Advertisment

ಬ್ಯಾಂಕಾಕ್​ನಲ್ಲಿ ಪ್ರಬಲ ಭೂಕಂಪ; ಬೃಹತ್​ ಕಟ್ಟಡ ಧರೆಗುರುಳಿದ ಭಯಾನಕ ದೃಶ್ಯ

author-image
Veena Gangani
Updated On
ಬ್ಯಾಂಕಾಕ್​ನಲ್ಲಿ ಪ್ರಬಲ ಭೂಕಂಪ; ಬೃಹತ್​ ಕಟ್ಟಡ ಧರೆಗುರುಳಿದ ಭಯಾನಕ ದೃಶ್ಯ
Advertisment
  • 7.7 ತೀವ್ರತೆಯಲ್ಲಿ ನಡುಗಿದ ಭೂಮಿ, ಧರೆಗುರುಳಿದ ಕಟ್ಟಡ
  • ಕಟ್ಟಡ ಧರೆಗುರಳುವ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ
  • ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ರಕ್ಷಣಾ ಸಿಬ್ಬಂದಿ

ಥೈಲ್ಯಾಂಡ್: ಬ್ಯಾಂಕಾಕ್​ನಲ್ಲಿ 7.7 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

Advertisment

ಇದನ್ನೂ ಓದಿ: ಬೆಂಗಳೂರಲ್ಲಿ ಶ್ರದ್ಧಾ ಮಾದರಿಯ ಹತ್ಯೆ; ಮುದ್ದಾದ ಹೆಂಡತಿಯ ಕೊಂದು ಸೂಟ್‌ಕೇಸ್‌ಗೆ ತುಂಬಿದ ಟೆಕ್ಕಿ..

publive-image

ಬ್ಯಾಂಕಾಕ್​ನಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದ್ದು, ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಬಲವಾಗಿ ಭೂಮಿ ಕಂಪಿಸಿದೆ. ಭೂಕಂಪನದ ತೀವ್ರತೆಗೆ ಮ್ಯಾನ್ಮಾರ್‌ನ ಮಂಡಲೆಯಲ್ಲಿರುವ ಐಕಾನಿಕ್ ಅವಾ ಸೇತುವೆ ಇರಾವಡ್ಡಿ ನದಿಗೆ ಕುಸಿದಿದೆ ಮತ್ತು ಬೃಹತ್ ಭೂಕಂಪಗಳಿಂದಾಗಿ ಹಲವಾರು ಕಟ್ಟಡಗಳು ಕುಸಿದಿವೆ ಧರೆಗುರುಳಿವೆ.

Advertisment


">March 28, 2025

ಭಾರೀ ಭೂಕಂಪನಕ್ಕೆ ಜನರು ಕಂಗಾಲಾಗಿದ್ದಾರೆ. ಇನ್ನೂ, ಭೂಕಂಪನಕ್ಕೆ ಬೃಹತ್​ ಕಟ್ಟಡಗಳು ಧರೆಗುರಳುವ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಆಕಾಶದೆತ್ತರದ ಕಟ್ಟಡ ನೆಲಕಚ್ಚಿದ ಪರಿಣಾಮ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಆ ಕೂಡಲೇ ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿ ಜನರನ್ನು ರಕ್ಷಣೆ ಮಾಡುತ್ತಿದ್ದಾರೆ.

publive-image

ಭೂಕಂಪದ ಬಳಿಕ ಬ್ಯಾಂಕಾಂಕ್​ನಲ್ಲಿ 43 ಮಂದಿ ನಾಪತ್ತೆಯಾಗಿದ್ದಾರೆ. ಕಟ್ಟದ ಕುಸಿದ ಪರಿಣಾಮ ಅವಶೇಷಗಳಡಿ ಜನರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನೂ, ಭಾರತದ ಮೇಘಾಲಯದಲ್ಲಿ 4 ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ. ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ. ಇತ್ತ ಭಾರತದಲ್ಲಿ ಕಡಿಮೆ ತೀವ್ರತೆಯ ಭೂಕಂಪ ಉಂಟಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment