newsfirstkannada.com

BREAKING: ದೆಹಲಿ ಸಿಎಂ ನಿವಾಸದಲ್ಲಿ ಇಡಿ ಅಧಿಕಾರಿಗಳು; ಬಂಧನದ ಭೀತಿಯಲ್ಲಿ ಕೇಜ್ರಿವಾಲ್!​

Share :

Published March 21, 2024 at 8:16pm

    ಲೋಕಸಭಾ ಚುನಾವಣೆ ಹೊತ್ತಲ್ಲೇ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಶಾಕ್​​​

    ಸದ್ಯ ಕೇಜ್ರಿವಾಲ್ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು!

    ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರಿಗೆ ಬಂಧನದ ಭೀತಿ ಶುರು!

ನವದೆಹಲಿ: ಲೋಕಸಭಾ ಚುನಾವಣೆ ಹೊತ್ತಲ್ಲೇ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಆತಂಕ ಎದುರಾಗಿದೆ. ಸದ್ಯ ಕೇಜ್ರಿವಾಲ್ ನಿವಾಸಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಮಿಸಿದ್ದು, ಕೆಲವೇ ಕ್ಷಣಗಳಲ್ಲಿ ಬಂಧಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಅಬಕಾರಿ ನೀತಿ ಅಕ್ರಮ ಕೇಸ್​ನಲ್ಲಿ ಅರವಿಂದ ಕೇಜ್ರಿವಾಲ್​ಗೆ ಭಾರೀ ಹಿನ್ನಡೆ ಆಗಿತ್ತು. ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​​ನಲ್ಲಿ ಕೇಜ್ರಿವಾಲ್​ ಅರ್ಜಿ ಸಲ್ಲಿಸಿತ್ತು. ಸದ್ಯ ಈ ಅರ್ಜಿಯನ್ನು ಸುಪ್ರೀಂಕೋರ್ಟ್​ ನಿರಾಕರಿಸಿದ್ದು, ಇಡಿ ಅಧಿಕಾರಿಗಳು ಸಿಎಂ ನಿವಾಸವನ್ನು ಸುತ್ತುವರೆದಿದ್ದಾರೆ. ಅಲ್ಲದೇ ಕೇಜ್ರಿವಾಲ್​ ಅವರನ್ನು ತೀವ್ರ ವಿಚಾರಣೆ ಮಾಡುತ್ತಿದ್ದಾರೆ.

ಹೈಕೋರ್ಟ್ ಕೊಟ್ಟ​ ಆದೇಶವೇನು?

ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ವಿರುದ್ಧ ಕ್ರಮ ಕೈಗೊಳ್ಳದಂತೆ ಕೋರಿ ಕೇಜ್ರಿವಾಲ್​​ ಹೈಕೋರ್ಟ್​​ ಮೊರೆ ಹೋಗಿದ್ದರು. ಆದರೆ ಕೇಜ್ರಿವಾಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಜತೆಗೆ ಅಬಕಾರಿ ಹಗರಣ ಕೇಸ್​ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ದೆಹಲಿ ಸಿಎಂ ನಿವಾಸದಲ್ಲಿ ಇಡಿ ಅಧಿಕಾರಿಗಳು; ಬಂಧನದ ಭೀತಿಯಲ್ಲಿ ಕೇಜ್ರಿವಾಲ್!​

https://newsfirstlive.com/wp-content/uploads/2024/01/KEJRIWAL-1.jpg

Load More