ಫ್ರೆಂಚ್​ ಫ್ರೈಸ್ ತಿನ್ನುವ ಮುನ್ನ ಇತ್ತ ಗಮನಿಸಿ; ನಿಮ್ಮ ಆ ನೆಚ್ಚಿನ ತಿಂಡಿ ಎಷ್ಟು ಸಿಗರೇಟ್​ಗೆ ಸಮ ಗೊತ್ತಾ?

author-image
Gopal Kulkarni
Updated On
ಫ್ರೆಂಚ್​ ಫ್ರೈಸ್ ತಿನ್ನುವ ಮುನ್ನ ಇತ್ತ ಗಮನಿಸಿ; ನಿಮ್ಮ ಆ ನೆಚ್ಚಿನ ತಿಂಡಿ ಎಷ್ಟು ಸಿಗರೇಟ್​ಗೆ ಸಮ ಗೊತ್ತಾ?
Advertisment
  • ಫ್ರೆಂಚ್ ಫ್ರೈಸ್ ತಿನ್ನುವುದರಿಂದ ನಿಮ್ಮ ಹೃದಯಕ್ಕೆ ಇವೆ ಹಲವು ಸಮಸ್ಯೆ
  • ಒಂದು ಫ್ರೆಂಚ್​ ಫ್ರೈಸ್ ತಿನ್ನುವುದು, ದಿನಕ್ಕೆ 25 ಸಿಗರೇಟ್​ ಸೇದುವುದು ಒಂದೇ
  • ಫ್ರೆಂಚ್ ಫ್ರೈಸ್ ತಯಾರಿಸುವ ವಿಧಾನದಲ್ಲಿಯೇ ಇವೆ ನೂರಾರು ಆಪತ್ತುಗಳು

ಫ್ರೆಂಚ್​ಫ್ರೈಸ್ ಕೇವಲ ಭಾರತದಲ್ಲಿಯೇ ಅಲ್ಲ ಇಡೀ ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯ ಸ್ನ್ಯಾಕ್ಸ್.ಬರ್ಗರ್ ಜೊತೆ ಸೈಡ್ಸ್​ ಆಗಿ ಅದನ್ನು ತಿಂದು ಎಂಜಾಯ್ ಮಾಡುವವರು ವಿಶ್ವಾದ್ಯಂತವಿದ್ದಾರೆ. ಫ್ರೆಂಚ್​ಫ್ರೈಸ್​ನಲ್ಲಿರುವ ಕುರುಕುಕುರುತನ ಉಪ್ಪಿನ ರುಚಿ ಆಹಾರ ಪ್ರೇಮಿಗಳನ್ನು ಗೊತ್ತಿಲ್ಲದಂತೆಯೇ ಆಕರ್ಷಿಸಿ ಬಿಡುತ್ತದೆ. ಆದ್ರೆ ಈ ರುಚಿಕರವಾದ ತಿಂಡಿ ತಿನ್ನುವುದರಿಂದ ಅದು ತನ್ನೊಂದಿಗೆ ಅನೇಕ ರೋಗಗಳನ್ನು ಕೂಡ ನಿಮ್ಮ ದೇಹಕ್ಕೆ ಸೇರಿಸುತ್ತದೆ.

ಒಂದು ಫ್ರೆಂಚ್​ ಫ್ರೈಸ್ 25 ಸಿಗರೇಟ್​ಗೆ ಸಮ ಎಂದೇ ಹೇಳಲಾಗುತ್ತದೆ. ಇತ್ತೀಚಿನ ಅಧ್ಯಯನಗಳು ಫ್ರೆಂಚ್​ ಫ್ರೈಸ್​ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಅನ್ನೋ ಆತಂಕಕಾರಿ ವಿಷಯವನ್ನು ಆಚೆ ತೆರೆದಿಟ್ಟಿದೆ.ಇದು ನಿಮ್ಮ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಕ್ಯಾನ್ಸರ್​​ನಂತಹ ಮಾರಕ ರೋಗ ತಂದಿಡುವ ದೊಡ್ಡ ಅಪಾಯ ಫ್ರೆಂಚ್​ ಫ್ರೈಸ್​ನಲ್ಲಿದೆ. ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವೂ ಕೂಡ ಈ ಫ್ರೆಂಚ್​ ಫ್ರೈಸ್​ ತಿನ್ನುವುದರಿಂದ ಇದೆ.

ಇದನ್ನೂ ಓದಿ:ಕಣ್ಣನ್ನು ತುಂಬಾ ಹೈರಾಣುಗುವಂತೆ ದುಡಿಸಬೇಡಿ; ಈ ನಿಯಮ ಪಾಲಿಸಿ ನಯನಗಳ ಆರೋಗ್ಯ ಕಾಪಾಡಿ

ಫ್ರೆಂಚ್​ ಫ್ರೈಸ್ ಇಷ್ಟು ಆರೋಗ್ಯಕ್ಕೆ ಅಪಾಯಕಾರಿ ಆಗಲು ಕಾರಣವೇ ಅದನ್ನು ತಯಾರು ಮಾಡುವ ವಿಧಾನ. ಫ್ರೆಂಚ್​ ಫ್ರೈಸ್​ನ್ನು ಅತಿಯಾದ ಉರಿಯಲ್ಲಿ, ಕಾಯ್ದ ಎಣ್ಣೆಯಲ್ಲಿ ಕುರುಕುರು ಆಗುವವರೆಗೂ ಫ್ರೈ ಮಾಡುವುದರಿಂದ, ಆರೋಗ್ಯಕ್ಕೆ ಅಪಾಯ ತಂದಿಡಬಲ್ಲ ಅಂಶಗಳು ಅದರಲ್ಲಿ ಸೇರಿಕೊಳ್ಳುತ್ತವೆ. ಹೃದ್ರೋಗ ತಜ್ಞ ರವೀಂದ್ರ ಸಿಂಗ್ ರಾವ್​ ಅವರು ಹೇಳುವ ಪ್ರಕಾರ ಆಲೂಗಡ್ಡೆಯನ್ನು ಫ್ರೈ ಮಾಡುವ ಎಣ್ಣೆಯೇ ದೊಡ್ಡ ಅಪಾಯ ಎಂದಿದ್ದಾರೆ. ಫ್ರೆಂಚ್​ ಫ್ರೈಸ್ ಮಾಡುವಾಗ ಯಾರು ಯಾವ ಬಗೆಯ ಎಣ್ಣೆಯನ್ನು ಉಪಯೋಗಿಸುತ್ತಾರೆ ಅನ್ನೋದು ನಮಗೆ ಗೊತ್ತಿರುವುದಿಲ್ಲ. ಅದೇ ಎಣ್ಣೆಯನ್ನು ಪದೇ ಪದೇ ಎಷ್ಟು ಬಾರಿ ಉಪಯೋಗಿಸುತ್ತಾರೆ ಎಂಬುವುದು ಕೂಡ ಗೊತ್ತಿರುವುದಿಲ್ಲ. ಪ್ರತಿ ಬಾರಿ ಎಣ್ಣೆಯನ್ನು ಮರು ಕಾಯಿಸಿದಾಗ ಅದು ಫ್ಯಾಟಿ ಆ್ಯಸಿಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದು ಹೃದಯಕ್ಕೆ ತುಂಬಾ ಅಪಾಯಕಾರಿ ಎನ್ನುತ್ತಾರೆ ರವೀಂದ್ರ ಸಿಂಗ್ ರಾವ್​.

ಇದನ್ನೂ ಓದಿ: ಕನಸೇ ನಮ್ಮ ಅನಾರೋಗ್ಯದ ಬಗ್ಗೆ ಎಚ್ಚರಿಸುತ್ತೆ ಎಂದರೆ ನಂಬಲೇಬೇಕು! ಏನಿದು ಹೊಸ ಸ್ಟಡಿ?

ಇದರಿಂದ ದೇಹದಲ್ಲಿ ವಿಪರೀತ ಬೊಜ್ಜು ಸೃಷ್ಟಿಯಾಗುತ್ತದೆ. ಹೃದಯರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಿ. ಹೃದಯಕ್ಕೆ ದೀರ್ಘಕಾಲ ಪೀಡಿಸುವ ಆರೋಗ್ಯ ಸಮಸ್ಯೆಗಳು ಉತ್ಪತ್ತಿಯಾಗುತ್ತವೆಯಂತೆ. ಡಾ ರಾವ್ ಅವರು ಹೇಳುವ ಪ್ರಕಾರ ನೀವು ಒಂದು ಭಾರಿ ತಿನ್ನುವ ಫ್ರೆಂಚ್ ಫ್ರೈಸ್ 25 ಸಿಗರೇಟ್​ಗಳಿಗೆ ಸಮ ಎಂದಿದ್ದಾರೆ. ಈ ತರದ ತಿಂಡಿಯನ್ನು ಕರಿದ ಎಣ್ಣೆಯಲ್ಲಿಯೇ ಹಲವು ಬಾರಿ ಕರಿಯುವುದರಿಂದ ಅದರಲ್ಲಿ ಬೊಜ್ಜಿನ ಪ್ರಮಾಣ ವಿಪರೀತವಾಗಿ ಹೆಚ್ಚುತ್ತದೆ.ಹೀಗಾಗಿ ಫ್ರೆಂಚ್ ಫ್ರೈಸ್ ಆರೋಗ್ಯ ದೃಷ್ಟಿಯಿಂದ ಅಷ್ಟೊಂದು ಸರಿಯಾದ ಪದಾರ್ಥವಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment