ಕರ್ನಾಟಕ ಹೆಣ್ಮಕ್ಕಳಿಗೆ ಭರ್ಜರಿ ಗುಡ್​​ನ್ಯೂಸ್​; ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

author-image
Veena Gangani
Updated On
ಯಾರಿಗೆ ಎಜುಕೇಷನ್​ ಲೋನ್​ ಸಿಗುತ್ತೆ..? ವಿದ್ಯಾರ್ಥಿಗಳು ಓದಲೇಬೇಕಾದ ಸ್ಟೋರಿ..!
Advertisment
  • CBSE, ICSE, ಕೇಂದ್ರ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೂ ನಿಯಮ ಅನ್ವಯ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪಾಲನೆ
  • ಭಾಷಾ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತ ಶಾಲೆ ಹೊರತು ಪಡಿಸಿ ಆದೇಶ ಜಾರಿ

ಬೆಂಗಳೂರು: ರಾಜ್ಯದ ಹೆಣ್ಮಕ್ಕಳಿಗೆ ಶಿಕ್ಷಣ ಇಲಾಖೆ ಶುಭ ಸುದ್ದಿ ಕೊಟ್ಟಿದೆ. ಇನ್ಮುಂದೆ ಎಲ್ಲಾ ಶಾಲೆಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಶೇಕಡಾ 50 ಸೀಟು ಮೀಸಲಿಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಪಾದರಕ್ಷೆ ಕೊಳ್ಳಲು ದುಡ್ಡಿಲ್ಲ.. ಇಡೀ ಗ್ರಾಮಕ್ಕೆ ಪವನ್ ಕಲ್ಯಾಣ್‌ ಭರ್ಜರಿ ಗಿಫ್ಟ್‌; ಮನ ಮಿಡಿಯುವ ಸ್ಟೋರಿ!

ಹೌದು, ಈ ನಿರ್ಧಾರ CBSE, ICSE ಕೇಂದ್ರ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೂ ಅನ್ವಯ ಆಗಲಿದೆ. ಪ್ರತಿ ತರಗತಿಯಲ್ಲಿ ಲಭ್ಯವಿರುವ ಸೀಟುಗಳಲ್ಲಿ ಶೇಕಡಾ 50ರಷ್ಟು ಹೆಣ್ಣು ಮಕ್ಕಳಿಗೆ ಮೀಸಲಿಡಬೇಕು. ನಿರೀಕ್ಷಿತ ಅರ್ಜಿಗಳು ಲಭ್ಯವಿಲ್ಲದೇ ಇದ್ದಾಗ ಉಳಿದ ಸೀಟು ಬಾಲಕರಿಗೆ ಕೊಡಬೇಕು. ಭಾಷಾ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತ ಶಾಲೆ ಹೊರತು ಪಡಿಸಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳು ಬಾಲಕಿಯರಿಗೆ ಮೀಸಲು ಇಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪಾಲನೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment