Advertisment

ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​ಗೆ ಬಿಗ್ ಶಾಕ್.. ಎಲೆಕ್ಷನ್​ ಕಮಿಷನ್ ನೋಟಿಸ್

author-image
Bheemappa
ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​ಗೆ ಬಿಗ್ ಶಾಕ್.. ಎಲೆಕ್ಷನ್​ ಕಮಿಷನ್ ನೋಟಿಸ್
Advertisment
  • ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೂ ಈಗಾಗಲೇ ಸೂಚಿಸಿದ ಇಸಿಐ
  • ಯಾರನ್ನೂ ಅವಮಾನಿಸುವ, ನೋಯಿಸುವಂತಹ ಉದ್ದೇಶ ನನಗೆ ಇಲ್ಲ
  • ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆ ಆಗುವ ಹೇಳಿಕೆ ಯಾವತ್ತೂ ನೀಡಿಲ್ಲ

ನವದೆಹಲಿ: ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಬೆನ್ನಲ್ಲೇ ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾಗೆ ಶೋಕಾಸ್ ನೋಟಿಸ್ ನೀಡಿದೆ. ಈ ಬಗ್ಗೆ ಏಪ್ರಿಲ್ 11ರ ಸಂಜೆಯೊಳಗೆ ಉತ್ತರಿಸುವಂತೆ ಸೂಚನೆ ನೀಡಿದೆ.

Advertisment

ಕಾಂಗ್ರೆಸ್​ ನಾಯಕ ರಣದೀಪ್ ಸುರ್ಜೇವಾಲಾ ಅವರು ಸಭೆಯೊಂದರಲ್ಲಿ ಬಿಜೆಪಿ ಸಂಸದೆ ಹಾಗೂ ನಟಿ ಹೇಮಾ ಮಾಲಿನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಚುನಾವಣಾ ಆಯೋಗವು ಲೋಕಸಭಾ ಎಲೆಕ್ಷನ್​ನಲ್ಲಿ ಯಾವುದೇ ಮಹಿಳೆಯ ಘನತೆ, ಗೌರವಕ್ಕೆ ಧಕ್ಕೆ ಆಗದಂತೆ ಹೇಳಿಕೆ ನೀಡಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ.. ಬೀದಿ ಬದಿಯಲ್ಲಿ ಹಣ್ಣುಗಳನ್ನ ಕಟ್ ಮಾಡಿ ಮಾರಾಟ ಬ್ಯಾನ್‌; ಕಾರಣವೇನು?

ಇನ್ನು ಎಲೆಕ್ಷನ್​ ಕಮಿಷನ್​ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದು ಕೇಳಿದೆ. ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೂ ಈ ಕುರಿತು ಸೂಚನೆ ನೀಡಲಾಗಿದೆ. ಪ್ರಚಾರದ ವೇಳೆ ಯಾವುದೇ ಮಹಿಳೆಯರ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಬಾರದು ಎಂದು ಆಯೋಗ ಖಡಕ್ ಆಗಿ ಹೇಳಿದೆ ಎಂದು ತಿಳಿದು ಬಂದಿದೆ.

Advertisment

ಇದನ್ನೂ ಓದಿ: PU Result: ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ.. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಣದೀಪ್ ಸುರ್ಜೇವಾಲಾ ಅವರು, ಸಂಸದೆ ಮತ್ತು ನಟಿ ಹೇಮಾ ಮಾಲಿನಿ ಅವರನ್ನು ಅವಮಾನಿಸುವ, ನೋಯಿಸುವ ಉದ್ದೇಶ ನನಗೆ ಇಲ್ಲ. ಯಾರೋ ದಿನಾಂಕವಿಲ್ಲದ ವೀಡಿಯೊವನ್ನು ಎಡಿಟ್ ಮಾಡಿ ತಿರುಚಲಾಗಿದೆ. ಇಂತಹ ಹೇಳಿಕೆ ಎಂದಿಗೂ ನಾನು ಹೇಳಿಲ್ಲ. ಇದನ್ನ ಬೇಕಂತಲೇ ಸೃಷ್ಟಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment