/newsfirstlive-kannada/media/post_attachments/wp-content/uploads/2024/04/expo.jpg)
ಬೆಂಗಳೂರು: ಪಿಯುಸಿ ನಂತರ ಮುಂದೇನು? ಯಾವ ಕೋರ್ಸ್​ ಆಯ್ಕೆ ಮಾಡಿಕೊಳ್ಳಬೇಕು? ವೃತ್ತಿ ಪರ ಕೋರ್ಸ್​ ಎಷ್ಟಿವೆ? ಹೀಗೆ, ನಿಮ್ಮ ತಲೆಯಲ್ಲಿ ಸಾಕಷ್ಟು ಗೊಂದಲಗಳಿದ್ಯಾ? ಹಾಗಿದ್ರೆ, ತಡ ಯಾಕೆ ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಂದ್ರೆ ನಾಳೆ ಎಡ್ಯುವರ್ಸ್​ EDUCATION EXPOಗೆ ಹೋಗಿ. ಎಡ್ಯುವರ್ಸ್ ಕರ್ನಾಟಕದ ಪ್ರತಿಷ್ಠಿತ ಶೈಕ್ಷಣಿಕ ಮೇಳ. ನ್ಯೂಸ್ ಫಸ್ಟ್ ಟೆಲಿವಿಷನ್ ಪಾರ್ಟ್​ನರ್ ಆಗಿ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಬಳಗ ಪ್ರಸ್ತುತಪಡಿಸುವ EDUCATION EXPO ನಾಳೆಯಿಂದ ಆರಂಭವಾಗಲಿದೆ. ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ನಾಳೆ ಮತ್ತು ನಾಡಿದ್ದು, ಎರಡೂ ದಿನ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಈ ಮೇಳ ನಡೆಯಲಿದ್ದು, ಎಲ್ಲ ಶೈಕ್ಷಣಿಕ ಮನಸ್ಸುಗಳು ಭಾಗಿಯಾಗಲು ಮುಕ್ತ ಆಹ್ವಾನವಿದೆ.
/newsfirstlive-kannada/media/post_attachments/wp-content/uploads/2024/04/student1.jpg)
ನಟ ವಿಜಯ ರಾಘವೇಂದ್ರ ಶೈಕ್ಷಣಿಕ ಮೇಳವನ್ನು ನಾಳೆ ಉದ್ಘಾಟಿಸಲಿದ್ದಾರೆ. ಎರಡೂ ದಿನ ಸಿಇಟಿ ಹಾಗೂ ಕಾಮೆಡ್ ಕೆ ಕುರಿತು ವಿಶೇಷ ಗೋಷ್ಠಿಗಳು ನಡೆಯಲಿವೆ. ಅನೇಕ ಪ್ರತಿಷ್ಠಿತ ಸಂಸ್ಥೆಗಳು ಶಿಕ್ಷಣ ಕ್ಷೇತ್ರದ ಹಲವು ಪರಿಣತರು, ತಜ್ಞರು ಪಾಲ್ಗೊಳ್ತಿದ್ದಾರೆ. ಪರಿಣತರೊಂದಿಗೆ ಸಂವಾದ, ಉಪನ್ಯಾಸ ಮತ್ತು ಚರ್ಚೆಗಳನ್ನು ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳು ಪೋಷಕರು ತಮಗಿರುವ ಗೊಂದಲ ಬಗೆ ಹರಿಸಿ ಕೊಳ್ಳಲು ಅವಕಾಶವಿದೆ. ರಾಜ್ಯದಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಿಬ್ಬಂದಿ ತಮ್ಮಲ್ಲಿರುವ ವಿಶೇಷ ಕೋರ್ಸ್‌ಗಳ, ಪದವಿಗಳ ಮಾಹಿತಿ ನೀಡಲಿದ್ದಾರೆ.
ಇದನ್ನೂ ಓದಿ:ಸಿಎಂ ಬೆಂಗಾವಲು ವಾಹನದ ಹಿಂದೆ ಹೋಗ್ತಿದ್ದ ಕಾರಿನಲ್ಲಿ 1 ಕೋಟಿ ರೂಪಾಯಿ; ಕಂತೆ, ಕಂತೆ ಹಣ ಜಪ್ತಿ!
ವಿದ್ಯಾರ್ಥಿಗಳಷ್ಟೇ ಅಲ್ಲದೇ, ಪಾಲಕರಿಗೂ ಸಹ ಈ ಶೈಕ್ಷಣಿಕ ಮೇಳ ಮಾರ್ಗದರ್ಶಿಯಾಗಿರಲಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಿಇಟಿ ಮತ್ತು ಕಾಮೆಡ್‌ಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಸಮಗ್ರವಾಗಿ ನೀಡಲಾಗುತ್ತದೆ. ಸಿಇಟಿ ಮತ್ತು ಕಾಮೆಡ್‌ಕೆ ಪರೀಕ್ಷಾರ್ಥಿಗಳಿಗೆ ಎರಡೂ ದಿನ ಮಾಕ್ ಟೆಸ್ಟ್ ಕೂಡ ಹಮ್ಮಿಕೊಳ್ಳಲಾಗುವುದು. ಈ ಅಣಕು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ಒಂದು ಲಕ್ಷ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶಗಳಿವೆ.
/newsfirstlive-kannada/media/post_attachments/wp-content/uploads/2024/04/student.jpg)
what next ಅನ್ನೋದು ಎಷ್ಟೋ ಜನ ಪಿಯು ವಿದ್ಯಾರ್ಥಿಗಳಿಗೆ ಇರುವ ಅತೀ ದೊಡ್ಡ ಪ್ರಶ್ನೆ. ಈ ಪ್ರಶ್ನೆಗೆ ಸೂಕ್ತ ಉತ್ತರ ಅಂದ್ರೆ ಅಗತ್ಯ ಮಾರ್ಗದರ್ಶನ. ಈ ಸಲಹೆ ಪಡೆದು ಆ ಗೊಂದಲಗಳ ಬಗೆ ಹರಿಸಿಕೊಳ್ಳಲು ಎಡ್ಯುವರ್ಸ್ ಶೈಕ್ಷಣಿಕ ಮೇಳ ಉತ್ತಮ ವೇದಿಕೆ ಅಂದ್ರೆ ತಪ್ಪಾಗಲ್ಲ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೋಗಿ ಲಾಭ ಪಡೆದು ಕೊಳ್ಳಿ. ಅಷ್ಟೇ ಅಲ್ಲ ಏಪ್ರಿಲ್ 13 ಮತ್ತು 14ರಂದು ಹುಬ್ಬಳ್ಳಿಯಲ್ಲಿಯೂ ಈ ಮೇಳವನ್ನೂ ಆಯೋಜಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us