/newsfirstlive-kannada/media/post_attachments/wp-content/uploads/2024/11/LOTTERY-KING-PIN-1.jpg)
ಜಾರಿ ನಿರ್ದೇಶನಾಲಯ ಶುಕ್ರವಾರ ಚೆನ್ನೈ ಮೂಲದ ಲಾಟರಿ ಕಿಂಗ್ ಸ್ಯಾಂಟಿಗೋ ಮಾರ್ಟಿನ್ ಆಫೀಸ್ ಮೇಲೆ ದಾಳಿ ನಡೆಸಿ ಸುಮಾರು 8.8 ಕೋಟಿ ರೂಪಾಯಿ ಅಕ್ರಮ ಹಣವನ್ನು ವಶಕ್ಕೆ ಪಡೆದುಕೊಂಡಿದೆ. ಸ್ಯಾಂಟಿಗೊ ಮಾರ್ಟಿನ್​, ಎಲೆಕ್ಟ್ರಾಲ್ ಬಾಂಡ್ ಮೂಲಕ ಅತಿಹೆಚ್ಚು ದೇಣಿಗೆ ನೀಡಿದ ಒಬ್ಬನೇ ಒಬ್ಬ ಭಾರತೀಯ, ಈತ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಹಣ ಬರೋಬ್ಬರಿ 1300 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/11/LOTTERY-KING-PIN.jpg)
ಲಾಟರಿ ಕಿಂಗ್ ಮಾರ್ಟಿನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದ ಮೇಲೆ ಹಲವು ರಾಜ್ಯಗಳಲ್ಲಿ ಶೋಧ ಕಾರ್ಯ ನಡೆದಿದೆ. ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್​ ಮಾರ್ಟಿನ್ ವಿರುದ್ಧ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ತಮಿಳುನಾಡು ಪೊಲೀಸರು ಈ ಒಂದು ಪ್ರಕರಣದಲ್ಲಿ ಮಾರ್ಟಿನ್ ಹಾಗೂ ಹಲವರ ವಿರುದ್ಧ ಎಫ್​ಐಆರ್ ದಾಖಲು ಮಾಡಿಕೊಂಡಿದ್ದರು. ಕೆಳಹಂತದ ನ್ಯಾಯಾಲಯ ಪೊಲೀಸರು ಈ ಒಂದು ಅರ್ಜಿಯನ್ನು ಸ್ವೀಕರಿಸಿತ್ತು ಕೂಡ
ಇದನ್ನೂ ಓದಿ:ಒಂದೇ ಬೈಕ್​​ನಲ್ಲಿ ದೊಡ್ಡ ಕುಟುಂಬ.. ಪೊಲೀಸರೇ ಶಾಕ್ ಆಗಿಬಿಟ್ಟರು.. ವಿಡಿಯೋ
ಅಧಿಕೃತ ಮೂಲಗಳು ಹೇಳುವ ಪ್ರಕಾರ ತಮಿಳುನಾಡು, ಹರಿಯಾಣ, ಲುಧಿಯಾನ ಸೇರಿ ಹಲವು ರಾಜ್ಯಗಳಲ್ಲಿ ಈತನ ಉದ್ಯಮದ ಸಾಮ್ರಾಜ್ಯವಿದೆ ಎಂದು ಹೇಳಲಾಗುತ್ತಿದೆ. ವಂಚನೆ ಹಾಗೂ ಕಾನೂನು ಬಾಹಿರವಾಗಿ ಈತ ಲಾಟರಿ ಟಿಕೆಟ್​ಗಳನ್ನು ಮಾರಾಟ ಮಾಡುತ್ತಿದ್ದಾನೆ ಎನ್ನುವ ಆರೋಪ ಮಾರ್ಟಿನ್ ಮೇಲೆ ಇದೆ. ಪೊಲೀಸರ ಎಫ್​ಐಆರ್ ಆಧರಿಸಿದ ಸದ್ಯ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 8.8 ಕೋಟಿ ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us