ರನ್ಯಾ ರಾವ್​​ಗೆ ಮತ್ತೊಂದು ಬಿಗ್ ಶಾಕ್.. ಕಾನೂನು ಕುಣಿಕೆ ಮತ್ತಷ್ಟು ಬಿಗಿ..!

author-image
Ganesh
Updated On
ರನ್ಯಾ ರಾವ್​​ಗೆ ಮತ್ತೊಂದು ಬಿಗ್ ಶಾಕ್.. ಕಾನೂನು ಕುಣಿಕೆ ಮತ್ತಷ್ಟು ಬಿಗಿ..!
Advertisment
  • ಡಿಆರ್​ಐ, ಸಿಬಿಐ, ಐಎಎಸ್ ತನಿಖೆ ಎದುರಿಸ್ತಿರುವ ರನ್ಯಾ​
  • ಈಗ PMLA ಕಾಯ್ದೆ ಅಡಿ ಕೇಸ್ ದಾಖಲು ಮಾಡಿದ ED
  • ಮಾರ್ಚ್​ 3 ರಂದು ಬಂಧನಕ್ಕೆ ಒಳಗಾಗಿರುವ ರನ್ಯಾ ರಾವ್

ಬೆಂಗಳೂರು: ರನ್ಯಾ ರಾವ್ ಪ್ರಕರಣ ಮತ್ತಷ್ಟು ಜಟಿಲ ಸ್ವರೂಪ ಪಡೆಯುತ್ತಿದೆ. ಡಿಆರ್​ಐ, ಸಿಬಿಐ, ಐಎಎಸ್​, ಐಟಿ ತನಿಖೆಯನ್ನು ಎದುರಿಸ್ತಿರುವ ನಟಿಗೆ ಈಗ, ಜಾರಿ ನಿರ್ದೇಶನಾಲಯದ ಸಂಕಷ್ಟ ಎದುರಾಗಿದೆ.

ಇಂದು ಬೆಂಗಳೂರಿನ ಲ್ಯಾವಲ್ಲೆ ರಸ್ತೆಯಲ್ಲಿರುವ ರನ್ಯಾ ರಾವ್ ಮನೆ ಮೇಲೆ ED ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಾಲ್ಕು ಜನರ ಇ.ಡಿ ಅಧಿಕಾರಿಗಳ ತಂಡ ಮನೆಗೆ ದೌಡಾಯಿಸಿ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ. ಮಾಹಿತಿಗಳ ಪ್ರಕಾರ ಬೆಳಗ್ಗೆ 6 ಗಂಟೆಗೆ ಇ.ಡಿ ಅಧಿಕಾರಿಗಳು ಸಿಆರ್​ಪಿಎಫ್ ಪಡೆ ಜೊತೆಗೆ ಆಗಮಿಸಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಬರ್ತ್​ಡೇ ಸ್ಪೆಷಲ್.. ಮಸಾಲಪೂರಿ, ಪಾನಿಪೂರಿ ಫ್ರೀ.. ಫ್ರೀ.. ಎಲ್ಲಿ?

publive-image

ಮಾರ್ಚ್ 03 ರಂದು ಸಂಜೆ‌ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಡಿಆರ್​ಐ ಅಧಿಕಾರಿಗಳು ರನ್ಯಾರನ್ನು ಬಂಧಿಸಿದ್ದರು. ದುಬೈನಿಂದ ಅಕ್ರಮವಾಗಿ 12 ಕೋಟಿ ಮೌಲ್ಯದ ಚಿನ್ನದ ಬಿಸ್ಕಟ್​​ಗಳನ್ನು ತಂದಿದ್ದರಿಂದ ಬಂಧಿಸಿದ್ದರು.

ರನ್ಯಾ ಬಂಧನ ಬೆನ್ನಲ್ಲೇ ನಟಿ ವಾಸವಿದ್ದ ಫ್ಲಾಟ್ ಮೇಲೆ ಡಿಆರ್​ಐ ಅಧಿಕಾರಿಗಳು ದಾಳಿ ನಡೆಸಿ ಶೋಧಕಾರ್ಯ ಮಾಡಿದ್ದರು. ಈ ವೇಳೆ ಬರೋಬ್ಬರಿ 2.67 ನಗದು ಹಣ, 2 ಕೋಟಿ 6 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು. ಕಳೆದ ಮೂರು ದಿನಗಳ ಹಿಂದೆ ಸಿಬಿಐ ಅಧಿಕಾರಿಗಳು ಸಹ ಲ್ಯಾವಲ್ಲೆ ರಸ್ತೆಯ ರನ್ಯಾಳ ಫ್ಲಾಟ್ ಮೇಲೆ ದಾಳಿ ನಡೆಸಿದ್ದರು. ಇದೀಗ ಇ.ಡಿ ಅಧಿಕಾರಿಗಳು ಪ್ರಕರಣದಲ್ಲಿ ಎಂಟ್ರಿಯಾಗಿದ್ದಾರೆ. PMLA ಕಾಯ್ದೆ ಅಡಿ ಕೇಸ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.

ಇದನ್ನೂ ಓದಿ: Youtube ನೋಡಿ ಚಿನ್ನ ಬಚ್ಚಿಡೋದು ಕಲಿತೆ, ಬೆಂಗಳೂರಿಗೆ ತಂದು ಆಟೋದಲ್ಲಿಡಲು ಸೂಚಿಸಿದ್ರು- ರನ್ಯಾ ಹೇಳಿದ್ದೇನು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment