newsfirstkannada.com

ಸೇತುವೆ ಕಾಮಗಾರಿ ವೇಳೆ ಕೃಷ್ಣಾ ನದಿಯಲ್ಲಿ ವಿಷ್ಣುವಿನ ಹಳೆಯ ಮೂರ್ತಿ ಮತ್ತು ಶಿವಲಿಂಗ ಪತ್ತೆ!

Share :

Published February 6, 2024 at 12:47pm

Update February 6, 2024 at 12:48pm

  ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆ

  ಸೇತುವೆ ಕಾಮಗಾರಿ ವೇಳೆ ದೊರೆತ ವಿಗ್ರಹಗಳು

  ಶಂಖ ಚಕ್ರ ಹಿಡಿದಿರುವ ವಿಷ್ಣುವಿನ ಮೂರ್ತಿ

ರಾಯಚೂರು: ಕೃಷ್ಣಾ ನದಿಯಲ್ಲಿ ವಿಷ್ಣುವಿನ ಹಳೆಯ ಮೂರ್ತಿಗಳು ಮತ್ತು ಶಿವಲಿಂಗ ಪತ್ತೆಯಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆ ಕಾಮಗಾರಿ ವೇಳೆ ವಿಗ್ರಹಗಳು ದೊರೆತಿವೆ.

ರಾಯಚೂರು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಹಾದುಹೋಗುವ ಕೃಷ್ಣ ನದಿಯಲ್ಲಿ ಶಂಖ ಚಕ್ರ ಹಿಡಿದಿರುವ ವಿಷ್ಣುವಿನ ಮೂರ್ತಿ ಸಿಕ್ಕಿದೆ. ಸುತ್ತಲೂ ದಶಾವತಾರಗಳ ಕೆತ್ತನೆಯನ್ನು ಒಳಗೊಂಡ ವಿಗ್ರಹ ಇದಾಗಿದೆ. ಇದರ ಜೊತೆಗೆ ಹಳೆಯದಾದ ಒಂದು ಶಿವಲಿಂಗವೂ ಸಿಕ್ಕಿದೆ.

ನದಿಯಲ್ಲಿ ದೇವರ ಮೂರ್ತಿಗಳನ್ನು ಕಂಡ ಜನರು ಅಚ್ಚರಿಗೊಂಡಿದ್ದಾರೆ. ಬಹುಶಃ ಮೂರ್ತಿ ಒಡೆದ ಕಾರಣಕ್ಕೆ ನದಿಗೆ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಿಂದಲೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೇತುವೆ ಕಾಮಗಾರಿ ವೇಳೆ ಕೃಷ್ಣಾ ನದಿಯಲ್ಲಿ ವಿಷ್ಣುವಿನ ಹಳೆಯ ಮೂರ್ತಿ ಮತ್ತು ಶಿವಲಿಂಗ ಪತ್ತೆ!

https://newsfirstlive.com/wp-content/uploads/2024/02/Raichur.jpg

Load More