50 ಕೋಟಿ ರೂಪಾಯಿ ನಾಯಿ ಮಾಲೀಕನಿಗೆ ಬಿಗ್ ಶಾಕ್​.. ಲಾಕ್ ಮಾಡಿದ ED; ಅಸಲಿಗೆ ಏನಾಯಿತು?

author-image
Bheemappa
Updated On
50 ಕೋಟಿ ರೂಪಾಯಿ ನಾಯಿ ಮಾಲೀಕನಿಗೆ ಬಿಗ್ ಶಾಕ್​.. ಲಾಕ್ ಮಾಡಿದ ED; ಅಸಲಿಗೆ ಏನಾಯಿತು?
Advertisment
  • ಒಂದು ನಾಯಿನಾ ನ್ಯಾಷನಲ್ ಲೆವೆಲ್ ಟ್ರೆಂಡ್ ಮಾಡಿದ್ದ ಮಾಲೀಕ
  • ಸತ್ಯವಾಗಲೂ ಆ ನಾಯಿಯ ಬೆಲೆ 50 ಕೋಟಿ ರೂಪಾಯಿನಾ..?
  • ಎಲ್ಲೇ ಹೋದರೂ ತನ್ನ ದುಬಾರಿ ನಾಯಿನಾ ಕರ್ಕೊಂಡು ಹೋಗ್ತಿದ್ರು

ಇದನ್ನ ಬಿಟ್ಟಿ ಬಿಲ್ಡಪ್ ಅಂತೀರೋ, ಇಲ್ಲಾ ಪ್ಯೂರ್ ಶೋಕಿ ಅಂತೀರೋ ನಿಮಗೆ ಬಿಟ್ಟಿದ್ದು. ನಿಮಗೆ ನೆನಪಿದ್ಯಾ? ಜಸ್ಟ್​ 2 ತಿಂಗಳ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಒಂದು ಸೆನ್ಸೇಷನ್ ಶುರುವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಂತೂ ಅದ್ರದ್ದೇ ಟ್ರೆಂಡೂ, ಬ್ರ್ಯಾಂಡೂ. ಆದ್ರೆ, ಆ ಸೆನ್ಸೇಷನ್ ಹಿಂದೆ ಒಂದು ಸುಳ್ಳಿನ ಕನೆಕ್ಷನ್ ಇರೋದು ಈಗ ಗೊತ್ತಾಗಿದೆ.

ಬ್ಯೂಟಿಫುಲ್ ನಾಯಿ ಏನ್ ಸಖತ್ ಆಗಿತ್ತು. ಇದ್ರ ರೇಟೂ ₹50 ಕೋಟಿನಾ? ಮೈ ಗಾಡ್.. ಹೀಗೆ ಹೇಳಿದ್ರು ನೋಡಿ ಈ ನಾಯಿ ನೋಡಿದ ಪ್ರತಿಯೊಬ್ಬರು. ಈ ನಾಯಿ ನೋಡಿರ್ತೀರಾ ಅಂದ್ರೆ, ನಾಯಿ ಹಗ್ಗ ಹಾಕ್ಕೊಂಡ್ ಹಿಡ್ಕೊಂಡಿರೋ ವ್ಯಕ್ತಿನೂ ನೋಡಿರ್ತೀರಾ. ಎಂತಹ ಮಾಸ್ಟರ್ ಪೀಸ್ ಅಂದ್ರೆ ಈ ಆಸಾಮಿ, ನಾಯಿನಾ ನ್ಯಾಷನಲ್ ಲೆವೆಲ್ ಟ್ರೆಂಡ್ ಮಾಡಿ ಈಗ ಅವನೇ ಹೆಡ್​ಲೈನ್ಸ್​ ಆಗಿದ್ದಾನೆ.

publive-image

ನಾಯಿ ಬೆಲೆ ₹50 ಕೋಟಿ ಅಂತ ಬಿಟ್ಟಿ ಬಿಲ್ಡಪ್ ಕೊಟ್ಟಿದ್ದ..!

51 ವರ್ಷದ ಶತೀಶ್ S ಎನ್ನುವರು ಎಲ್ಲೇ ಹೋದ್ರೂ ತನ್ನ ದುಬಾರಿ ನಾಯಿನಾ ಕರ್ಕೊಂಡ್ ಹೋಗ್ತಿದ್ರು. ಹೋದಲೆಲ್ಲಾ.. ಬಂದಲೆಲ್ಲಾ, ನಮ್ ನಾಯಿ ರೇಟೂ ₹50 ಕೋಟಿ ಅಂತ ಸಾರ್ತಿದ್ರು. ಅದನ್ ಕೇಳಿದ್ ಜನ ಅಯ್ಯೋ! ಅಯ್ಯೋ ಯಾರಪ್ಪ ಇವನು 50 ಕೋಟಿ ರೂಪಾಯಿ ನಾಯಿ ಖರೀದಿಸಿದ ಸತೀಶ್​ ಅಂತ ಝೂಮ್ ಹಾಕಿದ್ರು. obviously ಸತೀಶಣ್ಣ ಟ್ರೆಂಡ್ ಆದ. ಅದ್ಯಾವ್ ಪೋಸ್ಟು ಇ.ಡಿ ಅಧಿಕಾರಿಗಳ ಕಣ್ಣಿಗೆ ಬಿತ್ತೋ ಗೊತ್ತಿಲ್ಲ ಎಂಟ್ರಿ ಕೊಟ್ಟೇ ಬಿಟ್ರು.

ಇದನ್ನೂ ಓದಿ:ವಿಸ್ಫೋಟಕ ಬ್ಯಾಟರ್​ಗಳಿದ್ದರೂ ಅಲ್ಪ ಮೊತ್ತದ ಟಾರ್ಗೆಟ್​​ ಕೊಟ್ಟ SRH.. ಎಷ್ಟು ರನ್?

publive-image

ಬಂದ್ ಬಂದವ್ರೇ ಸತೀಶಣ್ಣನ ಮನೆಗೆ ನುಗ್ಗಿದ್ರು. ನಾಯಿ ನೋಡೋಕೆ ಅಂದ್ಕೊಂಡ್ರಾ? ಇಲ್ಲಾ ಕಣ್ರೀ, 50 ಕೋಟಿ ಹಣದ ಲೆಕ್ಕಾ ಕೇಳೋಕೆ. ಇ.ಡಿ ಅಧಿಕಾರಿಗಳನ್ನ ನೋಡಿ ಶಾಕ್ ಆದ ಸತೀಶಣ್ಣ, ಆಗ ಸತ್ಯ ಬಾಯ್ಬಿಟ್ರು. ಸಾರ್.. ಅದು ಸುಮ್ನೇ ಹೇಳಿದ್ದು, ನಾಯಿ ಬೆಲೆ 50 ಕೋಟಿ ರೂಪಾಯಿ ಅಲ್ಲಾ, ಸಾರಿ ಅಂತ ಕಣ್ ಕಣ್ಣ್ ಬಿಟ್ಟಿದ್ದಾನೆ. ಪೂರ್ತಿ ಕಥೆ ಕೇಳ್ಕೊಂಡ ಇ.ಡಿ ಆಫಿಸರ್ಸ್​.. ಜಾಸ್ತಿ ಟೈಂ ಇಲ್ಲ.. ನಮ್ ಜೊತೆಗೇ ಬಂದ್ಬಿಡಿ ಅಂತ ಕರ್ಕೊಂಡ್ ಹೋದರು.

ಏನೇ ಹೇಳಿ.. ದುಬಾರಿ ನಾಯಿ ಕಥೆ ಕ್ಲೈ ಮ್ಯಾಕ್ಸ್​ನ ಇ.ಡಿ ಅಧಿಕಾರಿಗಳೇ ಎಂಡ್ ಮಾಡಿದ್ರು. ಇದ್ದಿದ್ದನ್ನ ಇದ್ದಂಗ್ ಹೇಳೋದ್ಬಿಟ್ಟು ಸುಳ್ಳನ್ನ ಸತ್ಯದ ತಲೆ ಮೇಲೆ ಹೊಡ್ದಂಗೇ ಹೇಳಿ ಇದ್ದದ್ದ ಮರ್ಯಾದೇನೂ ಕಳ್ಕೊಂಡ ಸತೀಶಣ್ಣ ಈಗ ಇ.ಡಿ ಕೈಯಲ್ಲಿ ಲಾಕ್ ಆದರು. ಮಾರಲ್ ಆಫ್ ದ ಸ್ಟೋರಿ ಇಷ್ಟೇ. ಸುಳ್ಳು ಸ್ವೀಟಾದ್ರು ಅದಕ್ಕೆ ವ್ಯಾಲಿಡಿಟಿ ಕಮ್ಮಿ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment