ಆಪರೇಷನ್ ಸಿಂಧೂರ ಬಳಿಕ ಪಾಪಿ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ; 3 ಬಾರಿ ತೀವ್ರ ಭೂಕಂಪ

author-image
Veena Gangani
Updated On
ಆಪರೇಷನ್ ಸಿಂಧೂರ ಬಳಿಕ ಪಾಪಿ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ; 3 ಬಾರಿ ತೀವ್ರ ಭೂಕಂಪ
Advertisment
  • ಪಾಪಿ ಪಾಕಿಸ್ತಾನದ ಮೇಲೆ ಮುನಿಸಿಕೊಂಡ ಪ್ರಕೃತಿ
  • ನಿನ್ನೆ ಪಾಕ್​ನ ವಿವಿಧೆಡೆ 4.6 ತೀವ್ರತೆಯ ಭೂಕಂಪ
  • ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ನಿರ್ದೇಶಕ ಏನಂದ್ರು?

ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನದ ಮೇಲೆ ಪ್ರಕೃತಿಯೂ ಮುನಿಸಿಕೊಂಡಿದ್ದು, ನಿನ್ನೆ ವಿವಿಧೆಡೆ 4.6 ತೀವ್ರತೆಯ ಭೂಕಂಪ ಆಗಿದೆ. ಕಳೆದ ಮೂರು ದಿನಗಳ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಮೂರನೇ ಬಾರಿಗೆ ಭೂಕಂಪವಾಗಿದೆ.

ಇದನ್ನೂ ಓದಿ:IPL ಅಭಿಮಾನಿಗಳಿಗೆ ಗುಡ್‌ ನ್ಯೂಸ್‌.. ಹೊಸ ವೇಳಾಪಟ್ಟಿ ಬಿಡುಗಡೆ; RCB ಪಂದ್ಯ ಯಾವಾಗ?

publive-image

ಪಂಜಾಬ್ ಪ್ರಾಂತ್ಯದ ಪಿರ್ ಜೊಂಗಲ್ ಬಳಿ ಮಧ್ಯಾಹ್ನ 1:26ರ ಸುಮಾರಿನಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ನಿರ್ದೇಶಕ ಒ.ಪಿ ಮಿಶ್ರಾ ತಿಳಿಸಿದ್ದಾರೆ. ಮೇ 10ರಂದು ಬೆಳಗ್ಗೆ 4.7 ರಷ್ಟು ತೀವ್ರತೆಯ ಭೂಕಂಪ 4.0 ರಷ್ಟು ಆಗಿತ್ತು.


">May 12, 2025

ಭಾರತದೊಂದಿಗೆ ಸೇನಾ ಕಾರ್ಯಾಚರಣೆಯಲ್ಲಿ ತೊಡಗಿದ ಪಾಕಿಸ್ತಾನದಲ್ಲಿನ ಕೆಲವು ಅಸ್ವಾಭಾವಿಕ ಘಟನೆಗಳ ಬಗ್ಗೆ ಪೋಸ್ಟ್ ಮಾಡಲಾಗುತ್ತಿದೆ. ಪರಮಾಣು ಪರೀಕ್ಷೆ ನಡೆಸುವ ಮಹತ್ವದ ಸ್ಥಾವರಗಳ ಮೇಲೆ ಭಾರತ ದಾಳಿ ನಡೆಸಿದೆ. ತದನಂತರ ಪಾಕಿಸ್ತಾನ ಪರಮಾಣು ಪರೀಕ್ಷೆ ನಡೆಸುತ್ತಿರುವುದರಿಂದ ಆಗಾಗ್ಗೆ ಭೂಕಂಪ ಆಗುತ್ತಿದೆ ಎಂದು ಕೆಲವರು ಬರೆದುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment