/newsfirstlive-kannada/media/post_attachments/wp-content/uploads/2024/08/IPL.jpg)
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ದಿ ಹಂಡ್ರೆಡ್ (The Hundred) ಪಂದ್ಯಾವಳಿ ಆಯೋಜಿಸುತ್ತದೆ. ದಿ ಹಂಡ್ರೆಡ್-2024 ಸೀಸನ್‌ನ ಫೈನಲ್ ಭಾನುವಾರ ನಡೆಯಲಿದೆ. ಫೈನಲ್ ಪಂದ್ಯಕ್ಕೂ ಮೊದಲು ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ.
ಮಾಹಿತಿ ಪ್ರಕಾರ.. ಇನ್ಮುಂದೆ ಐಪಿಎಲ್ ತಂಡಗಳ ಹೆಸರು ಕೂಡ ದಿ ಹಂಡ್ರೆಡ್​ನಲ್ಲಿ ಇರಲಿದೆ. ಅಂದರೆ ಐಪಿಎಲ್ ತಂಡಗಳು ದಿ ಹಂಡ್ರೆಡ್ ಟೂರ್ನಮೆಂಟ್ ತಂಡಗಳ ಷೇರುಗಳಲ್ಲಿ ಒಂದು ಭಾಗವನ್ನು ಖರೀದಿಸಿಬಹುದು. ಜೊತೆಗೆ ಅದರ (ತಂಡದ) ಹೆಸರನ್ನೂ ಬದಲಾಯಿಸಬಹುದು! ಉದಾಹರಣೆಗೆ.. ಆರ್​ಸಿಬಿ ಫ್ರಾಂಚೈಸಿಯು ದಿ ಹಂಡ್ರೆಡ್‌ನ ಯಾವುದೇ ತಂಡದ ಷೇರುಗಳನ್ನು ಖರೀದಿಸಿದರೆ ಆ ತಂಡಕ್ಕೆ ತನ್ನ ಆಯ್ಕೆಯ ಹೆಸರನ್ನು ಇಡಬಹುದು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಶೀಘ್ರದಲ್ಲೇ ಇದಕ್ಕೆ ಗ್ರೀನ್ ಸಿಗ್ನಲ್ ಕೊಡಲಿವೆ ಎಂದು ಸುದ್ದಿಯಾಗಿದೆ.
ಯಾಕೆ ಈ ಐಡಿಯಾ?
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಭಾರತೀಯ ಬಂಡವಾಳವನ್ನು ದಿ ಹಂಡ್ರೆಡ್‌ಗೆ ತರಲು ಬಯಸಿದೆ. ಐಪಿಎಲ್ ತಂಡಗಳು ದಿ ಹಂಡ್ರೆಡ್ ತಂಡಗಳಲ್ಲಿ ಷೇರುಗಳನ್ನು ಖರೀದಿಸಬೇಕೆಂದು ECB ಬಯಸುತ್ತಿದೆ. ದಿ ಹಂಡ್ರೆಡ್‌ನಲ್ಲಿ ಒಟ್ಟು 8 ತಂಡಗಳಿವೆ. ಎಲ್ಲಾ 10 ಐಪಿಎಲ್ ತಂಡಗಳು ದಿ ಹಂಡ್ರೆಡ್‌ನಲ್ಲಿ ಷೇರುಗಳನ್ನು ಖರೀದಿಸುವುದನ್ನು ಖಚಿತಪಡಿಸಿಕೊಳ್ಳಲು ಇಸಿಬಿ ಪ್ರಯತ್ನಿಸುತ್ತಿದೆ.
ಮಾಹಿತಿ ಪ್ರಕಾರ.. ಬಹುತೇಕ ಐಪಿಎಲ್ ತಂಡಗಳು ಈ ಬಿಡ್‌ಗೆ ಸಿದ್ಧವಾಗಿವೆ. ಆದರೆ ಕೆಲವು ನಿಯಮಗಳು ಮತ್ತು ಷರತ್ತುಗಳಿರುತ್ತವೆ. ಒಂದು ವೇಳೆ ಐಪಿಎಲ್ ತಂಡಗಳು ಷೇರು ಖರೀದಿಸಿದರೆ ದಿ ಹಂಡ್ರೆಡ್‌ನಲ್ಲಿ ತಂಡಗಳ ಹೆಸರು ಬದಲಾಗುವ ಸಾಧ್ಯತೆ ಇವೆ. ಪ್ರಸ್ತುತ ಮುಂಬೈ ಇಂಡಿಯನ್ಸ್ ವಿಶ್ವದಾದ್ಯಂತ ಲೀಗ್‌ಗಳಲ್ಲಿ ಒಟ್ಟು 5 ತಂಡಗಳನ್ನು ಹೊಂದಿದೆ. ಮುಂಬೈ ಇಂಡಿಯನ್ಸ್ ಹೊರತುಪಡಿಸಿ, MI ನ್ಯೂಯಾರ್ಕ್, MI ಎಮಿರೇಟ್ಸ್ ಮತ್ತು MI ಕೇಪ್ ಟೌನ್ ಸೇರಿವೆ. ಮಾಧ್ಯಮ ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ದಿ ಹಂಡ್ರೆಡ್‌ನಲ್ಲಿ ಲಂಡನ್ ಸ್ಪಿರಿಟ್ಸ್‌ನಲ್ಲಿ ಹಣವನ್ನು ಹೂಡಿಕೆ ಮಾಡಬಹುದು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್