/newsfirstlive-kannada/media/post_attachments/wp-content/uploads/2024/01/Maldives-Easemy-Trip.jpg)
ಮಾಲ್ಡೀವ್ಸ್ ಪ್ರವಾಸದ ವಿರುದ್ಧ ಭಾರತೀಯರ ಅಭಿಯಾನಕ್ಕೆ ಭರ್ಜರಿ ಬೆಂಬಲ ವ್ಯಕ್ತವಾಗುತ್ತಿದೆ. ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿರುವ ಮಾಲ್ಡೀವ್ಸ್ ನಾಯಕರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಅಭಿಯಾನದ ಹಿನ್ನೆಲೆಯಲ್ಲಿ ಈಸಿ ಮೈ ಟ್ರಿಪ್ಸ್ ತನ್ನ ಮಾಲ್ಡೀವ್ಸ್ ಪ್ರವಾಸದ ಎಲ್ಲಾ ವಿಮಾನಗಳ ಬುಕ್ಕಿಂಗ್ ಅನ್ನು ರದ್ದು ಮಾಡಿದೆ.
ಮಾಲ್ಡೀವ್ಸ್ ವಿರುದ್ಧ ವ್ಯಕ್ತಪಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರೋ ಅಭಿಯಾನಕ್ಕೆ ಕೋಟ್ಯಾಂತರ ಮಂದಿ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿ ಈಸಿ ಮೈ ಟ್ರಿಪ್ಸ್ ಮಾಲ್ಡೀವ್ಸ್‌ಗೆ ವಿಮಾನ ಬುಕ್ಕಿಂಗ್ ರದ್ದು ಮಾಡಿದೆ. ಭಾರತದಿಂದ ಮಾಲ್ಡೀವ್ಸ್‌ಗೆ ಹೋಗುತ್ತಿದ್ದವರು ಬುಕ್ ಮಾಡಿದ್ದ 10 ಸಾವಿರ ರೂಮು, 5,520 ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಲಾಗಿದೆ.
ಇದನ್ನೂ ಓದಿ: ಭಾರತವನ್ನು ಕೆಣಕಿ ಕೈಸುಟ್ಟುಕೊಂಡ ಮಾಲ್ಡೀವ್ಸ್.. ಕಂಗನಾ, ತೆಂಡುಲ್ಕರ್ ಸೇರಿ ಸೆಲೆಬ್ರಿಟಿಗಳಿಂದಲೂ ತಪರಾಕಿ..!
ಬೆಂಗಳೂರಲ್ಲಿ ಈಸಿ ಮೈ ಟ್ರಿಪ್ಸ್ ಸಂಸ್ಥಾಪಕ ಪ್ರಶಾಂತ್ ಪಿಟ್ಟಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ನಮ್ಮ ಕಂಪನಿ ಮೇಡ್ ಇನ್ ಇಂಡಿಯಾ ಕಂಪನಿಯಾಗಿದೆ. ಮಾಲ್ಡೀವ್ಸ್ ಸಂಸದರು ನಮ್ಮ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಹೀಗಾಗಿ ನಾವು ಮಾಲ್ಡೀವ್ಸ್‌ಗೆ ಯಾವುದೇ ವಿಮಾನ ಟಿಕೆಟ್ ಬುಕ್ಕಿಂಗ್ ಮಾಡಲ್ಲ. ಅಯೋಧ್ಯೆ, ಲಕ್ಷದ್ವೀಪ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಬೇಕೆಂದು ನಾವು ಬಯಸುತ್ತೇವೆ. ಈಗಾಗಲೇ ಭಾರತದಿಂದ ಮಾಲ್ಡೀವ್ಸ್‌ಗೆ ವಿಮಾನ ಟಿಕೆಟ್ ಬುಕ್ಕಿಂಗ್ ರದ್ದು ಮಾಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
Now, @ppitti co-founder @EaseMyTrip, has joined the upsurge against the #Maldives, calling for a boycott and prioritizing Indian islands over those who spit venom against our Nation.
Great Decision Mr. Prashant Pitti.#NationFirst#BoycottMaldivespic.twitter.com/0TnzcpjrFA— Mohit Suryavanshi (@IMAntiSecular)
Now, @ppitti co-founder @EaseMyTrip, has joined the upsurge against the #Maldives, calling for a boycott and prioritizing Indian islands over those who spit venom against our Nation.
Great Decision Mr. Prashant Pitti.#NationFirst#BoycottMaldivespic.twitter.com/0TnzcpjrFA— Saffron_Syndicate (@SaffronSyndcate) January 8, 2024
">January 8, 2024
ಸೋಷಿಯಲ್ ಮೀಡಿಯಾದ ಹಲವು ತಾಣದಲ್ಲಿ ಮಾಲ್ಡೀವ್ಸ್ ವಿರುದ್ಧ ದೇಶಾಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಲ್ಡೀವ್ಸ್ ಪ್ರವಾಸಕ್ಕಿಂತ ಭಾರತವೇ ಶ್ರೇಷ್ಟ. ಚಲೋ ಲಕ್ಷದ್ವೀಪ ಎಂದು ಲಕ್ಷದ್ವೀಪದ ಸುಂದರ ತಾಣಗಳ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ