newsfirstkannada.com

600 ಕೋಟಿ ಭೂ ಹಗರಣ; ಬಂಧನದ ಭೀತಿಯಲ್ಲಿ ಜಾರ್ಖಂಡ್ ಸಿಎಂ ನಾಪತ್ತೆ ನಾಟಕ

Share :

Published January 31, 2024 at 5:52am

  ಸೋರೆನ್ ಸುಳಿವು ಕೊಟ್ಟವರಿಗೆ ಬಂಪರ್​ ಬಹುಮಾನ ನೀಡ್ತಾರೆ

  ಬಂಧನದ ಭೀತಿಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ನಾಪತ್ತೆ ನಾಟಕ!

  ಐಎಎಸ್‌ ಅಧಿಕಾರಿ ಸೇರಿ 14 ಮಂದಿ ಇ.ಡಿ. ಅಧಿಕಾರಿಗಳ ವಶಕ್ಕೆ

ಜಾರ್ಖಂಡ್‌ನಲ್ಲಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಇಡೀ ರಾಜ್ಯವನ್ನೇ ಆಳುವ ಮುಖ್ಯಮಂತ್ರಿಯೇ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಜಾರಿ ನಿರ್ದೇಶನಾಲಯ ಬೆನ್ನು ಬೀಳ್ತಿದ್ದಂತೆ ಸಿಎಂ ಹೇಮಂತ್ ಸೋರೆನ್‌ ತಲೆಮರೆಸಿಕೊಂಡಿದ್ದಾರೆ. ಇ.ಡಿ ಜೊತೆ ಜಾರ್ಖಂಡ್ ಸಿಎಂ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾರೆ.

ಬಂಧನದ ಭೀತಿಯಲ್ಲಿ ಜಾರ್ಖಂಡ್ ಸಿಎಂ ನಾಪತ್ತೆ ನಾಟಕ!

ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್‌ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನ ಜಾರಿ ನಿರ್ದೇಶನಾಲಯ ವಹಿಸಿಕೊಂಡಿತ್ತು. ಮೊನ್ನೆ ಬೆಳಗ್ಗೆ ಹೇಮಂತ್ ಸೋರೆನ್‌ ಅವರ ದೆಹಲಿ ನಿವಾಸಕ್ಕೆ ಇ.ಡಿ ಲಗ್ಗೆ ಇಟ್ಟಿತ್ತು. ಸೋರೆನ್‌ರ ಬಂಧನಕ್ಕೂ ಬಲೆ ಬೀಸಿತ್ತು. ಅಷ್ಟರಲ್ಲೇ ಹೇಮಂತ್ ಸೋರೆನ್ ಅಬ್‌ಸ್ಕ್ಯಾಂಡ್ ಆಗಿದ್ದಾರೆ. ಬಂಧನದ ಭೀತಿಯಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿ ತಲೆಮರೆಸಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಹೇಮಂತ್ ಸೋರೆನ್ ನಾಪತ್ತೆ

ಹೇಮಂತ್ ಸೋರೆನ್ ವಿರುದ್ಧ 600 ಕೋಟಿ ರೂಪಾಯಿಯ ಭೂ ಹಗರಣ ಆರೋಪಕೇಳಿ ಬಂದಿತ್ತು. ಸರ್ಕಾರಿ ಜಾಗವನ್ನ ಅಕ್ರಮವಾಗಿ ಬಿಲ್ಡರ್‌ಗಳಿಗೆ ಮಾರಾಟ ಮಾಡಿದ್ದಾರೆ ಅಂತ ಇ.ಡಿ, ದಾಳಿ ನಡೆಸಿತ್ತು. ಈ ವೇಳೆ ಭಾನುವಾರ ಸೋರೆನ್ ಅವರ ದೆಹಲಿ ನಿವಾಸದ ಬಳಿ ಹಣ ಪತ್ತೆಯಾಗಿತ್ತು. ಹೇಮಂತ್ ಸೋರೆನ್ ಅವರ BMW ಕಾರಿನಲ್ಲಿ 36 ಲಕ್ಷ ರೂಪಾಯಿ ನಗದು ಸಿಕ್ಕಿತ್ತು. ಈ ಬಗ್ಗೆ ವಿಚಾರಣೆ ನಡೆಸಲು ಇ.ಡಿ ಅಧಿಕಾರಿಗಳು ಮುಂದಾಗಿದ್ರು. ಇದರ ಬೆನ್ನಲ್ಲೇ ಮೊನ್ನೆ ರಾತ್ರಿ ಸಿಎಂ ಹೇಮಂತ್ ಸೋರೆನ್ ನಾಪತ್ತೆಯಾಗಿದ್ದಾರೆ. ಫೋನ್ ಸ್ವಿಚ್‌ ಆಫ್ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಗದೆ ಕಣ್ಮರೆಯಾಗಿದ್ದಾರೆ. ಇದೀಗ ಬಿಎಂಡಬ್ಲೂ ಕಾರು ಮತ್ತು ಅದರ ಚಾಲಕನನ್ನ ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ದಾಳಿ ನಡೆಯುತ್ತಿದ್ದಂತೆ ಬಂಧನದ ಭೀತಿಯಲ್ಲಿ ಹೇಮಂತ್ ಸೋರೆನ್ ನಾಪತ್ತೆಯಾಗಿದ್ದಾರೆ ಅಂತ ಇ.ಡಿ. ಅಧಿಕಾರಿಗಳು ಘೋಷಿಸಿದ್ದಾರೆ. ಜೊತೆಗೆ ಐಎಎಸ್‌ ಅಧಿಕಾರಿ ಸೇರಿ 14 ಮಂದಿಯನ್ನ ಇ.ಡಿ. ಅಧಿಕಾರಿಗಳು ಬಂಧಿಸಿದ್ದಾರೆ.

ಇ.ಡಿ ಮುಂದೆ ಹಾಜರಾಗಲು ಹೇಮಂತ್‌ ಸೋರೆನ್‌ಗೆ ಡೆಡ್‌ಲೈನ್‌!

ವಿಚಾರಣೆಗೆ ಹಾಜರಾಗುವಂತೆ ಹೇಮಂತ್‌ ಸೋರೆನ್‌ಗೆ ಜಾರಿ ನಿರ್ದೇಶನಾಲಯದ ಅಧಿಕಾರಗಳು ನೋಟಿಸ್ ಕೊಟ್ಟಿದ್ದಾರೆ. ಅವರ ನಿವಾಸದ ಗೇಟ್‌ಗೆ ನೋಟಿಸ್‌ನ ಅಂಟಿಸಿ ಬಂದಿದ್ದಾರೆ. ಅಲ್ಲದೇ ನಾಳೆಯೊಳಗೆ ಹೇಮಂತ್ ಸೋರೆನ್‌ ವಿಚಾರಣೆಗೆ ಹಾಜರಾಗಬೇಕು ಅಂತ ಡೆಡ್‌ಲೈನ್ ಕೊಟ್ಟಿದ್ದಾರೆ.

ಸೋರೆನ್ ಸುಳಿವು ಕೊಟ್ಟವರಿಗೆ ₹11 ಸಾವಿರ ಬಹುಮಾನ!

ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ನಾಪತ್ತೆಯಾಗಿದ್ದು, ಅವರನ್ನ ಹುಡುಕಿಕೊಟ್ಟವರಿಗೆ 11 ಸಾವಿರ ರೂಪಾಯಿ ಬಹುಮಾನ ಘೋಷಣೆಯಾಗಿದೆ. ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಈ ಬಹುಮಾನ ಘೋಷಣೆ ಮಾಡಿದ್ದಾರೆ. ಇನ್ನೂ ನಾಪತ್ತೆಯಾಗಿದ್ದ ಹೇಮಂತ್ ಸೋರೆನ್ ಇವತ್ತು ರಾಂಚಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.. ಜೊತೆಗೆ ಸರ್ಕಾರದ ಬಜೆಟ್ ಸಿದ್ಧತೆಯಲ್ಲಿ ತೊಡಗಿದ್ದೇನೆ ಅಂತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಒಟ್ಟಾರೆ, ಹೇಮಂತ್ ಸೋರೆನ್ ನಾಪತ್ತೆ ಬೆನ್ನಲ್ಲೇ ರಾಜೀನಾಮೆಯ ಸುದ್ದಿ ಹರಿದಾಡಿದೆ. ಒಂದ್ವೇಳೆ ಸೋರೆನ್ ಬಂಧನವಾದ್ರೆ, ಅವರ ಪತ್ನಿ ಕಲ್ಪನಾ ಸೋರೆನ್‌ನ ಮುಖ್ಯಮಂತ್ರಿ ಪಟ್ಟಕ್ಕೇರಿಸಲು ಸಿದ್ಧತೆ ನಡೆದಿದ್ಯಂತೆ. ಅದೇನೆ ಇರಲಿ, ರಾಜ್ಯವನ್ನಾಳುವ ಮುಖ್ಯಮಂತ್ರಿಯೇ ನಾಪತ್ತೆಯಾದ್ರೆ ರಾಜ್ಯದ ಜನರ ಗತಿಯೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

600 ಕೋಟಿ ಭೂ ಹಗರಣ; ಬಂಧನದ ಭೀತಿಯಲ್ಲಿ ಜಾರ್ಖಂಡ್ ಸಿಎಂ ನಾಪತ್ತೆ ನಾಟಕ

https://newsfirstlive.com/wp-content/uploads/2024/01/Hemant-Soren-2.jpg

Load More