/newsfirstlive-kannada/media/post_attachments/wp-content/uploads/2024/04/Rishabh-Shetty.jpg)
ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್​​ ಅವರು 2021ರಲ್ಲಿ ಎಚ್​ಎಸ್​ಆರ್​ ಲೇಔಟ್​ನ ಮನೆಯನ್ನು ಮಾರಾಟ ಮಾಡಿದ್ದರು. ನಿರ್ದೇಶಕ ರಿಷಬ್​ ಶೆಟ್ಟಿಯವರು ಆ ಮನೆಯನ್ನು ಖರೀದಿದ್ದರು.
ದ್ವಾರಕೀಶ್​​ ನಿರ್ಮಾಣದಲ್ಲಿ ‘ಆಯುಷ್ಮಾನ್​ಭವ’ ಸಿನಿಮಾ ಮೂಡಿ ಬಂದಿತ್ತು. ಆದರೆ ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿಲ್ಲ. ಹೀಗಾಗಿ ಅವರ ಪುತ್ರ ಯೋಗೀಶ್​ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ಸುದ್ದಿ ವರದಿಯಾಗಿತ್ತು.
ದ್ವಾರಕೀಶ್ 105 ಕೋಟಿ ರೂಗೆ ತಮ್ಮ ಮನೆಯನ್ನು ಮಾರಿದ್ದರು ಎಂಬ ಸುದ್ದಿ ಹರಿದಾಡಿತ್ತು. ನಟ, ನಿರ್ದೇಶಕ ರಿಷಬ್​ ಶೆಟ್ಟಿಯವರು ಈ ಮನೆಯನ್ನು ಖರೀದಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/04/Actor-Dwarakish-Death.jpg)
ದ್ವಾರಕೀಶ್​ 81ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಅನೇಕರು ಕಂಬಿನಿ ಮಿಡಿದಿದ್ದಾರೆ.
ನಾಳೆ ದ್ವಾರಕೀಶ್​ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us