/newsfirstlive-kannada/media/post_attachments/wp-content/uploads/2024/08/Team-India-1.jpg)
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಏನಿದು ಕೇಸ್?
ಈ ಹಿಂದೆ ಮೊಹಮ್ಮದ್ ಅಜರುದ್ದೀನ್ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು. ಮ್ಮ ಅಧಿಕಾರಾವಧಿಯಲ್ಲಿ ಬರೋಬ್ಬರಿ 20 ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ ಎನ್ನುವ ಗಂಭೀರ ಆರೋಪ ಇದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಆಗಿರೋ ಅಜರುದ್ದೀನ್ಗೆ ಇಡಿ ಮೊದಲ ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗಬೇಕಿದೆ.
ಆರೋಪವೇನು?
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮೂಲ ಸೌಕರ್ಯಗಳಿಗೆ ಸರ್ಕಾರ 20 ಕೋಟಿ ಮಂಜೂರು ಮಾಡಿತ್ತು. ಡೀಸೆಲ್ ಜನರೇಟರ್, ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳಿಗೆ ಮಂಜೂರು ಮಾಡಿದ್ದ ಹಣ ಇದಾಗಿತ್ತು. ಈ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪ ಅಜರುದ್ದೀನ್ ವಿರುದ್ಧ ಕೇಳಿ ಬಂದಿದೆ.
ಯಾರು ಈ ಅಜರುದ್ದೀನ್?
ಅಜರುದ್ದೀನ್ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್. ಭಾರತ ತಂಡದ ಪರ 1984 ರಿಂದ 2000 ರವರೆಗೆ ಆಡಿದ್ದಾರೆ. ಇವರು 1989 ರಿಂದ 1999 ರವರೆಗೆ ಭಾರತ ತಂಡವನ್ನು ಮುನ್ನಡೆಸಿದ್ದರು. ಅಜರುದ್ದೀನ್ ನಾಯಕತ್ವದಲ್ಲಿ ಭಾರತ 47 ಟೆಸ್ಟ್ ಪಂದ್ಯ ಆಡಿದ್ದು, 14 ರಲ್ಲಿ ಗೆಲುವು ಸಾಧಿಸಿದೆ. 19 ಟೆಸ್ಟ್ ಡ್ರಾ ಆಗಿದ್ದು, 10 ಪಂದ್ಯ ಸೋತಿದೆ. 174 ಏಕದಿನ ಪಂದ್ಯಗಳಲ್ಲಿ ಇವರ ನಾಯಕತ್ವದಲ್ಲಿ ಭಾರತ 90 ಪಂದ್ಯ ಗೆದ್ದಿದೆ.
ಇದನ್ನೂ ಓದಿ:ಅನುಷ್ಕಾ ಶರ್ಮಾ ಕೊಟ್ಟ ಕಾಟಕ್ಕೆ ವಿರಾಟ್ ಕೊಹ್ಲಿಗೆ ಬೇಸರ.. ಅಸಲಿಗೆ ಏನಾಯಿತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ