/newsfirstlive-kannada/media/post_attachments/wp-content/uploads/2025/03/Bangkok.jpg)
ಮಯನ್ಮಾರ್ ಹಾಗೂ ನೆರೆಯ ಥೈಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಕೆಲವರು ಜೀವ ಕಳೆದುಕೊಂಡಿದ್ದಾರೆ. ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದ ಗಗನಚುಂಬಿ ಕಟ್ಟಡ ಕುಸಿದಿದ್ದು, ಹಲವಾರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದರ ಜೊತೆಗೆ ಥೈಲ್ಯಾಂಡ್ನಲ್ಲಿನ ಭಾರತೀಯರಿಗಾಗಿ ಸಹಾಯವಾಣಿ (ಹೆಲ್ಪ್ಲೈನ್) ಇದೀಗ ತೆರೆಯಲಾಗಿದೆ.
ಥಾಯ್ಲೆಂಡ್ನ ಪ್ರಬಲ ಭೂಕಂಪ ಸಂಭವಿಸಿದ್ದು, ಇದು ರಿಕ್ಟರ್ ಮಾಪಕದಲ್ಲಿ 7.7 ರಷ್ಟು ತೀವ್ರತೆ ದಾಖಲಾಗಿದೆ. ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದಿದೆ. ಇಲ್ಲಿ 3 ಮಂದಿ ಜೀವ ಬಿಟ್ಟಿದ್ದು 90 ಮಂದಿ ನಾಪತ್ತೆಯಾಗಿದ್ದಾರೆ. ಭೂಕಂಪದಿಂದ ಇಲ್ಲಿವರೆಗೆ 7 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಜೀವ ಕಳೆದುಕೊಂಡವರ ಸಂಖ್ಯೆ 15ಕ್ಕಿಂತ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: LSG ಗೆದ್ದರೂ ರಿಷಭ್ ಪಂತ್ ಮೇಲೆ ಸಮಾಧಾನ ಇಲ್ಲ.. ಬ್ಯಾಟಿಂಗ್ನಿಂದ ನಿರಾಸೆ, ಟಿವಿ ಪುಡಿಪುಡಿ..!
ಪ್ರಬಲವಾದ ಭೂಕಂಪ ಸಂಭವಿಸಿದ್ದರಿಂದ ಥೈಲ್ಯಾಂಡ್ ಪ್ರಧಾನಿ ಪೇಟೊಂಗ್ಟಾರ್ನ್ ಶಿನವಾತ್ರಾ ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಮೆಟ್ರೋ ಹಾಗೂ ರೈಲು ಸೇವೆಗಳನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ. ಮೂರು ನಿಮಿಷ ನಿರಂತರವಾಗಿ ಭೂಮಿ ಕಂಪಿಸಿದ್ದು, ಕ್ಷಣ ಮಾತ್ರದಲ್ಲಿ ಹಲವು ಕಟ್ಟಡಗಳು ಕುಸಿದಿವೆ. ಭೂಕಂಪನದ ಹೊಡೆತಕ್ಕೆ ಐತಿಹಾಸಿಕ ಸೇತುವೆ ಕೂಡ ನಾಶವಾಗಿದೆ.
ಮಯನ್ಮಾರ್, ಥೈಲ್ಯಾಂಡ್, ಬ್ಯಾಂಕಾಕ್‌ನಲ್ಲಿ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹೀಗಾಗಿ ಅಲ್ಲಿನ ಭಾರತೀಯರಿಗೆ ಸಮಸ್ಯೆ ಆದ್ರೆ, ತಕ್ಷಣಕ್ಕೆ ಸ್ಪಂದಿಸಲು ಸಹಾಯವಾಣಿಯನ್ನು ಇದೀಗ ತೆರೆಯಲಾಗಿದೆ. ಸಿಲುಕಿರುವ ಯಾವುದೇ ಭಾರತೀಯರು ಸಹಾಯವಾಣಿ ಮೂಲಕ ಸಂಪರ್ಕ ಮಾಡಬಹುದು.
ಥೈಲ್ಯಾಂಡ್ನಲ್ಲಿರುವ ಭಾರತೀಯರಿಗೆ ಹೆಲ್ಪ್ಲೈನ್
+66 6188 19218
ಕನ್ನಡ ಹಾಗೂ ಥಾಯ್ ಭಾಷೆಯಲ್ಲಿ ಸಹಾಯವಾಣಿ
ಮೋಹನ್- +66 899012366
ತುರ್ತು ನಂಬರ್
1669
ರಾಷ್ಟ್ರೀಯ ವಿಪತ್ತು ಎಚ್ಚರಿಕೆ ಕೇಂದ್ರದ ನಂಬರ್
02-399-4114
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ