/newsfirstlive-kannada/media/post_attachments/wp-content/uploads/2025/05/children-mask2.jpg)
ಬೆಂಗಳೂರು: ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಾಣುವಿನ ಹೊಸ ರೂಪಾಂತರಿಯಾದ ಒಮಿಕ್ರಾನ್ ಬಗ್ಗೆ ಇಡೀ ಜಗತ್ತೇ ಈಗ ಆತಂಕಗೊಂಡಿತ್ತು. ಆದ್ರೆ ಇದೀಗ ದಿನ ಕಳೆದಂತೆ ಇಡೀ ಜಗತ್ತನ್ನೇ ನಡುಗಿಸಿದ್ದ ಮಹಾಮಾರಿ ಮತ್ತೆ ರಾಜ್ಯದಲ್ಲಿ ಆ್ಯಕ್ಟೀವ್ ಆಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ 47 ಕೊರೊನಾ ಕೇಸ್.. ಪಾಸಿಟಿವಿಟಿ ರೇಟ್ ಹೆಚ್ಚಾದ್ರೆ ಎಲ್ಲರಿಗೂ ಟೆನ್ಷನ್; ಯಾಕೆ ಗೊತ್ತಾ?
ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದ್ದು, ಈಗಾಗಲೇ ಈ ಮಹಾಮಾರಿ ಮೊದಲ ಬಲಿಯನ್ನು ಪಡೆದಿದೆ. ಆದ್ರೇ ಈಗ ರಾಜ್ಯದಲ್ಲಿ ಒಮಿಕ್ರಾನ್ ಆತಂಕ ಶುರುವಾಗುತ್ತಿದ್ದಂತೆ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
ಹೌದು, ಮೇ 29ರಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆ ಆರಂಭ ಮಾಡೋದಕ್ಕೆ ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿದ್ದಾರೆ. ಆದ್ರೆ ಸದ್ದಿಲ್ಲದೇ ಒಮಿಕ್ರಾನ್ ಉಪತಳಿ ಉಪಟಳ ಕೊಡ್ತಾ ಇರೋ ಹಿನ್ನೆಲೆಯಲ್ಲಿ ಶಾಲೆ ಆರಂಭ ಮಾಡುವುದಾ ಅಥವಾ ಪೋಸ್ಟ್ ಪೋನ್ ಮಾಡಬೇಕಾ ಅಂತ ಯೋಚನೆಯಲ್ಲಿದ್ದಾರೆ. ಏಕೆಂದರೆ ದಿನೇ ದಿನೇ ಸೋಂಕು ಉಲ್ಬಣ ಆಗೋ ಭೀತಿ ಎದುರಾಗಿದೆ. ಮಳೆ ಮಧ್ಯೆ ಶಾಲೆ ಆರಂಭವಾಗಿ ಮಕ್ಕಳಲ್ಲಿ ವ್ಯಾಪಕ ಸೋಂಕು ಕಾಣಿಸಿಕೊಂಡರೆ ಅನ್ನೋ ಭೀತಿ ಇದೆ. ಮಳೆಯಲ್ಲಿ ಮಕ್ಕಳಿಗೆ ಸೊಂಕು ಬೇಗನೇ ಹರಡುತ್ತವೆ. ಈಗಾಗಲೇ 3 ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಹೀಗಾಗಿ ಮಕ್ಕಳ ಹಿತ ದೃಷ್ಟಿಯಿಂದ ಶಾಲಾ ಆರಂಭ ಪೋಸ್ಟ್ ಪೋನ್ಗೆ ಶಿಕ್ಷಣ ಇಲಾಖೆ ಪ್ಲಾನ್ ಮಾಡುತ್ತಿದೆ.
ಹೀಗಾಗಿ ಇನ್ನೂ ಎರಡು ದಿನ ಕಾದ ಬಳಿಕ ಇಲಾಖೆ ಅಧಿಕೃತ ಘೋಷಣೆ ಮಾಡಲಿದೆ. ಟೆಸ್ಟಿಂಗ್ ಶುರುವಾದ ಮೇಲೆ ಸೋಂಕಿಟರ ಸಂಖ್ಯೆ ಅವಲೋಕಿಸಿ ಶಾಲೆ ಪೋಸ್ಟ್ ಪೋನ್ ಬಗ್ಗೆ ಇಲಾಖೆ ನಿರ್ಧಾರ ಮಾಡಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ