/newsfirstlive-kannada/media/post_attachments/wp-content/uploads/2025/04/eagle2.jpg)
ಕಾಸರಗೋಡು: ಹದ್ದೊಂದು ಪರೀಕ್ಷಾರ್ಥಿಯೊಬ್ಬರ ಹಾಲ್ ಟಿಕೆಟ್ ಕದ್ದೊಯ್ದಿರುವ ಅಚ್ಚರಿ ಘಟನೆ ಕೇರಳದ ಕಾಸರಗೋಡಿನ ಶಾಲೆಯಲ್ಲಿ ನಡೆದಿದೆ.
ಇದನ್ನೂ ಓದಿ: 9 ಸಾವಿರಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳು.. SSLC ಪಾಸ್ ಆಗಿದ್ರೆ ಸಾಕು…!
ಶಾಲೆಯೊಂದರಲ್ಲಿ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಒಬ್ಬೊಬ್ಬರಾಗಿ ಕೊಠಡಿಗೆ ಹೋಗಿ ಬರುತ್ತಿದ್ದರು. ಆದ್ರೆ ಇದೇ ವೇಳೆ ಅಚ್ಚರಿ ಎಂಬಂತೆ ಪರೀಕ್ಷಾರ್ಥಿಯೊಬ್ಬರ ಹಾಲ್ ಟಿಕೆಟ್ ಅನ್ನು ಹದ್ದು ಕಸಿದುಕೊಂಡು ಹೋಗಿದೆ. ಶಾಲೆಯ ಕಿಟಕಿಯ ಮೇಲೆ ಕುಳಿತುಕೊಂಡು ಬಿಟ್ಟಿದೆ. ಇದರಿಂದಾಗಿ ಪರೀಕ್ಷಾರ್ಥಿಯು ಆತಂಕಕೊಂಡಿದ್ದ.
ಬಳಿಕ ಹದ್ದು ತೆಗೆದುಕೊಂಡು ಹೋಗಿದ್ದ ಹಾಲ್ ಟಿಕೆಟ್ ಅನ್ನು ಬಿಟ್ಟಿದೆ. ಇದರಿಂದಾಗಿ ಪರೀಕ್ಷಾರ್ಥಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಮತ್ತು ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಯಿತು. ಹದ್ದು ಹಾಲ್ ಟಿಕೆಟ್ ತೆಗೆದುಕೊಂಡು ಹೋಗುತ್ತಿರೋ ವಿಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
Eagle snatches exam hall ticket in Kerala and returns it just in time! 🦅🎫
Kind-hearted bird drops it moments before the deadline, letting the aspirant enter the hall ⏰✨#Kerala#ViralNews#EagleMoment#ExamDay#PSCExampic.twitter.com/etWoE221dE— HK Chronicle (@HK_Chronicle_) April 11, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ