ಪಾಠಕ್ಕೆ ಚಕ್ಕರ್​.. ನಿದ್ದೆಗೆ ಹಾಜರ್: ಶಾಲೆಯಲ್ಲಿಯೇ ಶಿಕ್ಷಕಿಯ ಗಡದ್ದಾದ ನಿದ್ದೆ: ಮಕ್ಕಳು ಮಾಡಿದ್ದೇನು?

author-image
Gopal Kulkarni
Updated On
ಪಾಠಕ್ಕೆ ಚಕ್ಕರ್​.. ನಿದ್ದೆಗೆ ಹಾಜರ್: ಶಾಲೆಯಲ್ಲಿಯೇ ಶಿಕ್ಷಕಿಯ ಗಡದ್ದಾದ ನಿದ್ದೆ: ಮಕ್ಕಳು ಮಾಡಿದ್ದೇನು?
Advertisment
  • ಶಾಲೆಯಲ್ಲಿ ಪಾಠ ಮಾಡದೇ ಗಡದ್ದಾಗಿ ನಿದ್ದೆ ಹೊಡೆದ ಟೀಚರಮ್ಮ
  • ಮಲಗಿದ ಸರ್ಕಾರಿ ಶಿಕ್ಷಕಿಯ ಸುತ್ತ ಕುಳಿತು ಗಾಳಿ ಬೀಸಿದ ಶಾಲಾ ಮಕ್ಕಳು
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್, ನೆಟ್ಟಿಗರಿಂದ ಆಕ್ರೋಶ

ಅಲಿಘಡ: ಶಾಲಾ ಶಿಕ್ಷಕಿಯೊಬ್ಬರು, ಶಾಲಾ ಸಮಯದಲ್ಲಿ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದ ಒಂದು ನಾಚಿಗೇಡಿ ಘಟನೆಯು ಉತ್ತರ ಪ್ರದೇಶದ ಅಲಿಘಢನಲ್ಲಿ ನಡೆದಿದೆ. ಅಲಿಘಡ ಜಿಲ್ಲೆಯ ಧನಿಪುರ್ ಬ್ಲಾಕ್​ನ ಗೋಕುಲಪುರ ಎಂಬ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಶಿಕ್ಷಕಿ ಪಾಠದ ಸಮದಯಲ್ಲಿ ನಿದ್ರೆಗೆ ಜಾರಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಶಿಕ್ಷಕಿಯ ಬೇಜಾಬ್ದಾರಿತನಕ್ಕೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡದಲ್ಲಿ ಮನಕಲಕುವ ಘಟನೆ.. ಊಟನೂ ತಿನ್ನದೇ ಮಾಲೀಕಗಾಗಿ ಕಾಯುತ್ತಿವೆ ನಾಯಿಗಳು

ಮಲಗಿದ ಶಿಕ್ಷಕಿಗೆ ಗಾಳಿ ಬೀಸಿದ ವಿದ್ಯಾರ್ಥಿಗಳು
ಒಂದು ಕಡೆ ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಗಡದ್ದಾಗಿ ಶಿಕ್ಷಕಿ ನಿದ್ದೆ ಹೊಡೆಯುತ್ತಿದ್ದರೆ ಮತ್ತೊಂದು ಕಡೆ ಸುತ್ತಲೂ ನಿಂತ ಮಕ್ಕಳು ಬೀಸಣಿಕೆಯಿಂದ ಆಕೆಗೆ ಗಾಳಿ ಬೀಸುತ್ತಿರುವುದು, ನಮ್ಮ ಹಳ್ಳಿಗಳಲ್ಲಿ ಇರುವ ಶಿಕ್ಷಣದ ವ್ಯವಸ್ಥೆಗೆ ಹಿಡದ ಕೈಗನ್ನಡಿಯಂತೆ ಕಾಣುತ್ತಿತ್ತು. ಯಾವಾಗ ಈ ವಿಡಿಯೋದ ದೊಡ್ಡದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಯ್ತೋ, ವಿಡಿಯೋ ಅಲ್ಲಿ ಕಲಿಯುತ್ತಿರುವ ಪೋಷಕರ ಕಣ್ಣಿಗೆ ಬಿತ್ತೋ ಶಿಕ್ಷಕಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ನಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ಸಿಗಲಿ ಅನ್ನೋ ಉದ್ದೇಶದಿಂದ ಶಾಲೆಗೆ ಕಳುಹಿಸುತ್ತೇವೆ. ಅವರ ಭವಿಷ್ಯವನ್ನು ರೂಪಿಸಬೇಕಾದ ಶಿಕ್ಷಕಿಯೇ ಹೀಗೆ ಶಾಲಾ ಸಮಯದಲ್ಲಿ ನಿದ್ದೆಗೆ ಜಾರಿ ಮಕ್ಕಳಿಂದ ಚಾಮರವನ್ನು ಬೀಸಿಕೊಂಡು ಆರಾಮಾಗಿ ಮಲಗಿದ್ರೆ ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ. ಈ ಒಂದು ಘಟನೆ ನಡೆದಿದ್ದು ಸರ್ಕಾರಿ ಶಾಲೆಯಲ್ಲಿ, ಸರ್ಕಾರಿ ಶಾಲೆಗೆ ಮಕ್ಕಳು ಬರಲ್ಲ ಎಂದು ಬೊಬ್ಬೆ ಹೊಡೆಯುವವರು ಯಾಕೆ ಬರೋದಿಲ್ಲ ಅನ್ನೋದನ್ನ ಕೂಡ ವಿಚಾರ ಮಾಡಬೇಕು, ಇಂತಹ ಬೇಜವಾಬ್ದಾರಿ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿದ್ರೆ ಯಾರು ತಾನೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದೆ ಬರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment