Advertisment

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಟ್ವಿಸ್ಟ್​.. ಬೆಳ್ಳಂಬೆಳಗ್ಗೆ ಬಸನಗೌಡ ದದ್ದಲ್ ಮನೆ ಮೇಲೆ ED ದಾಳಿ..!

author-image
Ganesh
Updated On
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಟ್ವಿಸ್ಟ್​.. ಬೆಳ್ಳಂಬೆಳಗ್ಗೆ ಬಸನಗೌಡ ದದ್ದಲ್ ಮನೆ ಮೇಲೆ ED ದಾಳಿ..!
Advertisment
  • ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ
  • ಮಂಗಳವಾರವಷ್ಟೇ ಎಸ್​​ಐಟಿ ವಿಚಾರಣೆಗೆ ಹಾಜರಾಗಿದ್ದ ದದ್ದಲ್
  • ರಾಯಚೂರಿನಲ್ಲಿರುವ ದದ್ದಲ್ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಇ.ಡಿ ದಾಳಿ

ರಾಯಚೂರು: ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಹುಕೋಟಿ ಹಗರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಇಂದು ಬೆಳ್ಳಂಬೆಳಗ್ಗೆ ಕಾಂಗ್ರೆಸ್​​ ಶಾಸಕ ಬಸನಗೌಡ ದದ್ದಲ್ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Advertisment

ರಾಯಚೂರು ಗ್ರಾಮೀಣ ಶಾಸಕ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿರುವ ದದ್ದಲ್ ನಿವಾಸದ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿ ಬಸನಗೌಡ ದದ್ದಲ್ ಮನೆ ಇದೆ. ಬೆಂಗಳೂರಿನಿಂದ ಆಗಮಿಸಿರುವ ಅಧಿಕಾರಿಗಳು ದಾಳಿ ಮಾಡಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ:Watch: ಸಚಿವ ಜಮೀರ್ ಅಹ್ಮದ್​​ ಭರ್ಜರಿ ರೀಲ್ಸ್.. ಬಿಜೆಪಿ ಆಕ್ರೋಶ..!

ಅಧಿಕಾರಿಗಳ ಜೊತೆ ಸಿಆರ್​ಪಿಎಫ್ ಭದ್ರತಾ ಸಿಬ್ಬಂದಿ ಜೊತೆ ಅಧಿಕಾರಿಗಳು ಆಗಮಿಸಿದ್ದಾರೆ. ಇತ್ತೀಚೆಗೆ ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಹುಕೋಟಿ ಹಗರಣದಲ್ಲಿ ದದ್ದಲ್ ಹೆಸರು ಕೇಳಿಬಂದಿತ್ತು. ಕಳೆದ ಮಂಗಳವಾರ ಬಸನಗೌಡ ದದ್ದಲ್ ಎಸ್​ಐಟಿ ವಿಚಾರಣೆಯನ್ನು ಎದುರಿಸಿದ್ದರು. ಹಗರಣಕ್ಕೆ ಸಂಬಂಧಿಸಿ ಅಧ್ಯಕ್ಷರಿಗೆ ಸತತ 8 ಗಂಟೆಗಳ ಕಾಲ ಪ್ರಶ್ನೆಗಳ ಸುರಿಮಳೆಗೈದಿದ್ದರು. ಅಲ್ಲದೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೋಟಿಸ್ ನೀಡಿದೆ. ಇದೀಗ ಇಡಿ ಅಧಿಕಾರಿಗಳು ಕೂಡ ಫೀಲ್ಡಿಗೆ ಇಳಿದಿದ್ದಾರೆ.

ಇದನ್ನೂ ಓದಿ:Audi, BMW, 5 ಕೆಜಿ ಬೆಳ್ಳಿ! ಐಷಾರಾಮಿ ಬಂಗಲೆಗಳು.. ಕೋಚ್ ಗಂಭೀರ್​ ಆಸ್ತಿ ಅಬ್ಬಾಬ್ಬ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment