿಗರ ಹೆಮ್ಮೆ. ಇತ್ತೀಚೆಗಷ್ಟೇ ತೆಲುಗು ಸಿನಿಮಾಕ್ಕೆ ಡೆಬ್ಯೂ ಮಾಡಿದ್ದರು.
ತೆಲುಗಿನ ಹಿರಿಯ ನಟ ಬಾಲಕೃಷ್ಣ ಅವರ ಜೊತೆ ನಟನೆ ಮಾಡಿದ್ದ ದುನಿಯಾ ವಿಜಯ್ ಅವರು ವಿಲನ್ ರೋಲ್ನಲ್ಲಿ ಸಖತ್ ಆಗಿಯೇ ಅಬ್ಬರಿಸಿದ್ದರು. ಇದರ ಬೆನ್ನಲ್ಲೇ ಇದೀಗ ದುನಿಯಾ ವಿಜಯ್ ತಮಿಳು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ಕನ್ನಡ ಸಿನಿರಂಗದಲ್ಲಿ ಈಗಾಗಲೇ ನಿರ್ದೇಶನ, ನಟನೆಯಲ್ಲಿ ಬ್ಯುಸಿ ಇರುವ ದುನಿಯಾ ವಿಜಯ್ ತಮಿಳಿನ ದೊಡ್ಡ ಬಜೆಟ್ ಸಿನಿಮಾದಲ್ಲಿ ಅಭಿನಯಿಸಲು ಸಿದ್ಧರಾಗಿದ್ದಾರೆ.
ಅಭಿನಯ ಜೊತೆ ಜೊತೆಗೆ ನಿರ್ದೇಶನ ಕೂಡ ಮೈಗೂಡಿಸಿಕೊಂಡ ದುನಿಯಾ ವಿಜಯ್ ಇದೀಗ ತಮಿಳಿನ ಬಿಗ್ ಪ್ರಾಜೆಕ್ಟ್ ಒಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಆಗಿರುವ ನಯನತಾರ ನಟನೆಯ ಮೂಕುತಿ ಅಮ್ಮನ್- 2 ಸಿನಿಮಾದಲ್ಲಿ ವಿಲನ್ ಆಗಿ ನಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಇಂದು ಅದ್ಧೂರಿ ಮುಹೂರ್ತ ಸಮಾರಂಭ ನಡೆಯುತ್ತಿದೆ. ಇದರಲ್ಲಿ ದುನಿಯಾ ವಿಜಯ್ ಕೂಡ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಶಾಕಿಂಗ್ ವಿಚಾರ ಹಂಚಿಕೊಂಡ ನಯನತಾರಾ; ಅಭಿಮಾನಿಗಳಿಗೆ ಕೈಮುಗಿದು ವಿನಂತಿಸಿದ ನಟಿ..!
ಇನ್ನು ಈ ಸಿನಿಮಾದಲ್ಲಿ ಬ್ಯೂಟಿ ನಯನತಾರಾ, ನಟಿ ರೆಜಿನಾ ಕಸ್ಸಂದ್ರ, ದುನಿಯಾ ವಿಜಯ್, ಆರ್,ಜೆ ಬಾಲಾಜಿ, ಕಾಮಿಡಿ ಆ್ಯಕ್ಟರ್ ಯೋಗಿ ಬಾಬು ಸೇರಿ ಇನ್ನಿತರರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಸುಂದರ್ ಸಿ ಅವರು ಮೂಕುತಿ ಅಮ್ಮನ್- 2 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೊದಲ ಭಾಗ ಸೂಪರ್ ಹಿಟ್ ಆಗಿದ್ದರಿಂದ 2ನೇ ಭಾಗ ನಿರ್ಮಾಣ ಮಾಡಲಾಗುತ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ