ರಾಜ್ಯ ಬಿಜೆಪಿಯ ಈ ನಾಯಕ ಮುಂದೆ ಮುಖ್ಯಮಂತ್ರಿ ಆಗಲಿ -ಡಿ.ವಿ.ಸದಾನಂದಗೌಡ ಆಶಯ

author-image
Ganesh
Updated On
ಡಿ.ವಿ ಸದಾನಂದಗೌಡರಿಗೆ ಕಾಂಗ್ರೆಸ್‌ ಆಫರ್‌ ಕೊಟ್ಟ ಬೆನ್ನಲ್ಲೇ RSS ಅಲರ್ಟ್‌.. ಸಂಧಾನ ಏನಾಯ್ತು?
Advertisment
  • ‘ಯತ್ನಾಳ್, ಸೋಮಣ್ಣ ಅಸಮಾಧಾನ ಸರಿಪಡಿಸುವ ಶಕ್ತಿ ಇದೆ’
  • ‘ಅಶೋಕ್ ಮೇಲೆ ಕೋಪ ಇಲ್ಲ, ಕೆಲವರ ಮೇಲೆ ಸ್ವಲ್ಪ ಬೇಸರವಿದೆ’
  • ಬಿಜೆಪಿ ಬಳಿ ಬೆಣ್ಣೆ ಇದೆ, ಅತೃಪ್ತರಿಗೆ ಹೆದರುವ ಅಗತ್ಯ ಇಲ್ಲ-ಡಿವಿಎಸ್

ಯೋಗ್ಯರಾದವರನ್ನೇ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ನಾನು, ಅಶೋಕ್ ಎಲ್ಲರೂ ಸೇರಿ ಒಟ್ಟಾಗಿ ದುಡಿಯುತ್ತೇವೆ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸದಾನಂದಗೌಡ, ಆರ್.ಅಶೋಕ್, ಬಿ.ವೈ ವಿಜಯೇಂದ್ರ ಎಲ್ಲರ ವಿಶ್ವಾಸಗಳಿಸುವ ಕೆಲಸ ಮಾಡುತ್ತಿದ್ದಾರೆ. ವಿಧಾನಸಭೆಯ ಒಳಗೆ, ಹೊರಗೆ ಕೆಲಸ ಮಾಡಿದ ಅನುಭವ ಅಶೋಕ್​ಗೆ ಇದೆ. ಪಕ್ಷದಲ್ಲಿದ್ದ ಆಂತರಿಕ ಗೊಂದಲವನ್ನು ನಿಭಾಯಿಸುವ ಶಕ್ತಿ ಅವರಿಗೆ ಇದೆ. ಮುಂದೆ ಅಶೋಕ್ ಸಿಎಂ ಆಗಲಿ, ಅವರಿಗೆ ಅನುಭವದ ಕೊರತೆ ಇಲ್ಲ ಎಂದರು.

ಹಿರಿಯ ನಾಯಕರಾದ ಯತ್ನಾಳ್, ವಿ.ಸೋಮಣ್ಣ ಅಸಮಾಧಾನವನ್ನು ಸರಿಪಡಿಸುವ ಶಕ್ತಿ ಇದೆ. ಅಶೋಕ್ ಮೇಲೆ ಕೋಪ ಇಲ್ಲ, ಆದರೆ ಕೆಲವರ ಮೇಲೆ ಸ್ವಲ್ಪ ಬೇಸರವಿದೆ. ಅದೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿ ಪಕ್ಷಕ್ಕೆ ಇದೆ. ನಮ್ಮ ಬಳಿ ಬೆಣ್ಣೆ ಇದೆ, ಅದನ್ನು ಹಚ್ಚಿ ಅತೃಪ್ತರನ್ನು ಸಮಾಧಾನಪಡಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment