/newsfirstlive-kannada/media/post_attachments/wp-content/uploads/2025/07/S-N-Subba-Reddy.jpg)
ಬೆಂಗಳೂರು: ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆ ಸೇರಿದಂತೆ ಒಟ್ಟು ಬೆಂಗಳೂರಿನ 5 ಕಡೆಗಳಲ್ಲಿ ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು (ED) ದಾಳಿ ನಡೆಸಿದ್ದಾರೆ. ಶಾಸಕ ಸುಬ್ಬಾರೆಡ್ಡಿ ಮತ್ತು ಸಂಬಂಧಿಕರಿಗೆ ಸೇರಿದ ಮನೆಗಳಲ್ಲಿ ಶೋಧ ನಡೆಯುತ್ತಿದೆ.
ಇದನ್ನೂ ಓದಿ:ಹೆಣ್ಮಕ್ಕಳೇ ಹುಷಾರ್, ಬೆಂಗಳೂರಲ್ಲಿ ಇಂಥವರೂ ಇರುತ್ತಾರೆ ಎಚ್ಚರ..! ಅಸಲಿಗೆ ಈತ ಮಾಡಿದ್ದೇನು..?
ಸುಬ್ಬಾರೆಡ್ಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್​ ಶಾಸಕರಾಗಿದ್ದಾರೆ. ಇವರ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪ ಕೇಳಿಬಂದಿತ್ತು. ಅದರ ಅನ್ವಯ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. MLA ಸುಬ್ಬಾರೆಡ್ಡಿ ಅವರು ಮಲೇಶಿಯಾ, ಹಾಂಕಾಂಗ್, ಜೆರ್ಮನಿಯಲ್ಲಿ ಆಸ್ತಿ ಹೊಂದಿದ್ದಾರೆ. ಅಷ್ಟೇ ಅಲ್ಲದೇ ವಿದೇಶದ ಬ್ಯಾಂಕ್​ಗಳಲ್ಲಿ ಖಾತೆಗಳನ್ನ ಹೊಂದಿದ್ದಾರೆ. ಅಕ್ರಮವಾಗಿ ವಾಹನಗಳ ಖರೀದಿ, ಹಣ ಹೂಡಿಕೆ ಸೇರಿ ವಿವಿಧ ಆರೋಪಗಳು ಕೇಳಿ ಬಂದಿದ್ದರಿಂದ ಸುಬ್ಬಾರೆಡ್ಡಿ ಕಚೇರಿ, ಬ್ಯುಸಿನೆಸ್ ಪಾರ್ಟ್ನರ್​ಗಳ ಮನೆ ಹಾಗೂ ಇನ್ನಿತರ ಕಚೇರಿಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ