/newsfirstlive-kannada/media/post_attachments/wp-content/uploads/2024/07/Muda-2-1.jpg)
ಬೆಂಗಳೂರು: ರಾಜ್ಯ ರಾಜಕೀಯ, ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ED (ಜಾರಿ ನಿರ್ದೇಶನಾಲಯ) ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಮುಡಾ ಹಗರಣದಲ್ಲಿ ED ಮತ್ತೆ 92 ಸೈಟ್‌ಗಳನ್ನು ಜಪ್ತಿ ಮಾಡಿದ್ದು, ಈ ಸೈಟ್‌ಗಳ ಮೌಲ್ಯವೇ ಬರೋಬ್ಬರಿ 100 ಕೋಟಿ ರೂಪಾಯಿ ಎಂದಿದೆ.
ಈ ಬಗ್ಗೆ ED (ಜಾರಿ ನಿರ್ದೇಶನಾಲಯ) ಬೆಂಗಳೂರು ಕಚೇರಿಯಿಂದ ಟ್ವೀಟ್ ಮಾಡಿದ್ದು, ಅಧಿಕೃತ ಮಾಹಿತಿ ನೀಡಿದೆ. PMLA (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002) ಕಾಯಿದೆಯಡಿ ಸಿಎಂ ಸಿದ್ದರಾಮಯ್ಯ ಹಾಗೂ ಇತರರಿಗೆ ಸೇರಿದ 92 ಸೈಟ್‌ಗಳನ್ನು ಜಪ್ತಿ ಮಾಡಲಾಗಿದೆ.
ED, Bangalore has provisionally attached 92 immovable properties (MUDA sites) having market value of Rs. 100 Crore (approx.) on 9/06/2025 under the provisions of the PMLA, 2002, in connection with MUDA Scam case matter related to Siddaramaiah and others having cumulative…
— ED (@dir_ed) June 10, 2025
">June 10, 2025
ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣದ ತನಿಖೆ NIA ಹೆಗಲಿಗೆ; ಕೇಂದ್ರ ಗೃಹ ಇಲಾಖೆ ಮಹತ್ವದ ಆದೇಶ
ಈ ಮೊದಲು ಮುಡಾ ಹಗರಣದಲ್ಲಿ ಇ.ಡಿ 162 ಸೈಟ್‌ಗಲನ್ನು ಜಪ್ತಿ ಮಾಡಿತ್ತು. 162 ಸೈಟ್‌ಗಳ ಮಾರುಕಟ್ಟೆ ಮೌಲ್ಯ 300 ಕೋಟಿ ರೂಪಾಯಿ. ಈಗ 92 ಸೈಟ್‌ಗಳ ಮಾರುಕಟ್ಟೆ ಮೌಲ್ಯ 100 ಕೋಟಿ ರೂಪಾಯಿ. ಇದುವರೆಗೂ ಒಟ್ಟು 400 ಕೋಟಿ ರೂಪಾಯಿ ಆಸ್ತಿಪಾಸ್ತಿಯನ್ನು ಜಪ್ತಿ ಮಾಡಿದ್ದೇವೆ ಎಂದ ಇ.ಡಿ ಮಾಹಿತಿ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ