/newsfirstlive-kannada/media/post_attachments/wp-content/uploads/2024/07/B-Nagendra-Arrest.jpg)
ಬಳ್ಳಾರಿಯ ಮೂವರು ಶಾಸಕರು, ಓರ್ವ ಸಂಸದನಿಗೆ ಇ.ಡಿ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ, ಸಂಡೂರಲ್ಲಿರುವ ಸಂಸದ ಇ.ತುಕಾರಾಂ ಮನೆ ಮೇಲೆ ಇ.ಡಿ ರೇಡ್ ಮಾಡಿದೆ.
ಲೋಕಸಭಾ ಚುನಾವಣೆ ವೇಳೆ, ವಾಲ್ಮೀಕಿ ನಿಗಮದ ಹಣವನ್ನ ಬಳಕೆ ಮಾಡಲಾಗಿದೆ ಅನ್ನೋ ಆರೋಪದ ಮೇಲೆ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ. ಜೊತೆಗೆ ಬಳ್ಳಾರಿಯ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಕಂಪ್ಲಿ ಶಾಸಕ ಗಣೇಶ್, ಕೊಡ್ಲಿಗಿ ಶಾಸಕ ಶ್ರೀನಿವಾಸ್ ಮನೆ ಮೇಲೂ ಇ.ಡಿ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲಿಸುತ್ತಿದೆ.
ಇದನ್ನೂ ಓದಿ: ಕಾಲ್ತುಳಿತ ಪ್ರಕರಣ.. ಬಿಸಿಸಿಐ ನಿರ್ಧಾರದಿಂದ KSCAಗೆ ಭಾರೀ ಪೆಟ್ಟು..!
ಬಿ ನಾಗೇಂದ್ರಗೂ ಶಾಕ್..!
ಇತ್ತ ಬೆಂಗಳೂರಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೂ ಜಾರಿ ನಿರ್ದೇಶನಾಲಯ ಶಾಕ್ ನೀಡಿದೆ. ಶಾಸಕರ ಭವನದ ನಾಗೇಂದ್ರ ಕಚೇರಿ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ವಾಲ್ಮಿಕಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅರೆಸ್ಟ್ ಆಗಿದ್ದರು.
ಮನೆ ಪ್ರವೇಶಕ್ಕೆ ನೋ ಎಂಟ್ರಿ..
ಬಳ್ಳಾರಿಯ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸದ ಮೇಲೆ ದಾಳಿ ಮಾಡಿರುವ ಇಡಿ ಅಧಿಕಾರಿಗಳು, ಮನೆಯ ಬಾಗಿಲು ಕ್ಲೋಸ್ ಮಾಡಿ ವಿಚಾರಣೆ ಮಾಡ್ತಿದ್ದಾರೆ. ಇಡಿ ಅಧಿಕಾರಿಗಳ ದಾಳಿ ವೇಳೆ ಮನೆಕೆಲಸದ ಓರ್ವ ಮಹಿಳೆ ಎಂಟ್ರಿ ನೀಡಿದ್ದರು. ಈ ವೇಳೆ ಆ ಮಹಿಳೆಯು ಅಧಿಕಾರಿಗಳ ಅನುಮತಿ ಪಡೆದು ಮನೆಯ ಒಳಗೆ ಹೋಗಿದ್ದಾರೆ. ಇನ್ನುಳಿದಂತೆ ಭರತ್ ರೆಡ್ಡಿ ನಿವಾಸಕ್ಕೆ ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ.
ಇದನ್ನೂ ಓದಿ: ಬಳ್ಳಾರಿ ಕಾಂಗ್ರೆಸ್ ನಾಯಕರಿಗೆ ED ಶಾಕ್.. ಸಂಸದ ಇ.ತುಕಾರಾಂ ಸೇರಿ ಹಲವರ ನಿವಾಸದ ಮೇಲೆ ದಾಳಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ