ಡಿಮ್ಯಾಂಡಪ್ಪೋ ಡಿಮ್ಯಾಂಡ್..​​ ಪೇಪರ್​ ಗಣಪನಿಗೆ ಫುಲ್​ ಡಿಮ್ಯಾಂಡ್​​

author-image
AS Harshith
Updated On
ಡಿಮ್ಯಾಂಡಪ್ಪೋ ಡಿಮ್ಯಾಂಡ್..​​ ಪೇಪರ್​ ಗಣಪನಿಗೆ ಫುಲ್​ ಡಿಮ್ಯಾಂಡ್​​
Advertisment
  • ಪೇಪರ್‌ ಗಣೇಶಗಳ ಖರೀದಿಯತ್ತ ಹೆಚ್ಚು ಒಲವು
  • ಈ ವರ್ಷ ಪೇಪರ್ ಗಣಪನಿಗೆ 20 ಪರ್ಸೆಂಟ್ ಡಿಮ್ಯಾಂಡ್​ ಹೆಚ್ಚು
  • ಪಿಒಪಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಬಿಬಿಎಂಪಿ ನಿಷೇಧ

ಗೌರಿ-ಗಣೇಶ ಹಬ್ಬಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಸಂಭ್ರಮ. ಸಡಗರಕ್ಕೆ ಸಿದ್ಧತೆ ಜೋರಾಗಿದೆ. ಅತ್ತ ಗಣೇಶ ಮೂರ್ತಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಸಿಟಿಯ ಅಂಗಡಿಗಳು ಮಕ್ಕಳು- ಯುವಕರಿಂದ ಫುಲ್ ರಶ್ ಆಗಿದೆ. ಆದರೆ‌ ಮಣ್ಣಿನ ಮೂರ್ತಿಗಳ ತಯಾರಿ ಬೇಡಿಕೆಯಷ್ಟು ಆಗ್ತಿಲ್ಲ.ಅತ್ತ ಸರ್ಕಾರ ಪಿಒಪಿ ಗಣಪನಿಗೆ ನಿಷೇಧ ಹೇರಿದೆ‌. ಅದಕ್ಕಾಗಿ ಗಣೇಶ ತಯಾರಕರು ಪರಿಸರ ಸ್ನೇಹಿ ಪೇಪರ್ ಗಣಪ ಮೂರ್ತಿ ತಯಾರಿಸಿದ್ದಾರೆ. ಈ ಪೇಪರ್ ಗಣಪನಿಗೆ ಸಿಲಿಕನ್ ಸಿಟಿಯಲ್ಲಿ ಭರ್ಜರಿ ಡಿಮ್ಯಾಂಡ್ ಬಂದಿದೆ.

ಕೆರೆಗಳು ಕಲುಷಿತವಾಗುತ್ತೆ ಅಂತ ಪಿಒಪಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಬಿಬಿಎಂಪಿ ನಿಷೇಧ ಹೇರಿದೆ. ಹೀಗಾಗಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಜೇಡಿ ಮಣ್ಣಿಗೆ ಕೊರತೆ ಹಿನ್ನೆಲೆಯಲ್ಲಿ ಮಣ್ಣಿನ ಮೂರ್ತಿ ಸಿಗದೆ ಜನ ಪರದಾಡುತ್ತಿದ್ದಾರೆ. ಹೀಗಾಗಿ ಈ ವರ್ಷ ಪೇಪರ್‌ ಮೂರ್ತಿಗಳ ಮೊರೆ ಹೋಗುತ್ತಿದ್ದಾರೆ. ಕೆರೆ ಮಾಲಿನ್ಯವು ತಡೆಗಟ್ಟು ಅಂತಾರೆ ವ್ಯಾಪರಸ್ಥರು.

ಪೇಪರ್ ಗಣಪನಿಗೆ ಡಿಮ್ಯಾಂಡ್

ಮಣ್ಣಿನ ಮೂರ್ತಿಗಳಾದರೆ 5 ಅಡಿಗಿಂತ ಹೆಚ್ಚು ಎತ್ತರ ನಿರ್ಮಿಸುವುದು ಕಷ್ಟ..ಆದರೆ ಪೇಪರ್ ಗಣಪತಿ ಆದರೆ 10 ಅಡಿಗೂ ಹೆಚ್ಚು ಎತ್ತರದ ಮೂರ್ತಿಗಳನ್ನು ಮಾಡಬಹುದು. ಅಲ್ಲದೆ ಪೇಪರ್‌ ಮೂರ್ತಿಗಳನ್ನು ತಯಾರಿಸುವುದು ಕಷ್ಟ. ಆದರೆ, ತುಂಬಾ ಹಗುರವಾಗಿದ್ದು, ನಿರ್ವಹಣೆಯೂ ಸುಲಭ. ಪೂಜೆಯ ನಂತರ ವಿಸರ್ಜನೆಗೂ ತೊಡಕಿಲ್ಲ. ಈ ಬಗೆಯ ಗಣಪತಿಗಳಿಂದ ಪರಿಸರಕ್ಕೂ ಹಾನಿಯಾಗದು. ಹೀಗಾಗಿ, ತಯಾರಕರು ಮತ್ತು ಗ್ರಾಹಕರು ಪೇಪರ್‌ ಗಣೇಶಗಳ ಖರೀದಿಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ.

ಒಟ್ಟಿನಲ್ಲಿ ಒಂದು ಕಡೆ ಗಣಪನ ಹಬ್ಬಕ್ಕೆ ಮೂರ್ತಿಗಳ ಮಾರಾಟ ಜೋರಾಗಿದೆ. ಮತ್ತೊಂದೆಡೆ ಪಿಓಪಿಗೆ ಕಡಿವಾಣ ಹಾಕಿರೋದು ವ್ಯಾಪಾರಿಗಳನ್ನ ಹೈರಾಣಾಗಿಸಿದೆ. ಹೀಗಾಗಿ ಪೇಪರ್ ಗಣೇಶನ ಮೊರೆ ಹೋಗಿದ್ದಾರೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಪೇಪರ್ ಗಣಪನಿಗೆ 20 ಪರ್ಸೆಂಟ್ ಹೆಚ್ಚಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment