newsfirstkannada.com

ಪವನ್ ಕಲ್ಯಾಣ್ ನಟನೆಯ ಚಿತ್ರ ವೀಕ್ಷಣೆ ವೇಳೆ ಥಿಯೇಟರ್​​ನಲ್ಲಿ ಬೆಂಕಿ..! ವಿಡಿಯೋ

Share :

Published February 9, 2024 at 7:31am

  ಆಂಧ್ರಪ್ರದೇಶದ ನಂದ್ಯಾಲಯದ ಥಿಯೇಟರ್​ನಲ್ಲಿ ಘಟನೆ

  ಬೆಂಕಿ ಹೆಚ್ಚಿ ಹುಚ್ಚಾಟ ಮೆರೆದ ಅಭಿಮಾನಿಗಳು

  ಕೆಲ ಕಾಲ ಆತಂಕ ಸೃಷ್ಟಿ, ಸಿನಿ ವೀಕ್ಷಕರು ಕಂಗಾಲು

ಆಂಧ್ರಪ್ರದೇಶದ ನಂದ್ಯಾಲಯದ ಥಿಯೇಟರ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ತೆಲುಗಿನ ಪವರ್​​ ಸ್ಟಾರ್​​​ ಪವನ್ ಕಲ್ಯಾಣ್ ಅಭಿನಯದ ‘ಕ್ಯಾಮೆರಾಮ್ಯಾನ್ ಗಂಗಾ ಟು ರಾಂಬಾಬು’ ಚಿತ್ರದ ಮರು-ಬಿಡುಗಡೆಯಾಗಿದೆ.

ತಮ್ಮ ನೆಚ್ಚಿನ ಹೀರೋನ ಕಣ್ತುಂಬಿಕೊಳ್ಳಲು ಬಂದ ಪವನ್​ ಕಲ್ಯಾಣ್​ ಅಭಿಮಾನಿಗಳು ಕಾಗದದ ಚೂರುಗಳಿಗೆ ಬೆಂಕಿ ಹಚ್ಚಿ ಚಿತ್ರಮಂದಿರದಲ್ಲಿ ಹುಚ್ಚಾಟ ಮೆರೆದಿದ್ದಾರೆ. ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಥಿಯೇಟರ್​ನಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಕೊನೆಗೆ ಬೆಂಕಿಯನ್ನು ನಂದಿಸಲಾಗಿದೆ.

ಅಕ್ಟೋಬರ್ 18, 2012ರಂದು ಕ್ಯಾಮೆರಾಮ್ಯಾನ್ ಗಂಗಾ ಟು ರಾಂಬಾಬು ಸಿನಿಮಾ ರಿಲೀಸ್ ಆಗಿತ್ತು. 52 ಕೋಟಿ ಬಜೆಟ್​​ ಚಿತ್ರಕ್ಕೆ ಪುರಿ ಜಗ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದರು. ತಮ್ಮನಾ ಭಾಟಿಯಾ, ಪ್ರಕಾಶ್ ರಾಜ್ ಮೊದಲಾದ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವನ್ ಕಲ್ಯಾಣ್ ನಟನೆಯ ಚಿತ್ರ ವೀಕ್ಷಣೆ ವೇಳೆ ಥಿಯೇಟರ್​​ನಲ್ಲಿ ಬೆಂಕಿ..! ವಿಡಿಯೋ

https://newsfirstlive.com/wp-content/uploads/2024/02/PAWAN-KALYAN.jpg

Load More