/newsfirstlive-kannada/media/post_attachments/wp-content/uploads/2025/03/KOHLI_Ronaldo.jpg)
ಸೆಂಚುರಿ ಹೀರೋ ವಿರಾಟ್ ಕೊಹ್ಲಿ, 18 ವರ್ಷಗಳಿಂದ ಐಪಿಎಲ್​ನಲ್ಲಿ ರನ್​ಗಳ ಬೆಟ್ಟವೇ ನಿರ್ಮಿಸ್ತಿದ್ದಾರೆ. ಮೈದಾನದಲ್ಲಿ ಅವರ ಬ್ಯಾಟಿಂಗ್ ಸ್ಟೈಲ್​ಗೆ ಫಿದಾ ಆಗದವರೇ ಇಲ್ಲ. ಅವರ ವ್ಯಕ್ತಿತ್ವ, ವರ್ತನೆ, ಗೆಳೆತನ ಎಲ್ಲವನ್ನು ಕ್ರಿಕೆಟರ್ಸ್​ ಆಗಾಗ ಸಂದರ್ಶನದಲ್ಲಿ ಹೇಳುತ್ತಿರುತ್ತಾರೆ. ಅದೇ ರೀತಿ ಇದೀಗ ಕೆಕೆಆರ್​ ತಂಡದ ಕೋಚ್, ವೆಸ್ಟ್​ ಇಂಡೀಸ್ ಮಾಜಿ ಪ್ಲೇಯರ್ ಡ್ವೇನ್ ಬ್ರಾವೋ, ವಿರಾಟ್ ಕೊಹ್ಲಿ ಅವರನ್ನು ಕ್ರಿಕೆಟ್​ನ ಕ್ರಿಸ್ಟಿಯಾನೋ ರೊನಾಲ್ಡೊ ಎಂದು ಕರೆದಿದ್ದಾರೆ.
ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಕೆಕೆಆರ್ ಕೋಚ್ ಡ್ವೇನ್ ಬ್ರಾವೋ ಅವರು ವಿರಾಟ್​ ಕೊಹ್ಲಿಯ ವ್ಯಕ್ತಿತ್ವ, ಗೆಳೆತನ, ಅವರ ಆಟದ ಕಮಿಟ್​ಮೆಂಟ್​ಗಳನ್ನ ಗುಣಗಾನ ಮಾಡಿದ್ದಾರೆ. ಅಲ್ಲದೇ ಅವರ ಜೊತೆ ಕಳೆದಿರುವ ಸಮಯವನ್ನು ವಿವರಿಸಿದ್ದಾರೆ. ಮೊದಲು ಚೆನ್ನೈ ತಂಡದಲ್ಲಿದ್ದ ಬ್ರಾವೋ ಈ ಸೀಸನ್​ನಲ್ಲಿ ಶಾರುಕ್ ಖಾನ್ ಪ್ರೀತಿ ಬೆಳೆಸಿ ಕೆಕೆಆರ್ ತಂಡದ ಕೋಚ್ ಆಗಿದ್ದಾರೆ.
ಇದನ್ನೂ ಓದಿ: ಕ್ಯಾಪ್ಟನ್ ರೋಹಿತ್ ಔಟ್.. ವಿರಾಟ್ ಕೊಹ್ಲಿ ಇನ್; ಟೀಮ್ ಇಂಡಿಯಾದಲ್ಲಿ ಬದಲಾವಣೆ?
/newsfirstlive-kannada/media/post_attachments/wp-content/uploads/2025/03/KOHLI_Ronaldo_1.jpg)
ಸದ್ಯ ವಿರಾಟ್ ಕೊಹ್ಲಿ ಕುರಿತು ಮಾತನಾಡಿರುವ ಡ್ವೇನ್ ಬ್ರಾವೋ, ಎಂಎಸ್ ಧೋನಿ, ರೈನಾ, ಪಾಂಡ್ಯ ಜೊತೆ ಇದ್ದಷ್ಟು ಸಂಪರ್ಕ ಕೊಹ್ಲಿ ಜೊತೆ ನನಗೆ ಇಲ್ಲದಿದ್ದರೂ ಅವರ ಬಗ್ಗೆ ಗೌರವ ಇದೆ. ಒಂದೇ ತಂಡದಲ್ಲಿ ನಾವಿಬ್ಬರು ಆಡದಿದ್ದರು ನಾವು ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ. ಒಮ್ಮೆ ಭಾರತದ ಆಟಗಾರನ ಮನೆಗೆ ಡಿನ್ನರ್ ಪಾರ್ಟಿಗೆಂದು ಹೋಗಿದ್ದೇವು. ಇದರಲ್ಲಿ ಕೊಹ್ಲಿ ಕೂಡ ಭಾಗವಹಿಸಿದ್ದರು. ಆದರೆ ಈ ಪಾರ್ಟಿಯಲ್ಲಿ ನನ್ನ ಹಾಡು, ವಿಡಿಯೋಗಳನ್ನ ವಿಶೇಷವಾಗಿ ಪ್ಲೇ ಮಾಡಿಸಿದರು. ಅಲ್ಲಿಂದ ನಮ್ಮ ನಡುವೆ ಒಳ್ಳೆಯ ಗೆಳೆತನ, ಬಾಂಡಿಂಗ್ ಇದೆ ಎಂದು ಹೇಳಿದ್ದಾರೆ.
ಪೋರ್ಚುಗೀಸ್ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಅವರಂತೆ ಕ್ರಿಕೆಟ್​ನಲ್ಲಿ ಕೊಹ್ಲಿ. ಏಕೆಂದರೆ ಕೆಲಸ ಹಾಗೂ ಅದರ ಮೇಲಿನ ಶ್ರೆದ್ಧೆ ಇಷ್ಟವಾಗುತ್ತದೆ. ಫುಟ್ಬಾಲ್ ಸ್ಟಾರ್ ರೊನಾಲ್ಡ್​ ಅವರಂತೆ ಕೊಹ್ಲಿ ನಿರಂತರವಾಗಿ ಇನ್ನಷ್ಟು ಚೆನ್ನಾಗಿ ಆಡಲು ತಯಾರು ಮಾಡಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಫಿಟ್ನೆಸ್​, ಡಿಸಿಪ್ಲೀನ್, ಆಟದ ಬಗ್ಗೆ ಅವರಿಗೆ ಇರುವ ಕಮಿಟ್​ಮೆಂಟ್​ ಅದ್ಭುತ. ಕ್ರಿಕೆಟ್​ನಲ್ಲಿ ಯಶಸ್ಸು ಕಾಣಬೇಕು ಎನ್ನುವ ಅವರ ಹಸಿವು, ಒತ್ತಡದಲ್ಲಿ ನೀಡುವ ಪರ್ಫಾಮೆನ್ಸ್, ಸಾಮರ್ಥ್ಯ ಈ ಎಲ್ಲವೂ ಕೊಹ್ಲಿ ಅವರನ್ನು ಕ್ರಿಕೆಟ್​ನ ರೊನಾಲ್ಡೊ ಎಂದು ಕರೆಯಲು ಮುಖ್ಯವಾಗುತ್ತವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us