/newsfirstlive-kannada/media/post_attachments/wp-content/uploads/2025/03/Mobile-Photography.jpg)
ಹಣವಿದ್ದರೆ ಹೆಣನು ಬಾಯಿ ಬಿಡುತ್ತದೆ ಎಂಬ ಗಾದೆ ಮಾತಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರು ಬದುಕಲೆಂದು ಹೋರಾಡುತ್ತಾರೆ. ಹಣ ಸಂಪಾದಿಸಿ ದೈನಂದಿನ ಜೀವನ ಮುನ್ನೆಸುವ ಬಗ್ಗೆ ಯೋಚಿಸುತ್ತಾರೆ. ಹಾಗಾಗಿ ಸುಲಭವಾಗಿ ಹಣ ಗಳಿಸುವ ಮಾರ್ಗವನ್ನು ಹುಡುಕಾಡುತ್ತಾರೆ. ಆದರೆ ನಿಮಗೆ ಗೊತ್ತಾ ನೀವು ಸ್ಮಾರ್ಟ್​ಫೋನ್​ ಮೂಲಕ ಕ್ಲಿಕ್ಕಿಸಿದ ಫೋಟೋದಿಂದ ಹಣ ಗಳಿಸಬಹುದಾಗಿದೆ. ಅದು ಹೇಗೆ? ಇಲ್ಲಿದೆ ಮಾಹಿತಿ.
ಸ್ಮಾರ್ಟ್​ಫೋನ್​ ಪ್ರಿಯರು ತಾವು ಕ್ಲಿಕ್ಕಿಸಿದ ಫೋಟೋದಿಂದ ಹಣ ಗಳಿಸಬಹುದಾಗಿದೆ. ಕೆಲವು ಆನ್​ಲೈನ್​ ಸೈಟ್​​ಗಳು ನೀವು ಖರೀದಿಸಿದ ಫೋಟೋವನ್ನು ಖರೀದಿಸಿಕೊಳ್ಳುತ್ತದೆ. ಮಾತ್ರವಲ್ಲದೆ, ಮಾರಾಟ ಮಾಡಿದ ಫೋಟೋಗೆ ನಿರ್ದಿಷ್ಟ ಬೆಲೆಯನ್ನು ನೀಡುತ್ತದೆ. ಅದರ ಮೂಲಕ ಪ್ರತಿಯೊಬ್ಬರು ಹಣ ಗಳಿಸಬಹುದಾಗಿದೆ.
ಆನ್​ಲೈನ್​ನಲ್ಲಿ ಫೋಟೋ ಖರೀದಿಸುವ ಅನೇಕ ಸೈಟ್​ಗಳಿವೆ. ಅಲಾಮಿ, 500ಪಿಎಕ್ಸ್​, ಶಟರ್​ಸ್ಟಾಕ್​, ಐಸ್ಟಾಕ್, ಐಸ್ಟಾಕ್​ ಫೋಟೋ, ಗೆಟ್ಟಿ ಇಮೇಜ್​, ಅಡಾಬೆ ಸ್ಟಾಕ್​, ಇವಾಂಟೊ ಎಲಿಮೆಂಟ್​, ಸ್ಟಾಕಿ ಯುನೈಟೆಡ್​, ಸಮ್ಗ್​ಮಗ್​ ಮೂಲಕ ಫೋಟೋವನ್ನು ಸೇಲ್​ ಮಾಡಬಹುದಾಗಿದೆ. ಆದರೆ ಕೆಲವು ಸೈಟ್​ಗಳ ನೀತಿ, ನಿಯಮಾನುಸಾರವಾಗಿ ಫೋಟೋವನ್ನು ಖರೀದಿಸಿಕೊಳ್ಳುತ್ತವೆ.
ಇದನ್ನೂ ಓದಿ: ಲವ್ಲೀ ಲಂಡನ್​ನಲ್ಲಿ ಬೀಡು ಬಿಟ್ಟ ಸ್ಟಾರ್​ ನಿರೂಪಕಿ ಅನುಶ್ರೀ; ಜೊತೆಗೆ ಯಾರೆಲ್ಲಾ ಇದ್ದಾರೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ