Advertisment

ಇಲ್ಲಿ ಮನುಷ್ಯರ, ಪ್ರಾಣಿಗಳ, ಸಸಿಗಳ ಅಸ್ತಿತ್ವವೂ ಇಲ್ಲ! ಈ ಪ್ರದೇಶವನ್ನೇಕೆ ಬಾಹ್ಯಾಕಾಶ ಸ್ಮಶಾನ ಎಂದು ಕರೆಯುವುದು?

author-image
Gopal Kulkarni
Updated On
ಇಲ್ಲಿ ಮನುಷ್ಯರ, ಪ್ರಾಣಿಗಳ, ಸಸಿಗಳ ಅಸ್ತಿತ್ವವೂ ಇಲ್ಲ! ಈ ಪ್ರದೇಶವನ್ನೇಕೆ ಬಾಹ್ಯಾಕಾಶ ಸ್ಮಶಾನ ಎಂದು ಕರೆಯುವುದು?
Advertisment
  • ಈ ಪ್ರದೇಶದಲ್ಲಿ ಮನುಷ್ಯರು, ಪ್ರಾಣಿಗಳು ಅಷ್ಟೇ ಏಕೆ ಸಸ್ಯಗಳು ಕಾಣುವುದಿಲ್ಲ
  • ಪಾಯಿಂಟ್ ನೆಮೊವನ್ನು ಬಾಹ್ಯಾಕಾಶದ ಸ್ಮಶಾನ ಎಂದು ಕರೆಯುವುದು ಏಕೆ?
  • ಬಾಹ್ಯಾಕಾಶಕ್ಕೆ ಸಂಬಂಧಿಸಿದ ನಿಷ್ಕ್ರೀಯ ವಸ್ತುಗಳು ಇಲ್ಲಿ ಬಂದು ಬೀಳುವುದೇಕೆ?

ಸಾವಿರಾರು ಉಪಗ್ರಹಗಳು ಬಹ್ಯಾಕಾಶದಲ್ಲಿ ಸುತ್ತುತ್ತಲೇ ಇರುತ್ತವೆ. ಒಂದು ಸಾರಿ ಅವುಗಳ ಆಯಸ್ಸು ಮುಗಿದ ತಕ್ಷಣ ಅವು ತಮ್ಮ ಕೆಲಸವನ್ನು ನಿಲ್ಲಿಸುತ್ತವೆ. ಆದ್ರೆ ಹೀಗೆ ನಿಷ್ಕ್ರಿಯೆಗೊಂಡ ಹಳೆಯ ಉಪಗ್ರಹಗಳು ಕೊನೆಗೆ ಎಲ್ಲಿ ಹೋಗುತ್ತವೆ ಅಂತ ಗೊತ್ತಾ? ಅವುಗಳನ್ನು ಯಾವುದೇ ದೇಶದಲ್ಲಿ ಅಥವಾ ಸಮುದ್ರದಲ್ಲಿ ಬೀಳಿಸುವುದಿಲ್ಲ ಅವುಗಳನ್ನು ಭೂಮಿಯಲ್ಲಿಯೇ ಮನುಷ್ಯರಿಂದ ಪ್ರಾಣಿಗಳಿಂದ ಅತ್ಯಂತ ಪ್ರತ್ಯೇಕವಾಗಿರುವ ದೂರದಲ್ಲಿರುವ, ಜನವಸತಿಯೇ ಇಲ್ಲದ ಜಾಗದಲ್ಲಿ ಎಸೆಯಲಾಗುತ್ತದೆ. ಅದರ ಹೆಸರು ಪಾಯಿಂಟ್ ನೆಮೊ. ಈ ಒಂದು ಪ್ರದೇಶವನ್ನು ಬಾಹ್ಯಾಕಾಶ ನೌಕೆಯ ಸ್ಮಶಾನವೆಂದೇ ಕರೆಯುತ್ತಾರೆ. ಇಲ್ಲಿ ಸರಿಸುಮಾರು 100ಕ್ಕೂ ಹೆಚ್ಚು ಬಾಹ್ಯಾಕಾಶಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಇಲ್ಲಿ ಎಸೆಯಲಾಗಿದೆ.ಬನ್ನಿ ಈ ಪಾಯಿಂಟ್​ ನೆಮೊ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳೋಣ. ಇದನ್ನು ಯಾಕೆ ಬಾಹ್ಯಾಕಾಶ ಸ್ಮಶಾನ ಎಂದು ಕರೆಯುತ್ತಾರೆ ಎಂಬುದನ್ನೂ ನೋಡೋಣ.

Advertisment

ಏನಿದು ಪಾಯಿಂಟ್ ನೆಮೊ ?
ಪಾಯಿಂಟ್ ನೆಮೊ ಎಂಬುದು ಭೂಮಿಯಲ್ಲಿ ಅತ್ಯಂತ ಪ್ರತ್ಯೇಕವಾದ ಹಾಗು ನಿರ್ಜನ ಪ್ರದೇಶ ಎಂದು ಗುರುತಿಸುಕೊಂಡಿರುವ ಜಾಗ. ದಕ್ಷಿಣ ಪೆಸಿಫಿಕ್ ಸಮುದ್ರದಲ್ಲಿ ಇದು ಇದೆ. ಇಲ್ಲಿ ಮನುಷ್ಯರು, ಪ್ರಾಣಿಗಳು ಕನಿಷ್ಠ ಪಕ್ಷ ಸಸಿಗಳು ಕೂಡ ಇಲ್ಲ. ಇಲ್ಲಿ ಏನಂದರೇ ಏನೂ ಕಾಣುವುದಿಲ್ಲ. ಇಲ್ಲಿ ಈ ಅವೆಲ್ಲಾ ಬದುಕಲು ಕೂಡ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಇದು ಆಯುಷ್ಯ ಕಳೆದುಕೊಂಡ ಹಳೆಯ ಉಪಗ್ರಹಗಳ ಡಂಪಿಂಗ್ ಮಾಡಲು ಮಾತ್ರ ಉಪಯೋಗ ಇರುವ ಜಾಗ ಎಂದು ಹೇಳಲಾಗುತ್ತದೆ. ಬಾಹ್ಯಾಕಾಶ ನೌಕೆಗಳು ಹಾಗೂ ಅವುಗಳ ಅವಶೇಷಗಳನ್ನು ಇಲ್ಲಿ ಡಂಪ್ ಮಾಡಲಾಗುತ್ತದೆ. ಕ್ರಿಯೇಷನ್ ಸರ್ವೆ ಇಂಜನಿಯರ್ ಈ ಒಂದು ಪ್ರದೇಶವನ್ನ 1992ರಲ್ಲಿ ಕಂಡು ಹಿಡಿದಿದ್ದ. ಇಲ್ಲಿಯವರೆಗೂ ಈ ಪ್ರದೇಶದಲ್ಲಿ ಸುಮಾರು ನೂರಕ್ಕೂ ಹೆಚ್ಚು ಉಪಗ್ರಹಗಳ ಮತ್ತು ಬಾಹ್ಯಾಕಾಶ ನೌಕೆಗಳನ್ನು ಇಲ್ಲಿ ಎಸೆಯಲಾಗಿದೆ.

ಇದನ್ನೂ ಓದಿ: ವಿಶ್ವ ಗೆದ್ದ ಅಲೆಕ್ಸಾಂಡರ್​​ನ ಕುದುರೆಯ ಹೆಸರೇನು? ತನ್ನ ಕುದುರೆಯ ಹೆಸರಲ್ಲಿ ಒಂದು ನಗರವನ್ನೇ ಸೃಷ್ಟಿಸಿದ್ದ ಸಿಕಂದರ್​!

ಚಿಲಿ ಮತ್ತು ನ್ಯೂಜಿಲ್ಯಾಂಡ್ ನಡುವಿನ ದಕ್ಷಿಣ ಪೆಸಿಫಿಕ್ ಸಮುದ್ರದಲ್ಲಿ ಕಾಣುವ ಈ ಪಾಯಿಂಟ್ ನಿಮೊವನ್ನು ಜೀವ ಜಗತ್ತಿನಿಂದ ತೀವ್ರವಾಗಿ ದೂರದಲ್ಲಿರುವ ಪ್ರದೇಶ ಎಂದು ಕರೆಯಲಾಗುತ್ತದೆ. ಇದು ಹತ್ತಿರದ ಭೂಮಿಯಿಂದ ಸುಮಾರು 2688 ಕಿಲೋ ಮೀಟರ್ ದೂರದಲ್ಲಿದೆ.

Advertisment

ಇದನ್ನೂ ಓದಿ: ತಾಯಿಯ 1.60 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮಾರಿದ ಮಗಳು; ಜಸ್ಟ್ 680 ರೂ.ಆ ವಸ್ತು ಖರೀದಿಗಾಗಿ!

ಇದನ್ನು ಏಕೆ ಬಾಹ್ಯಾಕಾಶ ನೌಕೆಯ ಸ್ಮಶಾನ ಎನ್ನುತ್ತಾರೆ? 
ಯಾವಾಗ ಉಪಗ್ರಹಗಳು ಹಾಗೂ ಬಾಹ್ಯಾಕಾಶ ನೌಕೆಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸುತ್ತವೆಯೋ ಅವುಗಳನ್ನು ಮರಳಿ ಭೂಮಿಗೆ ಕರೆತರಬೇಕಾಗುತ್ತದೆ. ಒಂದು ವೇಳೆ ಇವು ಜನರಿರುವ ಪ್ರದೇಶದಲ್ಲಿ ಕ್ರ್ಯಾಶ್ ಆದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಗುತ್ತದೆ. ಮತ್ತು ಹಲವು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಉದ್ದೇಶ ಪೂರ್ವಕವಾಗಿಯೇ ವಿಜ್ಞಾನಿಗಳು ನಿಷ್ಕ್ರಿಯೆಗೊಂಡ ಹಾಗೂ ಸ್ಥಗಿತಗೊಂಡಿರುವ ಉಪಗ್ರಹ ಹಾಗೂ ಬಾಹ್ಯಾಕಾಶ ನೌಕೆಗಳನ್ನು ಇಲ್ಲಿ ಡಂಪ್ ಮಾಡುತ್ತಾರೆ.
1971 ರಿಂದ 2008ರ ನಡುವೆ ಅನೇಕ ರಾಷ್ಟ್ರಗಳು ಯುನೈಟೆಡ್ ಸ್ಟೇಟ್ಸ್, ರಷ್ಯಾ, ಜಪಾನ್​ ಮತ್ತು ಅನೇಕ ಯುರೋಪಿಯನ್ ದೇಶಗಳು ಸುಮಾರು 263 ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಸ್ತುಗಳನ್ನು ಇಲ್ಲಿ ಡಂಪ್ ಮಾಡಿವೆ. ಇದು ಮಾತ್ರವಲ್ಲ ಮುಂದೆ ಭವಿಷ್ಯದಲ್ಲಿಯೂ ಕೂಡ ಈ ಪಾಯಿಂಟ್ ನೆಮೊ ಬಾಹ್ಯಾಕಾಶ ವಸ್ತುಗಳ ಡಂಪಿಂಗ್ ಯಾರ್ಡ್ ಎಂದೇ ಗುರುತಿಸಿಕೊಳ್ಳಲಿದೆ. ಇನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವೂ ಕೂಡ ಪರಿಭ್ರಮಿಸಿದ ಹಾಗೂ ಕ್ರ್ಯಾಶ್ ಆಗಿರುವ ವಸ್ತುಗಳನ್ನು ಕೂಡ ಇದೇ ನೀರಿನಲ್ಲಿ ಎಸೆಯಲಿವೆ .

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment