/newsfirstlive-kannada/media/post_attachments/wp-content/uploads/2024/04/MANGO_HEALTH-2.jpg)
ಭಾರತದ ರಾಷ್ಟ್ರೀಯ ಹಣ್ಣು ಮಾವು. ಹಣ್ಣುಗಳ ರಾಜ ಎಂದೇ ಪ್ರಖ್ಯಾತಿ ಹೊಂದಿದೆ ಮಾವಿನ ಹಣ್ಣು. ಸದ್ಯ ಈಗ ಮಾವಿನ ಹಣ್ಣಿನ ಸೀಸನ್. ಮಾವಿನ ಹಣ್ಣಿಗೆ ಅತಿ ಹೆಚ್ಚು ಬೇಡಿಕೆ ಇದೆ. ಮಾವು ರುಚಿಕರವಾಗಿರುವುದರ ಜೊತೆಗೆ ಪೋಷಕಾಂಶಗಳಿಂದ ಕೂಡ ಸಮೃದ್ಧವಾಗಿದೆ. ಈ ಮಾವಿನ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನ ಆಗುತ್ತದೆ ಎಂದು ತಿಳಿದುಕೊಳ್ಳಿ.
ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ವೀಕ್ಷಕರಿಗೆ ಶಾಕಿಂಗ್ ಸುದ್ದಿ; ಮುಕ್ತಾಯದ ಹಂತದಲ್ಲಿದೆ ಟಾಪ್ ಸೀರಿಯಲ್
ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಜೊತೆಗೆ ಪೊಟ್ಯಾಸಿಯಮ್, ಬೀಟಾ-ಕ್ಯಾರೋಟಿನ್, ಫೋಲೇಟ್ ಮತ್ತು ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸೆಲೆನಿಯಮ್, ರಂಜಕ ಮತ್ತು ಮ್ಯಾಂಗನೀಸ್ ಸೇರಿದಂತೆ ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ.
ಈ ಎಲ್ಲಾ ಪೋಷಕಾಂಶಗಳು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ನಿಮ್ಮನ್ನು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗದಂತೆ ತಡೆಯುತ್ತದೆ. ಮಾವಿನ ಹಣ್ಣು ತಿನ್ನುವುದರಿಂದಾಗುವ ಈ ಮೂರು ಸಮಸ್ಯೆಗಳು ಮಂಗಮಾಯ ಆಗುತ್ತವೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ..
ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಆಹಾರದ ನಾರಿನಂಶವಿದೆ. ಆಹಾರದ ನಾರು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ. ಇದರಿಂದಾಗಿ ಮಲಬದ್ಧತೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ವಿಟಮಿನ್ ಎ, ಸಿ ಮತ್ತು ಕೆ ಕೂಡ ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ..
ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಸೋಂಕುಗಳನ್ನು ತಡೆಯುತ್ತದೆ. ಇದರಿಂದಾಗಿ ನೀವು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯುತ್ತದೆ.
ಇದು ಚರ್ಮಕ್ಕೆ ಪ್ರಯೋಜನಕಾರಿ..
ಈ ಹಣ್ಣು ವಿಟಮಿನ್ ಸಿ ಮತ್ತು ಎ ಎರಡನ್ನೂ ಹೊಂದಿರುವುದರಿಂದ, ಇದರ ಸೇವನೆಯು ನಿಮ್ಮ ಚರ್ಮವನ್ನು ದೀರ್ಘಕಾಲದವರೆಗೆ ಯೌವನದಿಂದ ಇಡಲು ಸಹಾಯ ಮಾಡುತ್ತದೆ. ಮಾವಿನಲ್ಲಿರುವ ವಿಟಮಿನ್ ಎ ಹೊಸ ಕೋಶಗಳನ್ನು ಸೃಷ್ಟಿಸಲು ಮತ್ತು ಚರ್ಮವನ್ನು ಬಿಗಿಯಾಗಿಡಲು ಅವಶ್ಯಕ. ವಿಟಮಿನ್ ಸಿ ದೇಹವನ್ನು ವಯಸ್ಸಾಗುವಿಕೆಯನ್ನು ವೇಗಗೊಳಿಸಲು ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ