ದರ್ಶನ್​ ಮತ್ತು ಗ್ಯಾಂಗ್​ ತನಿಖೆ ವೇಳೆ ಮತ್ತೊಂದು ಸ್ಫೋಟಕ ಸಂಗತಿ ಬಾಯ್ಬಿಟ್ಟ ಆರೋಪಿಗಳು! ಮತ್ತೆ ಹುಡುಕಾಟ

author-image
AS Harshith
Updated On
ಕೊಲೆ ಕೇಸ್​ ತನಿಖೆಗೆ ಸಣ್ಣ ಟ್ವಿಸ್ಟ್, ಮತ್ತೋರ್ವ ಅರೆಸ್ಟ್.. ಪವಿತ್ರ ಗೌಡಗೆ ಶುರುವಾಯ್ತು ಢವಢವ..!
Advertisment
  • ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಂದ ‘ಡಿ’ ಗ್ಯಾಂಗ್
  • ಆ​ ಡಿವೈಸ್​ ಬಳಸಿ ರೇಣುಕಾನನ್ನು ಕೊಲೆ ಮಾಡಿದ ಆರೋಪಿಗಳು
  • ಅದೇನದು? ಎಲ್ಲಿ ಬಿಸಾಡಿದ್ದಾರೆ? ಪೊಲೀಸರಿಂದ ಹುಡುಕಾಟ

ರೇಣುಕಾಸ್ವಾಮಿಯನ್ನು ದರ್ಶನ್​ ಮತ್ತು ಗ್ಯಾಂಗ್​ ಚಿತ್ರಹಿಂಸೆ ನೀಡಿ ಕೊಂದಿದೆ. ಎಲೆಕ್ಟ್ರಿಕ್ ಮೆಗ್ಗರ್ ಡಿವೈಸ್ ಬಳಸಿ ರೇಣುಕಾಗೆ ಕರೆಂಟ್ ಶಾಕ್ ನೀಡಿ ಹತ್ಯೆ ಮಾಡಿದೆ. ಪೊಲೀಸರ ತನಿಖೆಯ ವೇಳೆ ನಿಜ ಸಂಗತಿ ಬೆಳಕಿಗೆ ಬಂದಿದೆ.

ಮೆಗ್ಗರ್ ಡಿವೈಸ್ ಎಲ್ಲಿದೆ?

ರೇಣುಕಾಸ್ವಾಮಿಯನ್ನು ಮರದ ತುಂಡು, ಹಗ್ಗ ಬಳಸಿ ಚಿತ್ರಹಿಂಸೆ ನೀಡಿ ಕೊಂದಿದ್ದಲ್ಲದೆ. ಎಲೆಕ್ಟ್ರಿಕ್​ ಮೆಗ್ಗರ್ ಡಿವೈಸ್ ಬಳಸಿ ಕರೆಂಟ್​ ಶಾಕ್​ ಕೂಡ ಕೊಡಲಾಗಿದೆ. ತನಿಖೆ ವೇಳೆ ಈ ವಿಚಾರ ಬಯಲಿಗೆ ಬಂದಂತೆ ಎಲ್ಲಾ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೃತ್ಯಕ್ಕೆ ಬಳಸಿದ ಎಲೆಕ್ಟ್ರಿಕ್​ ಮೆಗ್ಗರನ್ನು ಎಲ್ಲಿ ಬಿಸಾಡಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

publive-image

ಇದನ್ನೂ ಓದಿ: 6 ವರ್ಷಳಿಂದ ದರ್ಶನ್ ಹಳೇ ಮ್ಯಾನೇಜರ್ ಮಿಸ್ಸಿಂಗ್​.. ‘ಡಿ’ ಗ್ಯಾಂಗ್​ ಮೇಲೆ ಮತ್ತೊಂದು ಅನುಮಾನ!

ಆರೋಪಿಗಳು ಮೆಗ್ಗರನ್ನು ಮೈಸೂರಿಗೆ ಹೋಗುವಾಗ ಬಿಸಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೆಗ್ಗರ್ ಡಿವೈಸ್ ಎಲ್ಲಾದ್ರೂ ಮುಚ್ಚಿಟ್ಟಿದ್ದಾರಾ ಅಂತಾ ಪ್ರಶ್ನಿಸಿದ್ದಾರೆ. ಎ5 ಆರೋಪಿ ನಂದೀಶ್ ಹಾಗೂ ಇನ್ನೊಬ್ಬ ಆರೋಪಿಯನ್ನು ವಿಚಾರಣೆ ನಡೆಸಲಾಗಿದೆ. ಅಲ್ಲದೇ ಆರೋಪಿಗಳು ಬಳಸಿ ಬಿಸಾಡಿದ ಬಟ್ಟೆಗಾಗಿ ಶೋಧ ನಡೆಯುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿಗಿತ್ತು ಸೋಶಿಯಲ್ ಮೀಡಿಯಾ ಗೀಳು.. ಸ್ಕ್ರೀನ್ ಟೈಂ ಪರಿಶೀಲನೆ ವೇಳೆ ಸಿಕ್ಕಿತು ಅಚ್ಚರಿಯ ಮಾಹಿತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment