/newsfirstlive-kannada/media/post_attachments/wp-content/uploads/2024/11/D-Y-CHANDACHOODA-2.jpg)
ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಢ ಅವರ ಸೇವಾವಧಿ ನಾಳೆಗೆ ಕೊನೆಗೊಳ್ಳಲಿದೆ. ಸರ್ವೋಚ್ಛ ನ್ಯಾಯಾಲಯದಲ್ಲಿ ಇಂದೇ ಅವರ ಕೊನೆಯ ದಿನವಾಗಿದ್ದರಿಂದ ಭಾವುಕ ವಿದಾಯವನ್ನು ಹೇಳಿ ತಮ್ಮ ಎರಡು ವರ್ಷದ ಸೇವಾವಧಿಯನ್ನು ಇಲ್ಲಿಗೆ ನಿಲ್ಲಿಸಿದ್ದಾರೆ. ಸಿಜೆಐ ಚಂದ್ರಚೂಢ ಅವರು ಇಂದು ಕೊನೆಯದಾಗಿ ತಮ್ಮ ಸಹೋದ್ಯೋಗಿಗಳಿಗೆ ಹಾಗೂ ದೇಶದ ಜನರಿಗೆ ವಂದಿಸಿ ನಿರ್ಗಮಿಸಿದ್ದಾರೆ. ಸೋಮವಾರದಿಂದ ಅವರ ಸ್ಥಾನಕ್ಕೆ ಜಸ್ಟೀಸ್ ಸಂಜೀವ್ ಖನ್ನಾ ಬರಲಿದ್ದಾರೆ. ಇಷ್ಟು ವರ್ಷಗಳ ಕಾಲ ಸುದೀರ್ಘ ನ್ಯಾಯಾಂಗ ಸೇವೆ ಸಲ್ಲಿಸಿರುವ ಡಿ ವೈ ಚಂದ್ರಚೂಢ ಅವರು ಮುಂದಿನ ದಿನಗಳನ್ನು ಹೇಗೆ ಕಳೆಯಲಿದ್ದಾರೆ. ಒಬ್ಬ ಸಿಜೆಐ ನಿವೃತ್ತಿಯಾದ ಬಳಿಕ ಅವರು ಏನೆಲ್ಲಾ ಅಧಿಕಾರಗಳನ್ನು ಕಳೆದುಕೊಳ್ಳುತ್ತಾರೆ ಎಂಬುದದರ ಒಂದು ಪಕ್ಷಿನೋಟವನ್ನು ಬೀರುವುದಾದ್ರೆ.
ಕಾನೂನು ಅಭ್ಯಾಸ ಮಾಡುವಂತಿಲ್ಲ
ಒಬ್ಬ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಪಾತ್ರ ನ್ಯಾಯವನ್ನು ಹಾಗೂ ಸಂವಿಧಾನವನ್ನು ಎತ್ತಿಹಿಡಿಯುವದೇ ಆಗಿರುತ್ತದೆ. ಒಂದು ಬಾರಿ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಾಮೂರ್ತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಮೇಲೆ ಅವರು ಮುಂದೆ ದೇಶದ ಯಾವುದೇ ಕೋರ್ಟ್​​ನಲ್ಲಿ ಲಾ ಪ್ರಾಕ್ಟಿಸ್ ಮಾಡುವಂತಿಲ್ಲ. ಸಂವಿಧಾನದ ಅನುಚ್ಛೇದ 124(7) ರ ಪ್ರಕಾರ ಒಂದು ಬಾರಿ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮೇಲೆ ಅವರಿಗೆ ಲಾ ಪ್ರಾಕ್ಟಿಸ್ ಮಾಡುವದಕ್ಕೆ ಸದಾಕಾಲ ನಿರ್ಭಂಧವಿದೆ.
ಯಾಕೆ ಇಂತಹ ನಿಷೇಧ ಹೇರಲಾಗಿದೆ?
ನಿವೃತ್ತಿಯ ನಂತರ ಕಾನೂನು ಸೇವೆ ಸಲ್ಲಿಸುವ ಅವಕಾಶವನ್ನು ನಿವೃತ್ತ ಸಿಜೆಐಗಳಿಗೆ ನೀಡಲಾಗಿಲ್ಲ. ಅದಕ್ಕೆ ಕಾರಣ ಜನರ ವಿಶ್ವಾಸವನ್ನು ಕಾಯ್ದಿಟ್ಟುಕೊಳ್ಳುವ ಹಾಗೂ ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ನಿಷೇಧವನ್ನು ಹೇರಲಾಗಿದೆ. ನ್ಯಾಯಾಂಗ ವ್ಯವಸ್ಥೆ ಈ ದೇಶದ ಸಂವಿಧಾನದ ಪ್ರಮುಖ ಕಂಬವಿದ್ದಂತೆ. ಸಂವಿಧಾನ ಎನ್ನುವುದು ವಿಶ್ವಾಸರ್ಹತೆಯನ್ನು ಅವಲಂಬಿಸಿದೆ. ಅದು ಕೂಡ ನಿಷ್ಪಕ್ಷಪಾತವಾಗಿ. ನಿವೃತ್ತ ನ್ಯಾಯಮೂರ್ತಿಗಳು ವಕೀಲ ವೃತ್ತಿಯನ್ನು ಮಾಡುವುದರಿಂದ ಹಲವು ವಿಚಾರಗಳಲ್ಲಿ ಅನುಮಾನಗಳು ಮೂಡುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ, ಅವರಿಗೆ ಈ ಒಂದು ನಿರ್ಬಂಧವನ್ನು ಹೇರಲಾಗಿದೆ.
ಸಂಘರ್ಷಗಳನ್ನು ತಪ್ಪಿಸಲು ಹಾಗೂ ಸಂಭಾವ್ಯ ಪಕ್ಷಪಾತಗಳನ್ನು ನಿಯಂತ್ರಿಸಲು ಈ ಒಂದು ನಿಷೇಧವನ್ನು ಹೇರಲಾಗುತ್ತದೆ. ಅದು ಮಾತ್ರವಲ್ಲ ಸಿಜೆಐನ ಘನೆತೆಯನ್ನು ಕಾಪಾಡಲು ಕೂಡ ಈ ಒಂದು ನಿಷೇಧವಿದೆ. ಸಿಜೆಐ ಆಗಿ ಕಾರ್ಯನಿರ್ವಹಿಸಿದವರು ಮುಂದೆ ವಕೀಲರಾಗಿ ಕಾರ್ಯನಿರ್ವಹಿಸುವುದರಿಂದ ಅದು ಘನತೆ ಕೊಂಚ ದಕ್ಕೆ ತಂದಂತಾಗುತ್ತದೆ ಈ ಕಾರಣದಿಂದಾಗಿ ಆ ಸ್ಥಾನದ ಘನತೆ ಕಾಪಾಡಿಕೊಳ್ಳುವುದರಿಂದಾಗಿ ಈ ನಿಷೇಧವಿದೆ. ಮುಂದೆ ಯಾವುದೇ ಪ್ರಕರಣಗಳ ಮೇಲೆ ಪ್ರಭಾವ ಬೀರದಿರಲಿ ಅನ್ನುವ ಉದ್ದೇಶದಿಂದಲೂ ಈ ಒಂದು ನಿರ್ಬಂಧವನ್ನು ವಿಧಿಸಲಾಗಿದೆ.
ಇದನ್ನೂ ಓದಿ:VIDEO: ಭಾವುಕ ವಿದಾಯ.. ಸೇವಾ ಅವಧಿ ಮುಗಿಸಿದ ಸುಪ್ರೀಂಕೋರ್ಟ್ CJI ಚಂದ್ರಚೂಢ ಹೇಳಿದ್ದೇನು?
ನಿವೃತ್ತಗೊಂಡ ಮುಖ್ಯ ನ್ಯಾಯಮೂರ್ತಿಗಳು ಏನೆಲ್ಲಾ ಮಾಡಬಹುದು?
ಮಧ್ಯಸ್ತಿಕೆ ವಹಿಸಬಹುದು: ಕೆಲವು ಕ್ಲಿಷ್ಟಕರವಾದ ಕಾನೂನು ಸಂಘರ್ಷಗಳನ್ನು ಬಗೆಹರಿಸಲು ಅಂತ ಹೀಗೆ ನಿವೃತ್ತಗೊಂಡ ಸಿಜೆಐ ಅವರು ಮಧ್ಯಸ್ತಿಕೆ ವಹಿಸಬಹುದು. ಮಧ್ಯಸ್ತಿಕೆ ಹಾಗೂ ರಾಜಿಸಂಧಾನ ನಿಯಮದನ್ವಯ ನಿವೃತ್ತ ನ್ಯಾಯಮೂರ್ತಿಗಳಿಗೆ ಈ ಒಂದು ಅವಕಾಶವಿದೆ.
ನ್ಯಾಯಮಂಡಳಿ ಹಾಗೂ ಆಯೋಗಗಳಿಗೆ ಮಖ್ಯಸ್ಥರಾಗಬಹುದು: ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನ್ಯಾಯಮೂರ್ತಿಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರು ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ನ್ಯಾಯಾಧೀಶರು ಆಗಿ ನೇಮಕಗೊಳ್ಳಬಹುದು.
ಇದನ್ನೂ ಓದಿ:AMUಗೆ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ; ಸುಪ್ರೀಂ ಕೋರ್ಟ್​ನಿಂದ ಮಹತ್ವದ ತೀರ್ಪು
ದೇಶದಲ್ಲಿ ಅಕಾಡಮಿಕ್ ಹಾಗೂ ಶೈಕ್ಷಣಿಕ ಸೇವೆ ಸಲ್ಲಿಸಬಹುದು: ನಿವೃತ್ತಿಗೊಂಡ ಅನೇಕ ನ್ಯಾಯಮೂರ್ತಿಗಳು ತಮ್ಮ ಜ್ಞಾನವನ್ನ ಹಾಗೂ ಅನುಭವವನ್ನ ಕಾನೂನು ಶಾಲೆ ಹಾಗೂ ಕಾಲೇಜುಗಳಲ್ಲಿ ಹಂಚಿಕೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಹಾದಿಯನ್ನು ತೋರುತ್ತಾರೆ ಅಂತಹ ಕಾರ್ಯಗಳನ್ನು ಮಾಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us