/newsfirstlive-kannada/media/post_attachments/wp-content/uploads/2025/01/DUPLICATE-CIGARETTE.jpg)
ಸಿಗರೇಟ್ ಸೇದುವವರು ಕಡ್ಡಾಯವಾಗಿ ಓದಲೇಬೇಕಾದ ಸ್ಟೋರಿ ಇದು. ನೀವು ಹಲವಾರು ರೂಪಾಯಿ ಖರ್ಚು ಮಾಡಿ ಇದು ಒಳ್ಳೆಯ ಸಿಗರೇಟ್​ ಎಂದು ತೆಗೆದುಕೊಂಡಿರುತ್ತೀರಿ. ಆದ್ರೆ ಅಲ್ಲಿಯೂ ಕೂಡ ನಕಲಿ ಗ್ಯಾಂಗ್​ಗಳ ಕೈವಾಡವಿರುತ್ತದೆ.ಇದಕ್ಕೆ ನೇರ ಸಾಕ್ಷಿ ಬೆಂಗಳೂರಿನಲ್ಲಿ ಇಂದು ಸೀಜ್ ಆಗಿರುವ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ಸಿಗರೇಟ್ಸ್​
/newsfirstlive-kannada/media/post_attachments/wp-content/uploads/2025/01/DUPLICATE-CIGARETTE-2.jpg)
ಐಟಿಸಿ ಲೈಟ್ಸ್ ಬ್ರ್ಯಾಂಡ್​ನ ಮೂರು ಬಾಕ್ಸ್​ ನಕಲಿ ಸಿಗರೇಟ್​ ಸೀಜ್ ಮಾಡಲಾಗಿದೆ. ಪ್ರತಿಷ್ಠಿತ ಸಿಗರೇಟ್ ಬ್ರ್ಯಾಂಡ್​ನ್ನುನ ನಕಲು ಮಾಡಿ ಮಾರಾಟ ಮಾಡಲಾಗುತ್ತಿತ್ತು. ಕಾಂಬೋಡಿಯಾ, ಬಾಂಗ್ಲಾದೇಶ ಮೂಲಕ ನಕಲಿ ಸಿಗರೇಟ್ಸ್ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬೆಂಗಳೂರಿನ ನಕಲಿ ಸಿಗರೇಟ್​ ಡಿಸ್ಟ್ಟಿಬ್ಯೂಟ್ ಮಾಡ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಕೆಎಸ್​ ಲೇಔಟ್​ ಪೊಲೀಸರಿಂದ ಈ ಒಂದು ಆಪರೇಷನ್ ನಡೆದಿದ್ದು, ನಿಶಾಂತ್ ಹಾಗೂ ಶಕೀಲ್ ಎಂಬುವವರನ್ನು ಬಂಧನ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಶಬ್ಬೀರ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಕಲಿ ಸಿಗರೇಟ್ ಮಾರಾಟದ ಬಗ್ಗೆ ಕಂಪನಿಯ ಪ್ರತಿನಿಧಿಯೊಬ್ಬರು ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದಾಗ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕೇರಳ ಮೂಲದ ಬಂಧಿತ ಆರೋಪಿ ಶಕೀಲ್ ನಗಲಿ ಸಿಗರೇಟ್ ಜಾಲದ ಕಿಂಗ್​ಪಿನ್ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us