newsfirstkannada.com

ಕ್ರಿಕೆಟ್​ ಕಾಶಿಯಲ್ಲಿ ಕಿಂಗ್​ ಕೊಹ್ಲಿ ಬರ್ತ್​​ಡೇ.. ಏನಿದು 70,000 ಮುಖವಾಡ; ವಿರಾಟ್​ ಸಂಭ್ರಮಕ್ಕೆ ಸ್ಪೆಷಲ್​ ಪ್ಲಾನ್​ ಏನೇನು?

Share :

Published November 1, 2023 at 1:52pm

    ಕ್ರಿಕೆಟ್​ ಮಹಾಜಾತ್ರೆಯ ನಡುವೆ ಮತ್ತೊಂದು ಮಹಾಹಬ್ಬ.!

    35ನೇ ವಸಂತಕ್ಕೆ ಕಾಲಿಡಲಿದ್ದಾರೆ ಡೆಲ್ಲಿಯ ವಿರಾಟ್ ಕೊಹ್ಲಿ

    ಕೊಹ್ಲಿ ಸ್ಪೆಷಲ್​​​ ಇನ್ನಿಂಗ್ಸ್​ ಕಟ್ಟಲಿ ಅನ್ನೋದೇ ಫ್ಯಾನ್ಸ್​ ಆಸೆ

ಕ್ರಿಕೆಟ್​​ ಲೋಕದ ಮಹಾ ಜಾತ್ರೆಯ ನಡುವೆ ಮತ್ತೊಂದು ದೊಡ್ಡ ಹಬ್ಬ ಬಂದಿದೆ. ಈ ಫೆಸ್ಟಿವಲ್​​ ಸಂಭ್ರಮಿಸಲು ಅಸಂಖ್ಯ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರೋ ಬೆಂಗಾಲ್​ ಕ್ರಿಕೆಟ್​ ಅಸೋಸಿಯೇಷನ್​​ ಮೆಗಾ ಪ್ಲಾನ್​ ರೂಪಿಸಿದೆ. ಯಾವುದಪ್ಪಾ ಈ ಹಬ್ಬ, ಯಾಕೆ ಇಷ್ಟೇಲ್ಲ ಸಡಗರ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ವಿಶ್ವಕಪ್​​ ಮೆಗಾ ಟೂರ್ನಿಯ ಫಸ್ಟ್​ ಹಾಫ್​ ಸಕ್ಸಸ್​​ಫುಲ್​ ಆಗಿ ಅಂತ್ಯ ಕಂಡಿದ್ರೆ, ಸೆಕೆಂಡ್​ ಹಾಫ್​ನಲ್ಲಿ ಟ್ವಿಸ್ಟ್ & ಟರ್ನ್​ಗಳೊಂದಿಗೆ ಭರ್ಜರಿ ಮನರಂಜನೆ ನೀಡ್ತಿದೆ. ಕ್ರಿಕೆಟ್​ ಜಾತ್ರೆಯ ಗುಂಗು ಸದ್ಯ ವಿಶ್ವವನ್ನ ಆವರಿಸಿದೆ. ಎಲ್ಲೇ ಹೋದರೂ, ಕ್ರಿಕೆಟ್​ನದ್ದೇ ಮಾತು, ಚರ್ಚೆ. ಕ್ರಿಕೆಟ್​ ಫೀವರ್​​ ಎಲ್ಲೆಡೆ ಆವರಿಸಿರೋ ಈ ಹೊತ್ತಲ್ಲಿ ಮತ್ತೊಂದು ದೊಡ್ಡ ಹಬ್ಬ ಬಂದೇ ಬಿಟ್ಟಿದೆ.

ವಿರಾಟ್ ಕೊಹ್ಲಿ, ಭಾರತದ ಆಟಗಾರ

ಕಿಂಗ್​ ಕೊಹ್ಲಿಯ ಹುಟ್ಟುಹಬ್ಬಕ್ಕೆ ಕೌಂಟ್​​ಡೌನ್​ ಶುರು..!

ನಾವ್​ ಹೇಳ್ತಿರೋ ಮತ್ತೊಂದು ಹಬ್ಬ ವಿರಾಟ್​ ಕೊಹ್ಲಿಯ ಹುಟ್ಟು ಹಬ್ಬ. ರನ್​ಮಷಿನ್​, ಚೇಸ್​​ ಮಾಸ್ಟರ್​, ರೆಕಾರ್ಡ್​​ ಬ್ರೇಕರ್​, ಫ್ಯಾನ್ಸ್​ ಫೇವರಿಟ್​ ಕಿಂಗ್​ ಕೊಹ್ಲಿಯ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ. ಇನ್ನು 4 ದಿನ ಕಳೆದ್ರೆ ವಿರಾಟ್, 35ನೇ ವಸಂತಕ್ಕೆ ಕಾಲಿಡಲಿದ್ದಾರೆ. ಕ್ರಿಕೆಟ್​ ಜಾತ್ರೆಯ ನಡುವೆ ಬಂದಿರೋ ಡೆಲ್ಲಿ ಡ್ಯಾಷರ್​​ ಹುಟ್ಟುಹಬ್ಬವನ್ನ ಸಂಭ್ರಮಿಸಲು ಫ್ಯಾನ್ಸ್​ ಕಾತರರಾಗಿದ್ದಾರೆ.

ನ.​​ 5ರಂದು ಟೀಮ್​ ಇಂಡಿಯಾ ಭಾರತದ ಕ್ರಿಕೆಟ್​ ಕಾಶಿ ಈಡನ್​ ಗಾರ್ಡನ್​ನಲ್ಲಿ ಕಣಕ್ಕಿಳಿಯಲಿದೆ. ಸೌತ್​ ಆಫ್ರಿಕಾ ವಿರುದ್ಧದ ಆ ಪಂದ್ಯದ ಆರಂಭಕ್ಕೂ ಮುನ್ನ ಸ್ಪೆಷಲ್​ ಸೆಲಬ್ರೇಷನ್​ ನಡೆಸಲು ಪ್ಲಾನ್​ ರೆಡಿಯಾಗಿದೆ. ಇನ್​ಫ್ಯಾಕ್ಟ್​.. ಪಂದ್ಯದ ಆರಂಭದಲ್ಲಿ ಮಾತ್ರವಲ್ಲ.. ಪಂದ್ಯದುದ್ದಕ್ಕೂ ವಿರಾಟ ಸಂಭ್ರಮ ನಡೆಯಲಿದೆ.

ವಿರಾಟಮಯವಾಗಲಿದೆ ಈಡನ್​ ಗಾರ್ಡನ್​ ಮೈದಾನ.!

ವಿಶ್ವಕಪ್​ ಫೀವರ್​ ಹೆಚ್ಚಾಗ್ತಿದ್ದಂತೆ ಸ್ಟೇಡಿಯಂಗಳೆಲ್ಲ ತುಂಬಿ ತುಳುಕ್ಕುತ್ತಿವೆ. ಇನ್ನು, ಟೀಮ್​ ಇಂಡಿಯಾದ ಪಂದ್ಯ ಅಂದ್ರೆ, ಸ್ಟೇಡಿಯಂ ಫುಲ್​ ಜಾಮ್​ಪ್ಯಾಕ್ಡ್ ಆಗೋದು ಪಕ್ಕಾ. ಅದ್ರಲ್ಲೂ ಕೊಹ್ಲಿ ಬರ್ತಡೇ ಅಂದ್ರೆ, ಕ್ರೇಜ್​ ಡಬಲ್​ ಆಗಿರುತ್ತೆ. ಅಲ್ಲಿನ ವೈಬ್​ ಬೇರೆಯೇ ಇರುತ್ತೆ. ಹೀಗಾಗಿ ಕೊಹ್ಲಿ ಬರ್ತ್​ಡೇಗೆ ಕ್ರಿಕೆಟ್​ ಅಸೋಸಿಯೇಷನ್​​​ ಆಫ್​ ಬೆಂಗಾಲ್​ ಸ್ಪೆಷಲ್​ ಪ್ಲಾನ್​ ರೂಪಿಸಿದೆ. ಅವತ್ತು ಮೈದಾನದಲ್ಲಿ ಒಬ್ಬ ವಿರಾಟ್​ ಇದ್ರೆ, ಸ್ಟ್ಯಾಂಡ್ಸ್​​ನಲ್ಲಿ 70 ಸಾವಿರಕ್ಕೂ ಅಧಿಕ ವಿರಾಟ್ ಮುಖಗಳು​ ಕಾಣಿಸಲಿವೆ.

ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ ಕ್ಷಣ

ಸ್ಪೆಷಲ್​ ಕೇಕ್​, 70 ಸಾವಿರ ಮಾಸ್ಕ್​.. ಪಟಾಕಿ ಸುರಿಮಳೆ.!

ವಿರಾಟ ಸಂಭ್ರಮಕ್ಕಾಗಿ ಸ್ಪೆಷಲ್​ ಕೇಕ್​ ಅನ್ನ ಸಿಎಬಿ ಅಧ್ಯಕ್ಷ ಸ್ನೇಹಶಿಶ್​ ಗಂಗೂಲಿ ತರಿಸಲು ಮುಂದಾಗಿದ್ದಾರಂತೆ. ಇದರ ಜೊತೆಗೆ ಮೈದಾನಕ್ಕೆ ಬರುವ ಅಭಿಮಾನಿಗಳಿಗೆ ಸುಮಾರು 70 ಸಾವಿರ ಕೊಹ್ಲಿ ಚಿತ್ರವಿರೋ ಫೇಸ್​ ಮಾಸ್ಕ್​ಗಳನ್ನ ನೀಡಲು ಕೂಡ ತೀರ್ಮಾನಿಸಲಾಗಿದೆ. ಕೊಹ್ಲಿ ಮೈದಾನ ಬಂದಾಗ ಎಲ್ಲರಿಗೂ ಧರಿಸುವಂತೆ ಕೋರುವುದು ಮ್ಯಾನೇಜ್​ಮೆಂಟ್​ ಪ್ಲಾನ್. ​ಇದ್ರ ಜೊತೆಗೆ ವಿಶೇಷವಾಗಿ ಪಂದ್ಯದ ನಡುವೆ ಲೇಸರ್​ ಶೋ ಹಾಗೂ ಪಟಾಕಿ ಸಿಡಿಸಿ ಸಂಭ್ರಮಕ್ಕೆ ಮೆರಗು ತುಂಬಲು ಕೂಡ ಪ್ಲಾನ್​ಗಳು ನಡೆದಿದೆ.

ವಿರಾಟ್​ ಕೊಹ್ಲಿಯ ಹುಟ್ಟುಹಬ್ಬವನ್ನ ಸಂಭ್ರಮಿಸಲು ಬೆಂಗಾಲ್ ಕ್ರಿಕೆಟ್​ ಅಸೋಸಿಯೇಷನ್​ ಸಖತ್​ ಪ್ಲಾನ್​ ರೂಪಿಸಿದೆ. ಅಭಿಮಾನಿಗಳು ಕೂಡ ಇದನ್ನ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಅದ್ರ ಜೊತೆಗೆ ಸ್ಪೆಷಲ್​ ಡೇ. ಕೊಹ್ಲಿಯ ಸ್ಪೆಷಲ್​​​ ಇನ್ನಿಂಗ್ಸ್​ ಕಟ್ಟಲಿ ಅನ್ನೋದು ಫ್ಯಾನ್ಸ್​ ಮನದಾಳವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ರಿಕೆಟ್​ ಕಾಶಿಯಲ್ಲಿ ಕಿಂಗ್​ ಕೊಹ್ಲಿ ಬರ್ತ್​​ಡೇ.. ಏನಿದು 70,000 ಮುಖವಾಡ; ವಿರಾಟ್​ ಸಂಭ್ರಮಕ್ಕೆ ಸ್ಪೆಷಲ್​ ಪ್ಲಾನ್​ ಏನೇನು?

https://newsfirstlive.com/wp-content/uploads/2023/11/VIRAT_KOHLI_BIRTH_DAY_1.jpg

Load More