/newsfirstlive-kannada/media/post_attachments/wp-content/uploads/2024/01/IND_PASSPORT.jpg)
ನವದೆಹಲಿ: ಭಾರತ ಸರ್ಕಾರ ಪಾಸ್‌ಪೋರ್ಟ್ ಸೇವೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನ ಅಳವಡಿಸಿಕೊಂಡಿದೆ. ಚಿಪ್-ಆಧಾರಿತ E ಪಾಸ್‌ಪೋರ್ಟ್ ಸೇವೆಯನ್ನು ಆರಂಭಿಸಿದೆ. ರಾಷ್ಟ್ರದ ಭದ್ರತೆ, ವಲಸೆ ಪ್ರಕ್ರಿಯೆ ಮತ್ತು ವಿದೇಶ ಪ್ರಯಾಣದಲ್ಲಿ ಇದು ಬಹುಮುಖ್ಯ ಪಾತ್ರವಹಿಸಲಿದೆ.
ವಿಶ್ವದ ಹೈ-ಟೆಕ್, ಚಿಪ್-ಆಧಾರಿತ ಬಯೋಮೆಟ್ರಿಕ್ E-ಪಾಸ್‌ಪೋರ್ಟ್‌ಗಳಿಗೆ ಭಾರತ ಚಾಲನೆ ನೀಡಿದೆ. ಇದರಿಂದ ಭಾರತವೂ ಸೇರಿದಂತೆ ಅಮೆರಿಕಾ, ಕೆನಡಾ, ಜಪಾನ್, ಫ್ರಾನ್ಸ್ ಸೇರಿದಂತೆ 120 ದೇಶಗಳಿಗೆ ಪ್ರಯಾಣಿಸಲು ಭಾರತೀಯರಿಗೆ ಅತ್ಯಾಧುನಿಕ ಪಾಸ್‌ಪೋರ್ಟ್‌ನಿಂದ ಅನುಮತಿ ನೀಡಲಾಗುತ್ತದೆ.
E-ಪಾಸ್‌ಪೋರ್ಟ್‌ನ ಹಿಂಬದಿಯಲ್ಲಿ RFID (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್) ಚಿಪ್ ಅಳವಡಿಸಲಾಗುತ್ತದೆ. ಈ ಚಿಪ್‌ನಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ವ್ಯಕ್ತಿಯ ಮುಖ ಗುರುತಿಸುವಿಕೆ, ಬೆರಳಚ್ಚುಗಳು ಮತ್ತು ವೈಯಕ್ತಿಕ ವಿವರಗಳು ಇದರಲ್ಲಿ ಒಳಗೊಂಡಿರುತ್ತದೆ.
ಪ್ರಯಾಣಿಕರಿಗೆ ಏನು ಉಪಯೋಗ?
E-ಪಾಸ್‌ಪೋರ್ಟ್‌ನಿಂದ ಅತ್ಯಂತ ವೇಗವಾಗಿ ವಲಸೆ ಪ್ರಕ್ರಿಯೆ ಮುಗಿಸಬಹುದು. ಪ್ರಯಾಣಿಕರು ಸಾಲಿನಲ್ಲಿ ನಿಲ್ಲುವ ಮತ್ತು ಗಡಿಯಲ್ಲಿ ಪರಿಶೀಲಿಸುವ ಪ್ರಕ್ರಿಯೆ ಕೇವಲ ಒಂದೇ ಸೆಕೆಂಡ್‌ನಲ್ಲಿ ಮುಗಿಸುವ ಅವಕಾಶಗಳಿದೆ.
ದಾಖಲಾತಿಗಳ ಪರಿಶೀಲನೆಗೆ ಬಹಳಷ್ಟು ಸಮಯ ತೆಗೆದುಕೊಳ್ಳುವುದನ್ನ ತಪ್ಪಿಸಲು ಹಾಗೂ ಭವಿಷ್ಯದ ರಾಷ್ಟ್ರದ ಭದ್ರತೆಯ ದೃಷ್ಟಿಕೋನದಲ್ಲೂ ಈ ವ್ಯವಸ್ಥೆಯನ್ನ ಜಾರಿಗೊಳಿಸಲಾಗಿದೆ. ಇದು ಭಾರತೀಯರಿಗೆ ಸಮಯ, ಸುರಕ್ಷತೆ ಮತ್ತು ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಲಭಗೊಳಿಸುತ್ತದೆ.
ಇದನ್ನೂ ಓದಿ: ಪಾಪಿ ಪಾಕ್ ಬೆನ್ನಿಗೆ ನಿಂತ ಟರ್ಕಿಗೆ ಬಿಸಿ ಮುಟ್ಟಿಸಿದ ಭಾರತೀಯರು.. ಬಾಯ್ಕಾಟ್ ಯುದ್ಧ ಆರಂಭ
ಭಾರತದ ಯಾವ ನಗರದಲ್ಲಿ E-ಪಾಸ್‌ಪೋರ್ಟ್?
ನಾಗ್ಪುರ, ಭುವನೇಶ್ವರ, ಜಮ್ಮು, ಗೋವಾ, ಶಿಮ್ಲಾ, ರಾಯ್‌ಪುರ, ಅಮೃತಸರ, ಜೈಪುರ, ಚೆನ್ನೈ, ಹೈದರಾಬಾದ್, ಸೂರತ್, ರಾಂಚಿ ಮತ್ತು ದೆಹಲಿ.
ಕಳೆದ ಏಪ್ರಿಲ್ 2024ರಲ್ಲೇ ಭಾರತ ಸರ್ಕಾರ ಪಾಸ್‌ಪೋರ್ಟ್ ಸೇವಾ ಪ್ರೊಗ್ರಾಂ 2.O ಆರಂಭಿಸಿತ್ತು. ಸದ್ಯಕ್ಕೆ ದೇಶದ 13 ನಗರಗಳಲ್ಲಿ ಜಾಗತಿಕ ಗುಣಮಟ್ಟದ E ಪಾಸ್‌ಪೋರ್ಟ್ ಸೇವೆ ಶುರುವಾಗಿದೆ. 2025ರಲ್ಲೇ ಇಡೀ ದೇಶಾದ್ಯಂತ ಈ ಹೈ-ಟೆಕ್ ಪಾಸ್‌ಪೋರ್ಟ್ ಪರಿಚಯಿಸುವ ಗುರಿ ಹೊಂದಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ