ಥೈಲ್ಯಾಂಡ್ ಕಟ್ಟಡದ ಮೇಲೆ ಏಕಾಂತಕ್ಕೆ ಭಂಗ; ಕಪಲ್‌ ರೊಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ವೈರಲ್‌!

author-image
admin
Updated On
ಥೈಲ್ಯಾಂಡ್ ಕಟ್ಟಡದ ಮೇಲೆ ಏಕಾಂತಕ್ಕೆ ಭಂಗ; ಕಪಲ್‌ ರೊಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ವೈರಲ್‌!
Advertisment
  • ಮಯನ್ಮಾರ್, ಥೈಲ್ಯಾಂಡ್‌ ಭೂಕಂಪದಲ್ಲಿ ಸಾವನ್ನಪ್ಪಿದವರು 1,644 ಜನ
  • ಗಗನಚುಂಡಿ ಕಟ್ಟಡ ರೂಫ್​​ಟಾಪ್​ನಲ್ಲಿರೋ ಫೇಮಸ್‌ ಸ್ವಿಮ್ಮಿಂಗ್​ ಪೂಲ್!
  • ಕಪಲ್‌ ಸಖತ್ ರೊಮ್ಯಾಂಟಿಕ್​ ಮೂಡ್​ನಲ್ಲಿದ್ದಾಗ ಭೂಕಂಪದ ಭಂಗ

ಪ್ರಕೃತಿ ನೋಡೋಕೆ ಎಷ್ಟು ಸುಂದರವೋ? ಮುನಿದರೆ ಅಷ್ಟೇ ರಣರೌದ್ರ. ಇದಕ್ಕೆ ತಾಜಾ ಸಾಕ್ಷಿ ಮಯನ್ಮಾರ್, ಥೈಲ್ಯಾಂಡ್‌ನಲ್ಲಿ ಸಂಭವಿಸಿರೋ ಭೂಕಂಪ. ಮೈಕೊಡವಿರೋ ಭೂದೇವಿಯ ಅವಕೃಪಗೆ ಮಾನವ ಸಂಕುಲ ಸಂಕಷ್ಟಕ್ಕೆ ಸಿಲುಕಿದೆ. ನಡುಗಿದ ಇಳೆಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ 1,644 ಜನ ಭೂತಾಯಿಯ ಸಿಟ್ಟಿಗೆ ಬಲಿಯಾಗಿದ್ದಾರೆ. ಎರಡೂ ದೇಶದಲ್ಲಿ ನರಕದ ಛಾಯೆ ಆವರಿಸಿದೆ. ಮಯನ್ಮಾರ್‌ನಲ್ಲಿ ಗಂಟೆಗಳು ಉರುಳಿದಂತೆ ಸಾವಿನ್ನಪ್ಪಿದವರ ಸಂಖ್ಯೆ ಏರಿಕೆ ಆಗುತ್ತಲೇ ಇದೆ.

ಬಿಲ್ಡಿಂಗ್‌ ಮೇಲೆ ಪ್ರವಾಹ, ಏಕಾಂತಕ್ಕೆ ಭಂಗ!
ಥಾಯ್ಲೆಂಡ್‌ ಅಂದ ತಕ್ಷಣ ನೆನಪಾಗೋದು ಮೋಜು ಮಸ್ತಿಗೆ ಹೇಳಿ ಮಾಡಿಸಿದ ಜಾಗ. ಅದ್ರಲ್ಲೂ, ಗಗನಚುಂಡಿ ಕಟ್ಟಡಗಳ ರೂಫ್​​ಟಾಪ್​ನಲ್ಲಿರೋ ಸ್ವಿಮ್ಮಿಂಗ್​ ಪೂಲ್​ಗಳಲ್ಲಿ ಕಾಲ ಕಳೆಯೋದಕ್ಕೆ ಅಂತಾನೆ ದೇಶ ವಿದೇಶಗಳಿಂದ ಜನರು ಇಲ್ಲಿಗೆ ಬರ್ತಾರೆ. ತಮ್ಮ ತಮ್ಮ ಜೋಡಿಗಳ ಜೊತೆಗೆ ಏಕಾಂತವಾಗಿ ಟೈಮ್ ಪಾಸ್​ ಮಾಡ್ತಾರೆ.

publive-image

ಅದೇ ರೀತಿ, ಇಲ್ಲೊಂದು ಜೋಡಿ ನೋಡಿ, ಗಗನಚುಂಬಿ ಕಟ್ಟಡದ ರೂಫ್​ಟಾಪ್​ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮೈಮರೆತು ಮಸ್ತಿ ಮಾಡ್ತಿದ್ರು. ಸಖತ್ ರೊಮ್ಯಾಂಟಿಕ್​ ಮೂಡ್​ನಲ್ಲಿದ್ರು. ಈ ಟೈಮಲ್ಲಿ ಸರಿಯಾಗಿ ಇದೇ ಕಟ್ಟಡಕ್ಕೂ ಭೂಕಂಪದ ಹೊಡೆತ ಬಿದ್ದಿದೆ. ಪ್ರಬಲ ಕಂಪನಕ್ಕೆ ಕಟ್ಟಡದ ಪೂಲ್‌ನಲ್ಲಿರೋ ನೀರು ಶೇಕ್​ ಆಗಿದೆ ಎದೆ ಝಲ್ಲೆನ್ನಿಸಿದೆ.


">March 29, 2025

ನಿಂತ ನೆಲವೇ ನಡುಗಿದ್ರೆ ಏನಾಗಬಹುದು ಊಹಿಸಿಕೊಳ್ಳಿ. ಮಯನ್ಮಾರ್, ಥಾಯ್ಲೆಂಡ್‌ನಲ್ಲಿ ಸಂಭವಿಸಿರೋ ಭೂಕಂಪ ಸರ್ವನಾಶಕ್ಕೆ ಸಾಕ್ಷಿಯಾಗಿದೆ. ಕೆಲವೇ ಸೆಕೆಂಡ್ ಭೂಮಿ ಕಂಪಿಸಿದ್ದಕ್ಕೆ ಅಲ್ಲೋಲ.. ಕಲ್ಲೋಲವೇ ಸೃಷ್ಟಿಯಾಗಿದೆ. ಬಾನೆತ್ತರದ ಕಟ್ಟಡಗಳು ನೆಲಸಮವಾಗಿವೆ. ಭೂಮಿಯೇ ಬಾಯ್ತೆರೆದಿದೆ. ಸೇತುವೆಗಳು ಮಗುಚಿ ಬಿದ್ದಿವೆ. ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿ ಭಾರೀ ಸಾವು ನೋವು ಸಂಭವಿಸಿದೆ. ಮಯನ್ಮಾರ್‌ನಲ್ಲಂತೂ ಸಾವಿನ ಆರ್ತನಾದವೇ ಕೇಳಿಬರುತ್ತಿದೆ.

ಮಯನ್ಮಾರ್‌ನಲ್ಲಿ ನಿನ್ನೆ ರಾತ್ರಿ ಮತ್ತೊಮ್ಮೆ ಭೂಕಂಪನ!
ನಿನ್ನೆ 7.7 ತೀವ್ರತೆಯ ಭಾರೀ ಭೂಕಂಪಕ್ಕೆ ಮಯನ್ಮಾರ್​ ತತ್ತರಿಸಿ ಹೋಗಿತ್ತು. ಸತತ ಐದು ಬಾರಿ ಭೂ ತಾಯಿಯ ಮಡಿಲು ಶೇಕ್ ಶೇಕ್ ಆಗಿತ್ತು. ಈ ಅವಘಡದಿಂದ ಹೌಹಾರಿದ್ದ ಜನರಿಗೆ ನಿನ್ನೆ ತಡರಾತ್ರಿ ಮತ್ತೊಂದು ಶಾಕ್ ಕಾದಿತ್ತು. ಮಯನ್ಮಾರ್‌ನಲ್ಲಿ ನಿನ್ನೆ ತಡರಾತ್ರಿ 11.56ರ ಹೊತ್ತಿಗೆ ಮತ್ತೊಮ್ಮೆ ಭೂಮಿ ಕಂಪಿಸಿದೆ. 4.2ರಷ್ಟು ತೀವ್ರತೆಯಲ್ಲಿ ಧರೆ ನಡುಗಿದೆ. ಆರನೇ ಬಾರಿ ಭೂಮಿ ಅಲ್ಲಾಡುತ್ತಿದ್ದಂತೆ ಜನರ ಎದೆ ಮತ್ತೆ ಝಲ್ ಎಂದಿದೆ.

publive-image

ಅತಿದೊಡ್ಡ ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ
ಭೂಕಂಪನದಿಂದ ಮಯನ್ಮಾರ್‌ ಜನರು ಅತಂತ್ರ ಸ್ಥಿತಿಗೆ ತಲುಪಿದೆ. ಮಯನ್ಮಾರ್​ನ ಎರಡು ದೊಡ್ಡ ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಮಂಡಾಲೇ ಮತ್ತು ಯಾಂಗೋನ್​ನಲ್ಲಿ ವಿದ್ಯುತ್ ಇಲ್ಲದೇ ಜನರು ನರಕವನ್ನ ಅನುಭವಿಸ್ತಿದ್ದಾರೆ. ಇನ್ನೂ ಮಯನ್ಮಾರ್‌ನಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿದವರ ರಕ್ಷಣೆ ಮಾಡಲಾಗುತ್ತಿದೆ.
ಥಾಯ್ಲೆಂಡ್ ರಾಜಧಾನಿಯಲ್ಲೂ ನರಕ ಸದೃಶ ಪರಿಸ್ಥಿತಿ

ಥಾಯ್ಲೆಂಡ್‌ನಲ್ಲೂ ಭೂಕಂಪನ ಎಫೆಕ್ಟ್‌ ಊಹಿಸೋಕು ಆಗದ ರೀತಿಯಲ್ಲಿ ತಟ್ಟಿದೆ. ಬ್ಯಾಂಕಾಕ್‌ನಲ್ಲಿ ಇಳೆಯ ಮುನಿಸಿಗೆ ಆರು ಮಂದಿ ಬಲಿಯಾಗಿದ್ದು, ನೂರಾರು ಜನರು ಗಾಯಗೊಂಡಿರುವ ಮಾಹಿತಿ ಇದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿದ್ದು, ಇನ್ನೂ ಅತಿದೊಡ್ಡ ಕಟ್ಟಡ ಕುಸಿದು ಬಿದ್ದಿದ್ದು, ಅದರಡಿ 100ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಮೂಡಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಭೂಕಂಪ ನಿಭಾಯಿಸಲು ತಯಾರಾಗಿರಲಿಲ್ಲ ಮಯನ್ಮಾರ್!
ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆಯ ಭೂಕಂಪವನ್ನು ನಿಭಾಯಿಸುವ ಬಗ್ಗೆ ಮಯನ್ಮಾರ್ ತಯಾರಾಗಿರಲಿಲ್ಲ. ಅಸಲಿಗೆ, ಅಲ್ಲಿ ಭೂಕಂಪಗಳು ಪದೇ ಪದೇ ಸಂಭವಿಸುತ್ತಿರುತ್ತವೆ. ಅವೆಲ್ಲವೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಗಿರಲಿಲ್ಲ. ಆದರೂ, ಮುಂದೊಂದು ದಿನ ದೊಡ್ಡ ಮಟ್ಟದ ಭೂಕಂಪವಾಗಬಹುದು, ಅದಕ್ಕೆ ನಾವು ಸೂಕ್ತ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕೆಂಬ ಮುನ್ನೆಚ್ಚರಿಕೆಯನ್ನು ಮಯನ್ಮಾರ್ ಸರ್ಕಾರ ವಹಿಸಿರಲಿಲ್ಲ. ಹೀಗಾಗಿ ಇಷ್ಟು ದೊಡ್ಡ ನಷ್ಟ ಅನುಭವಿಸುವಂತಾಗಿದೆ.

publive-image

ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿಯೂ ಭೂಕಂಪನ!
ಮಯನ್ಮಾರ್, ಥಾಯ್ಲೆಂಡ್ ಅಷ್ಟೇ ಅಲ್ಲ. ಅಫ್ಘಾನಿಸ್ತಾನದಲ್ಲೂ ಭೂಕಂಪನದ ಅನುಭವವಾಗಿದೆ. ಪಾಕಿಸ್ತಾನದ ಪಶ್ಚಿಮ ಭಾಗ ಹಾಗೂ ಅಫ್ಘಾನಿಸ್ತಾನದ ನೆರೆಯ ರಾಷ್ಟ್ರ ತಝಕಿಸ್ತಾನದಲ್ಲಿಯೂ ಭೂಮಿ ಕಂಪಿಸಿದೆ. ಆದ್ರೆ, ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಇದನ್ನೂ ಓದಿ: ಎದೆ ಝಲ್ಲೆನ್ನಿಸೋ ದೃಶ್ಯಗಳು.. ಮಯನ್ಮಾರ್‌ನಲ್ಲಿ ಪದೇ ಪದೇ ಭೂಕಂಪಕ್ಕೆ ಕಾರಣ ಏನು? VIDEO ಇಲ್ಲಿದೆ! 

ಪ್ರಕೃತಿ ಮುಂದೆ ಮಾನವ ಯಕಶ್ಚಿತ್‌ ಅನ್ನೋದು ಆಗಾಗ ಸಾಬೀತಾಗುತ್ತಲೇ ಇರುತ್ತೆ. ಒಮ್ಮೆ ಭೂದೇವಿ ಬಾಯ್ತೆರೆದರೇ ಮನುಷ್ಯ ಕುಲವೇ ಸರ್ವನಾಶ ಅನ್ನೋದಕ್ಕೆ ಮಯನ್ಮಾರ್, ಥಾಯ್ಲೆಂಡ್ ಜ್ವಲಂತ ಉದಾಹರಣೆಯಾಗಿದೆ. ಆದ್ರೂ ಇಳೆಯ ಕೋಪವನ್ನ ತಡೆಯೋದು ಕಷ್ಟ.. ಆದ್ರೆ, ಭೂಕಂಪ ಸಂಭವಿಸೋಕು ಮುನ್ನ ಮುನ್ನೆಚ್ಚರಿಕಾ ಕ್ರಮಗಳು ಅತ್ಯಗತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment