/newsfirstlive-kannada/media/post_attachments/wp-content/uploads/2024/07/GOLD.jpg)
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ 2024-25 ವರದಿ ಮಂಡಿಸಿದ್ದಾರೆ. ಸಮೀಕ್ಷೆಯ ಪ್ರಕಾರ, 2025ರಲ್ಲಿ ಚಿನ್ನದ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಸರಕುಗಳ ಬೆಲೆಗಳು 2025ರಲ್ಲಿ ಶೇಕಡಾ 5.1 ರಷ್ಟು ಮತ್ತು 2026ರಲ್ಲಿ ಶೇಕಡಾ 1.7 ರಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ತಿಳಿಸಿದೆ.
ಚಿನ್ನದ ಬೆಲೆಯಲ್ಲಿ ಇಳಿಕೆ
ಬೆಲೆಬಾಳುವ ಲೋಹಗಳ ಪೈಕಿ ಚಿನ್ನದ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದ್ದು, ಬೆಳ್ಳಿ ಬೆಲೆ ಏರಿಕೆಯಾಗಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಲೋಹ, ಖನಿಜಗಳ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಕಬ್ಬಿಣದ ಅದಿರಿನ ಜತೆಗೆ ತಾಮ್ರದ ಬೆಲೆಯೂ ಇಳಿಕೆಯಾಗಲಿದೆ. ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಬೆಲೆಗಳಲ್ಲಿನ ಇಳಿಕೆಯು ದೇಶೀಯ ಹಣದುಬ್ಬರದ ದೃಷ್ಟಿಕೋನಕ್ಕೆ ಪ್ಲಸ್ ಆಗಲಿದೆ ಅಂತಾ ಸಮೀಕ್ಷೆ ತಿಳಿಸಿದೆ.
ಇದನ್ನೂ ಓದಿ: Budget ಬೆನ್ನಲ್ಲೇ ಸ್ಮಾರ್ಟ್ಫೋನ್, ಎಲೆಕ್ಟ್ರಿಕ್ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ.. ದೊಡ್ಡ ಬೇಡಿಕೆ ಇಟ್ಟಿರುವ ಟೆಕ್
ಭಾರತದಲ್ಲಿ ಚಿನ್ನದ ಆಮದು ಹೆಚ್ಚಳಕ್ಕೆ ಕಾರಣಗಳು..!
- ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ, ವಿದೇಶಿ ವಿನಿಮಯದಲ್ಲಿ ಏರಿಳಿತ
- ಹೊಸ ಹೊಸ ಉದಯೋನ್ಮುಖ ಮಾರುಕಟ್ಟೆಗಳ ಉದಯ
- ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನದ ಆಮದು ಹೆಚ್ಚುತ್ತಿರೋದು
- ಜಾಗತಿಕ ಬೆಲೆಗಳು, ಹಬ್ಬ, ಮದುವೆ ಸಮಾರಂಭಗಳಿಗೆ ಹೆಚ್ಚು ಬೇಡಿಕೆ
- ಸುರಕ್ಷಿತ ಸ್ವತ್ತು ಆಗಿ ಚಿನ್ನಾಭರಣ ಬಳಕೆ ಮಾಡಲಾಗುತ್ತಿದೆ
- ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶ ಭಾರತ
ಚಿನ್ನದ ಬೆಲೆಯಲ್ಲಿ ನಿರೀಕ್ಷಿತ ಕುಸಿತವು ಹೂಡಿಕೆದಾರರ ಭಾವನೆ ಮೇಲೆ ಪರಿಣಾಮ ಬೀರಬಹುದು ಎಂದು ಸಮೀಕ್ಷೆ ಹೇಳಿದೆ. ಆದರೆ ಬೆಳ್ಳಿಯ ಬೆಲೆಯಲ್ಲಿ ನಿರೀಕ್ಷಿತ ಏರಿಕೆ ಇರಲಿದೆ ಎಂದು ಹೇಳಿದೆ.
ಇದನ್ನೂ ಓದಿ: Budget : ಬೆಂಗಳೂರು ಮಂದಿಯಿಂದ ಭಾರೀ ನಿರೀಕ್ಷೆ.. ಬಜೆಟ್ನಲ್ಲಿ ಏನೆಲ್ಲ ಕೊಡಬಹುದು ಮೋದಿ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ