/newsfirstlive-kannada/media/post_attachments/wp-content/uploads/2025/06/Shreyas-iyer.jpg)
ಶ್ರೇಯಸ್​​ ಅಯ್ಯರ್​.. ಭಾರತದ ತಂಡದ ಹ್ಯಾಂಡ್ಸಮ್​​ ಕ್ರಿಕೆಟರ್​​​.. ಹಾಗೇ ಮೋಸ್ಟ್​ ಎಲಿಜೆಬಲ್​​ ಬ್ಯಾಚುಲರ್​ ಕೂಡ.. ಐಪಿಎಲ್​ನಲ್ಲಿ ಭರ್ಜರಿ ಪರ್ಫಾಮೆನ್ಸ್​​​ ಹಾಗೂ ತಮ್ಮ ಕ್ಯಾಪ್ಟನ್ಸಿಯಿಂದ ಪಂಜಾಬ್​​​​ ತಂಡವನ್ನ ಫೈನಲ್​​​ ತಲುಪಿಸಿದ್ರು. ಫೈನಲ್​​ನಲ್ಲಿ ಆರ್​ಸಿಬಿ ವಿರುದ್ಧ ಸೋಲು ಅನುಭವಿಸಿದ್ರು. ಆದ್ರೂ ಕೂಡ ಶ್ರೇಯಸ್​​​ ಅಯ್ಯರ್​​​ ಆಟಕ್ಕೆ ಎಲ್ಲರೂ ಬಹುಪರಾಕ್​ ಎಂದಿದ್ರು.. ಸದ್ಯ ಐಪಿಎಲ್​ ಮುಕ್ತಾಯವಾಗಿದ್ದು, ಶ್ರೇಯಸ್​​​ ರೆಸ್ಟ್​​ ಮೋಡ್​ನಲ್ಲಿದ್ದಾರೆ.. ಆದ್ರೆ, ಶ್ರೇಯಸ್​​ ಅಯ್ಯರ್​ ಬಗ್ಗೆ ಬಾಲಿವುಡ್​​ ನಟಿಯೊಬ್ಬಳು ಅಚ್ಚರಿ ಹೇಳಿಕೆ ನೀಡಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ..
‘ಶ್ರೇಯಸ್​​ ಅಯ್ಯರ್​ಗೂ ನನಗೂ ಮದುವೆಯಾಗಿದೆ‘
ಕ್ರಿಕೆಟ್ ಹಾಗೂ ಬಾಲಿವುಡ್​​ ನಡುವಿನ ಸಂಬಂಧ ಇಂದು, ನಿನ್ನೆಯದ್ದಲ್ಲ. ಹಲವು ವರ್ಷಗಳದ್ದಾಗಿದೆ. ಈ ಎರಡು​ ಬೇರೇಯದ್ದೇ ಲೋಕವಾಗಿದ್ರು. ನಂಟು ಮಾತ್ರ ಬಿಡಿಸಲಾಗದ್ದು. ಇದಕ್ಕೆ ಸಾಕ್ಷಿ ಸಾಕಷ್ಟಿದೆ.. ಈ ನಡುವೆ ಬಾಲಿವುಡ್​​ ನಟಿ ಎಡಿನ್​ ರೋಸ್​​ ಶ್ರೇಯಸ್ ಅಯ್ಯರ್​ ಬಗ್ಗೆ ಶಾಕಿಂಗ್​​​ ಹೇಳಿಕೆ ನೀಡಿದ್ದಾರೆ.​​​ ನಾನು ಶ್ರೇಯಸ್​ ಅಯ್ಯರ್​ನ ಮಾನಸಿಕವಾಗಿ ಮದುವೆಯಾಗಿದ್ದೇನೆ, ನಮಗೆ ಮಕ್ಕಳು ಇದ್ದಾರೆ ಎಂದು ಹೇಳಿಕೆ ನೀಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಹಾಟ್​ ಟಾಪಿಕ್​ ಆಗಿದೆ.
ಇದನ್ನೂ ಓದಿ: DK ಒಬ್ಬರೇ ಅಲ್ಲ.. ಆರ್​ಸಿಬಿಯಲ್ಲಿ ಕಪ್ ಗೆಲುವಿನ ಹಿಂದಿನ ನಿಜವಾದ ಸೂತ್ರದಾರ ಇವರೇ..!
/newsfirstlive-kannada/media/post_attachments/wp-content/uploads/2025/06/Shreyas-iyer-3.jpg)
ಶ್ರೇಯಸ್​​ ಅಯ್ಯರ್​​ ದೊಡ್ಡ ಅಭಿಮಾನಿಯಾಗಿರುವ ನಟಿ ಎಡಿನ್​​​, ಶ್ರೇಯಸ್​​ ಬಗ್ಗೆ ಮಾತ್ನಾಡಿದ್ದಾರೆ.. ಅಲ್ಲದೆ, ಶ್ರೇಯಸ್ ನನ್ನ ಕ್ರಶ್. ತುಂಬಾ ಸುಂದರವಾಗಿದ್ದಾನೆ. ಅವನ ಎತ್ತರ ಅದ್ಭುತ.. ಗಡ್ಡದ ಲುಕ್ ನನಗೆ ತುಂಬಾ ಇಷ್ಟ, ನನಗೆ ಕರೆಕ್ಟ್ ಜೋಡಿಯಾಗುತ್ತಾರೆ ಅಂತಾ ಹೇಳಿದ್ದು, ಬಾಲಿವುಡ್​ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶ್ರೇಯಸ್​​ ಅಯ್ಯರ್​ ಹಿಂದೆ ಬಿದ್ದ ಎಡಿನ್​ ರೋಸ್ ಯಾರು?
ಮಾಡೆಲ್​ ಆಗಿ ಬಾಲಿವುಡ್​ಗೆ ಎಂಟ್ರಿ ಕೊಟ್ಟಿರುವ ನಟಿ ಎಡಿನ್​​, ಇದುವರೆಗೂ ಎರಡು ಚಿತ್ರದಲ್ಲಿ ನಟಿಸಿದ್ದಾರೆ.. ಆದ್ರೆ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಆ್ಯಕ್ಟೀವ್​ ಆಗಿರುವ ನಟಿ, ತಮ್ಮ ಬ್ಯೂಟಿಯಿಂದಲೇ ಸಖತ್​ ಫೇಮಸ್​​ ಆಗಿದ್ದಾರೆ.
ಟೀಮ್ ಇಂಡಿಯಾದ ಪ್ಲೇ ಬಾಯ್ ಎಂದು ಕರೆಸಿಕೊಳ್ಳೋ ಶ್ರೇಯಸ್​ ಅಯ್ಯರ್, ತ್ರಿಷಾ ಕುಲಕರ್ಣಿ ಜೊತೆ ದಿವಾಳಿ ಸೆಲಬ್ರೇಷನ್​ ಮಾಡಿದ್ರು. ಹಾಗೇ ಶ್ರದ್ದಾ ಕಪೂರ್​​ ಜೊತೆ ಕೈ ಕೈ ಹಿಡಿದು ಸುತ್ತಾಡಿದ್ದ ಸುದ್ದಿ ಕೂಡ ಹರಿದಾಡ್ತಿತ್ತು.. ಇದಕ್ಕೂ ಮುನ್ನ ಚಹಲ್ ಮಾಜಿ​ ಪತ್ನಿ ಧನಶ್ರೀ ಜೊತೆ ಅಪೇರ್​ ಇದೆ ಎಂಬ ಊಹಪೋಹದ ಸುದ್ದಿ ಕೇಳಿ ಬಂದಿದ್ದುಂಟು. ಇದೀಗ ಅಯ್ಯರ್ ಹಿಂದೆ ಎಡಿನ್ ರೋಸ್ ಬಿದ್ದಿದ್ದು, ಮುಳ್ಳು ಚುಚ್ಚುತ್ತಾ? ಹೂವು ಉಳಿಯುತ್ತಾ? ಅಥವಾ ಉದುರೇ ಹೋಗುತ್ತಾ ಕಾದು ನೋಡಬೇಕು.
ಇದನ್ನೂ ಓದಿ: ನಿಶ್ಚಿತಾರ್ಥ ಆಗಿ ಎರಡೇ ದಿನಕ್ಕೆ ಟೀಂ ಇಂಡಿಯಾ ಡ್ಯೂಟಿಗೆ ಬಂದ ಸ್ಟಾರ್ ಕ್ರಿಕೆಟರ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us