/newsfirstlive-kannada/media/post_attachments/wp-content/uploads/2024/10/Chewing-Gum.jpg)
ಚ್ಯೂಯಿಂಗ್ ಗಮ್ (Chewing Gum) ತಿನ್ನುವ ಅಭ್ಯಾಸ ಅನೇಕರಿಗಿದೆ. ಕೇಲವರು ಮೋಜಿಗಾಗಿ ತಿನ್ನುತ್ತಾರೆ. ಇನ್ನು, ಕೆಲವರು ಬೇಸರದಿಂದ ಅಥವಾ ಬಾಯಿ ದುರ್ವಾಸನೆಯಿಂದ ಅಗೆಯುತ್ತಿರುತ್ತಾರೆ. ಚಿಕ್ಕ ಮಕ್ಕಳು ಹೆಚ್ಚಾಗಿ ಚ್ಯೂಯಿಂಗ್ ಗಮ್ಗೆ ಅಡಿಕ್ಟ್ ಆಗಿರುತ್ತಾರೆ. ಆದರೆ ವಿಪರಿತ ಬಬಲ್ ಗಮ್ ತಿನ್ನುತ್ತಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ!
ಚ್ಯೂಯಿಂಗ್ ಗಮ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಆಗೊಮ್ಮೆ ಈಗೊಮ್ಮೆ ತಿಂದರೆ ಆರೋಗ್ಯಕ್ಕೆ ಸಮಸ್ಯೆ ಇಲ್ಲ. ದಿನನಿತ್ಯ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಬಬಲ್ ಗಮ್ ದೀರ್ಘಕಾಲ ಜಗಿಯುವುದರಿಂದ ದವಡೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕಿವಿ ನೋವು ಮತ್ತು ತಲೆನೋವು ಬರುತ್ತದೆ. ಆದ್ದರಿಂದ ಹೆಚ್ಚು ಅಗಿಯಬೇಡಿ! ಮಕ್ಕಳು ಹೆಚ್ಚಾಗಿ ತಿನ್ನೋದ್ರಿಂದ ಮಕ್ಕಳ ಮೇಲೆ ಪೋಷಕರು ಒಂದು ಕಣ್ಣಿಡಬೇಕು.
ಇದನ್ನೂ ಓದಿ: ಗೃಹ ಆರೋಗ್ಯ ಯೋಜನೆಗೆ CM ಸಿದ್ದರಾಮಯ್ಯ ಚಾಲನೆ.. ಬಿಪಿ, ಶುಗರ್, ಕ್ಯಾನ್ಸರ್ ತಪಾಸಣೆ; ಉಚಿತ ಔಷಧಿ ಪೂರೈಕೆ
ಚ್ಯೂಯಿಂಗ್ ಗಮ್‌ನಂತಹ ವಸ್ತುಗಳಿಗೆ ಸಕ್ಕರೆಯ ಅಂಶ ಸೇರಿಸಲಾಗುತ್ತದೆ. ಅತಿಯಾಗಿ ತಿನ್ನುವುದರಿಂದ ಹಲ್ಲಿನ ಮೇಲಿರುವ ಎನಾಮಲ್ಗೆ ಹಾನಿಯಾಗುತ್ತದೆ. ಇದು ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಜೊತೆಗೆ ದೇಹದಲ್ಲಿ ಸಕ್ಕರೆಯ ಪ್ರಮಾಣವೂ ಹೆಚ್ಚಾಗಬಹುದು. ಅದೇ ಉದ್ದೇಶಕ್ಕಾಗಿ ಚ್ಯೂಯಿಂಗ್ ಗಮ್ ತಿನ್ನುವವರಲ್ಲಿ ಜೀರ್ಣಕ್ರಿಯೆಯ ಸಮಸ್ಯೆಗಳು ಕಂಡುಬರುತ್ತವೆ. ಗ್ಯಾಸ್, ಹೊಟ್ಟೆ ಉಬ್ಬಿಕೊಳ್ಳುವುದು ಕೂಡ ಕಂಡುಬರುತ್ತದೆ. ಅನೇಕ ರೀತಿಯ ರಾಸಾಯನಿಕಗಳನ್ನು ಇದಕ್ಕೆ ಸೇರಿಸಲಾಗುತ್ತದೆ. ಕ್ಯಾನ್ಸರ್ ಕೂಡ ಬರಬಹುದು ಎನ್ನುತ್ತಾರೆ ತಜ್ಞರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ