Advertisment

SSLC, ITI ಅಭ್ಯರ್ಥಿಗಳಿಗೆ 3 ಸಾವಿರಕ್ಕೂ ಅಧಿಕ ಜಾಬ್​ಗಳು.. ಪರೀಕ್ಷೆ ಇಲ್ಲ, ಮೆರಿಟ್​ನಲ್ಲಿ ಆಯ್ಕೆ ಮಾತ್ರ!

author-image
Bheemappa
Updated On
SSLC, ITI ಅಭ್ಯರ್ಥಿಗಳಿಗೆ 3 ಸಾವಿರಕ್ಕೂ ಅಧಿಕ ಜಾಬ್​ಗಳು.. ಪರೀಕ್ಷೆ ಇಲ್ಲ, ಮೆರಿಟ್​ನಲ್ಲಿ ಆಯ್ಕೆ ಮಾತ್ರ!
Advertisment
  • ಯಾವ್ಯಾವ ಹುದ್ದೆಗಳನ್ನು ಇಲಾಖೆ ಕಾಲ್​ಫಾರ್ಮ್ ಮಾಡಿದೆ?
  • ಎಸ್​ಸಿ, ಎಸ್​​ಟಿ, ಪಿಡಬ್ಲುಡಿ, ಮಹಿಳೆಯರಿಗೆ ಅರ್ಜಿ ಶುಲ್ಕವಿಲ್ಲ
  • ಈ ಕೆಲಸಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಪೂರ್ವ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದ್ದು ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತಿ ಹೊಂದಿರುವ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Advertisment

ಇದನ್ನೂ ಓದಿ: ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗೆ ಅಪ್ಲೇ ಮಾಡಿದವ್ರಿಗೆ ಮಹತ್ವದ ಮಾಹಿತಿ.. ಏನು?

ಪೂರ್ವ ರೈಲ್ವೆ ಕಾಲ್ ಮಾಡಿರುವ ವಿವಿಧ ಹುದ್ದೆಗಳಿಗೆ ಅರ್ಜಿಗಳು ಈಗಾಗಲೇ ಆರಂಭವಾಗಿದ್ದು ಮಹಿಳೆಯರು, ಪುರುಷರು ಇಬ್ಬರಿಗೂ ಅವಕಾಶವಿದೆ. ಸೆಪ್ಟೆಂಬರ್ 09ರಂದು ಅಪ್ರೆಂಟಿಸ್ ಪೋಸ್ಟ್‌ಗಳಿಗೆ ನೋಟಿಫಿಕೇಶನ್ ಅನ್ನು ಇಲಾಖೆ ಬಿಡುಗಡೆ ಮಾಡಿತ್ತು. ಇದೇ 24 ರಿಂದ ಅರ್ಜಿಗಳು ಆರಂಭವಾಗಿವೆ. ಕೊನೆಯ ದಿನಾಂಕ ಅಕ್ಟೋಬರ್ 23 ಆಗಿದೆ.

ಶೈಕ್ಷಣಿಕ ಅರ್ಹತೆ-

10ನೇ ತರಗತಿ
ಐಟಿಐ ಪೂರ್ಣವಾಗಿರಬೇಕು

ಹುದ್ದೆಗಳು ಹೆಸರು-

ಫಿಟ್ಟರ್, ವೆಲ್ಡರ್, ಮಿಷನಿಸ್ಟ್, ಕಾರ್ಪೆಂಟರ್, ಪೈಂಟರ್, ಲೈನ್​ಮ್ಯಾನ್, ವೈರ್​​ಮ್ಯಾನ್ ಹಾಗೂ ಎಲೆಕ್ಟ್ರಿಷನ್ ಸೇರಿದಂತೆ ಇನ್ನಿತರ ಉದ್ಯೋಗಗಳು.

Advertisment

ಇದನ್ನೂ ಓದಿ:ಕರ್ನಾಟಕದ ರೆವಿನ್ಯೂ ಇಲಾಖೆಯಲ್ಲಿ ಬೃಹತ್ ಹುದ್ದೆಗಳ ನೇಮಕಾತಿ.. ಅರ್ಜಿ ಆರಂಭ, ಕೊನೆ ದಿನಾಂಕ?

publive-image

ಒಟ್ಟು ಹುದ್ದೆಗಳು-

3,115 ಅಪ್ರೆಂಟಿಸ್ ಪೋಸ್ಟ್‌ಗಳು

ಅರ್ಜಿಗೆ ಶುಲ್ಕ ಎಷ್ಟು ಇದೆ..?

  • ಜನರಲ್, ಒಬಿಸಿ, ಇಡಬ್ಲುಎಸ್​- 100 ರೂಪಾಯಿಗಳು
  • ಎಸ್​ಸಿ, ಎಸ್​​ಟಿ, ಪಿಡಬ್ಲುಡಿ, ಮಹಿಳೆಯರಿಗೆ ಶುಲ್ಕವಿಲ್ಲ
  • ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಹಣ ಪಾವತಿ ಮಾಡಿ

ವಯಸ್ಸಿನ ಮಿತಿ-

15 ರಿಂದ 24 ವರ್ಷದ ಒಳಗಿನವರಿಗೆ ಅವಕಾಶ

ಆಯ್ಕೆ ಪ್ರಕ್ರಿಯೆ-

10ನೇ ತರಗತಿ ಹಾಗೂ ಐಟಿಐನಲ್ಲಿ ಪಡೆದಂತ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧ ಮಾಡಲಾಗುತ್ತದೆ. ಇದರಲ್ಲಿ ಆಯ್ಕೆ ಆದವರ ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಇರುತ್ತದೆ. ಇದಾದ ಮೇಲೆ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

Advertisment

ಈ ಹುದ್ದೆಗೆ ಸಂಬಂಧದ ದಿನಾಂಕಗಳು-

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- ಅಕ್ಟೋಬರ್ 23, 2024

ಹುದ್ದೆಗೆ ಸಂಬಂಧಿಸಿದ ಲಿಂಕ್- https://rrcrecruit.co.in/ActAprt2425Vdt01/Notification_2425.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment