newsfirstkannada.com

VIDEO: ಮದುವೆ ಮನೆಯ ಊಟಕ್ಕೆ ತಟ್ಟೆ ಸಿಗದ ಸಿಟ್ಟು.. ಕಲ್ಯಾಣ ಮಂಟಪದಲ್ಲಿ ಮಾರಾಮಾರಿ; ಆಗಿದ್ದೇನು?

Share :

Published February 11, 2024 at 3:55pm

  ಮದುವೆ ಸಮಾರಂಭದಲ್ಲಿ ವಧು ಮತ್ತು ವರನ ಕಡೆಯವರಿಂದ ಗಲಾಟೆ

  ಕುರ್ಚಿಯಿಂದ ಒಬ್ಬರಿಗೊಬ್ಬರು ಬಡಿದಾಡಿಕೊಂಡ ಕುಟುಂಬಸ್ಥರು

  ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ

ಲಕ್ನೋ: ಮದುವೆ ಎಂದರೆ ಕುಟುಂಬಸ್ಥರು ಅದೆಷ್ಟೋ ಖುಷಿಯಲ್ಲಿ ಇರುತ್ತಾರೆ. ಆದರೆ ಇಂತಹ ಅದ್ಧೂರಿ ಮದುವೆ ಸಮಾರಂಭದಲ್ಲಿ ಅಹಿತಕರ ಘಟನೆ ನಡೆದರೆ ಹೇಗೆ ಇರುತ್ತೆ. ಹೀಗೆ ಅದ್ಧೂರಿ ಮದುವೆ ಸಮಾರಂಭವೊಂದರಲ್ಲಿ ವಧು ಮತ್ತು ವರನ ಸಂಬಂಧಿಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನು ಓದಿ: BREAKING: ಭೀಕರ ಅಪಘಾತ.. KSRTC ಬಸ್‌ಗೆ ಗುದ್ದಿದ ಲಾರಿ; ರಕ್ತದ ಮಡುವಿನಲ್ಲಿ ನರಳಾಡಿದ ಮಹಿಳೆ

ಆರತಕ್ಷತೆಯ ಸಮಾರಂಭದಲ್ಲಿ ವಧು ಮತ್ತು ವರನ ಸಂಬಂಧಿಗಳು ಕುರ್ಚಿಯನ್ನು ಎತ್ತಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಮದುವೆಗೆ ಬಂದಿದ್ದ ಅತಿಥಿಗಳು ಊಟದ ತಟ್ಟೆ ಕಡಿಮೆ ಇದೆ ಅನ್ನೋ ಕಾರಣಕ್ಕೆ ಸಿಟ್ಟಿಗೆದ್ದು ಗಲಾಟೆ ಮಾಡ್ಕೊಂಡಿದ್ದಾರೆ. ಮಾತ್ರವಲ್ಲದೇ ಅಲ್ಲಿದ್ದ ವಸ್ತುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಈ ಮಾರಾಮಾರಿಯ ಸಂದರ್ಭದಲ್ಲಿ ಕೆಲವು ಮಹಿಳೆಯರು ಮಧ್ಯಪ್ರವೇಶಿಸಿದರೂ ಗಲಾಟೆಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಆದರೆ ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಮೀನಾಬಾದ್‌ ಪೊಲೀಸರು ಭೇಟಿ ನೀಡಿ ವಧು ಮತ್ತು ವರನ ಸಂಬಂಧಿಕರನ್ನು ಸಮಾಧಾನಪಡಿಸಿ ನಂತರ ಠಾಣೆಗೆ ಕರೆದೊಯ್ದಿದ್ದರು. ಆದರೆ ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ದೂರು ದಾಖಲಾದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಮದುವೆ ಮನೆಯ ಊಟಕ್ಕೆ ತಟ್ಟೆ ಸಿಗದ ಸಿಟ್ಟು.. ಕಲ್ಯಾಣ ಮಂಟಪದಲ್ಲಿ ಮಾರಾಮಾರಿ; ಆಗಿದ್ದೇನು?

https://newsfirstlive.com/wp-content/uploads/2024/02/fight-5.jpg

Load More