46 ಹೊಸ ಸರ್ಕಾರಿ ಪಿಯು ಕಾಲೇಜು ಆರಂಭಿಸಿ ಎಂದು ಆಗ್ರಹ
20 ಸಾವಿರ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಈ ಹೋರಾಟ
ಮುಖ್ಯಮಂತ್ರಿ, ಶಿಕ್ಷಣ ಸಚಿವ, ಶಿಕ್ಷಣ ಇಲಾಖೆಗೂ ರಕ್ತದಲ್ಲಿ ಪತ್ರ
ವಿಜಯಪುರ: ಅನುಮೋದನೆಗೊಂಡ 46 ಹೊಸ ಸರ್ಕಾರಿ ಪಿಯು ಕಾಲೇಜು ಆರಂಭಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಶಿಕ್ಷಣ ಪ್ರೇಮಿ, ಹೋರಾಟಗಾರ ವಿಜಯರಂಜನ್ ಜೋಷಿ ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಗ್ರಾಮದ ನಿವಾಸಿ ವಿಜಯರಂಜನ್ ಜೋಷಿ ಮುಖ್ಯಮಂತ್ರಿಗೆ ಮಾತ್ರವಲ್ಲದೆ, ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ನಿರ್ದೇಶಕರು, ಶಾಸಕರಿಗೂ ಸಹ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಬಿಜೆಪಿ ಸರ್ಕಾರ 2022-23ನೇ ಸಾಲಿನಲ್ಲಿ ನಾಲತವಾಡ ಪಟ್ಟಣ ಸೇರಿದಂತೆ ರಾಜ್ಯಾದ್ಯಂತ 46 ಹೊಸ ಪಿಯು ಕಾಲೇಜುಗಳಿಗೆ ಅನುಮೋದನೆ ಕೊಟ್ಟಿತ್ತು. ಆದರೆ ಶೈಕ್ಷಣಿಕ ವರ್ಷದ ಪ್ರವೇಶಾತಿ ಮುಗಿಯುತ್ತಾ ಬಂದಿದ್ದರೂ ಹೊಸ ಪಿಯು ಕಾಲೇಜು ಇನ್ನೂ ಆರಂಭವಾಗದ ಹಿನ್ನಲೆಯಲ್ಲಿ ಶಿಕ್ಷಣ ಪ್ರೇಮಿ ಹೋರಾಟಗಾರ ವಿಜಯರಂಜನ್ ಜೋಷಿ ಪತ್ರ ಬರೆದಿದ್ದಾರೆ. ಶೀಘ್ರದಲ್ಲೇ ಹೊಸ ಪಿಯು ಕಾಲೇಜಿನಲ್ಲಿ ಪ್ರವೇಶಾತಿಗೆ ಅವಕಾಶ ಕೊಡಿ ಎಂದು ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಹೊಸ ಪಿಯು ಕಾಲೇಜುಗಳು ಪ್ರಾರಂಭವಾದರೆ 15 ರಿಂದ 20 ಸಾವಿರ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂಬುದನ್ನು ಪತ್ರದಲ್ಲಿ ದೃಢಪಡಿಸುವ ಮೂಲಕ ಸಿಎಂ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುದ್ದೇಬಿಹಾಳ ಶಾಸಕ ಸಿಎಸ್ ನಾಡಗೌಡರಿಗೆ ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ