SSLC, PUC ಪರೀಕ್ಷೆಗೆ ಭರ್ಜರಿ ತಯಾರಿ.. ಶಿಕ್ಷಣ ಸಚಿವರಿಂದ ಇಂದು ಮಹತ್ವದ ಮಾಹಿತಿ

author-image
Bheemappa
Updated On
ನಾಳೆ ಇಂದ SSLC ಪರೀಕ್ಷೆ; ಎಷ್ಟು ಲಕ್ಷ ಬಾಲಕರು, ಬಾಲಕಿಯರು ಎಕ್ಸಾಂ ಬರೆಯುತ್ತಿದ್ದಾರೆ?
Advertisment
  • ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗುವ ದಿನಾಂಕ ಯಾವುದು?
  • ಈಗಾಗಲೇ ಪರೀಕ್ಷೆಗೆ ಸಕಲ ತಯಾರಿ ಮಾಡಿಕೊಂಡ ಪರೀಕ್ಷಾ ಮಂಡಳಿ
  • ದ್ವಿತೀಯ ಪಿಯುಸಿ ಹಾಗೂ 10ನೇ ತರಗತಿ ಪರೀಕ್ಷೆಗಳಿಗೆ ದಿನಗಣನೆ ಶುರು

ಬೆಂಗಳೂರು: 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಂದಿನ ತಿಂಗಳಿನಿಂದ ಆರಂಭವಾಗಲಿವೆ. ಮಾರ್ಚ್ 01 ರಿಂದ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದ್ರೆ, ಮಾರ್ಚ್‌ 21 ರಿಂದ ಏಪ್ರಿಲ್ 4ರ ತನಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದ್ದು ಶಿಕ್ಷಣ ಸಚಿವ ಮಧುಬಂಗಾರಪ್ಪ ನೇತೃತ್ವದಲ್ಲಿ ಪರೀಕ್ಷೆಯ ತಯಾರಿ ಕುರಿತು ಇಂದು ಮಾಧ್ಯಮಗೊಷ್ಠಿ ನಡೆಸಲಿದ್ದಾರೆ.

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳ ದಿನಾಂಕ, ಸಮಯ ಈಗಾಗಲೇ ನಿಗದಿಯಾಗಿದೆ. ವಿದ್ಯಾರ್ಥಿಗಳು ಪೂರ್ವ ತಯಾರಿಯಲ್ಲಿದ್ದಾರೆ. ಹೇಗೆ ಓದಬೇಕು, ಹೆಚ್ಚು ಅಂಕ ಪಡೆಯಲು ಯಾವ ಮಾದರಿ ಸ್ಟಡಿ ಮಾಡಬೇಕು ಎನ್ನುವ ಹಲವು ಯೋಚನೆಗಳು ವಿದ್ಯಾರ್ಥಿಗಳಲ್ಲಿ ಇರುತ್ತವೆ. ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ.

publive-image

ಈ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪರೀಕ್ಷೆ ನಡೆಸುವ ಬಗ್ಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಮಾಧ್ಯಮಗೋಷ್ಠಿ ನಡೆಸಲಿದೆ. ಶಿಕ್ಷಣ ಸಚಿವ ಮಧುಬಂಗಾರಪ್ಪ ಹಾಗೂ ಇಲಾಖೆಯ ಅಧಿಕಾರಿಗಳು ಪರೀಕ್ಷೆಯ ತಯಾರಿ ಕುರಿತು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮಾಹಿತಿ ನೀಡಲಿದ್ದಾರೆ.

ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್‌ 21 ರಿಂದ ಏಪ್ರಿಲ್ 4ರ ತನಕ ನಡೆಯಲಿವೆ. ಈ ಬಾರಿ ಯಾವುದೇ ಗ್ರೇಸ್ ಅಂಕಗಳನ್ನು ನೀಡುವುದಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಶಾಲೆಗಳು, ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಹೇಗೆ ಇರಬೇಕು ಎಂಬುದನ್ನು ಶಿಕ್ಷಕರು ಮನದಟ್ಟು ಮಾಡುತ್ತಿದ್ದಾರೆ. ಪರೀಕ್ಷೆ ಹಾಲ್​ಗೆ ಹೇಗೆ ಹೋಗಬೇಕು, ಏನನ್ನು ತೆಗೆದುಕೊಂಡು ಹೋಗಬೇಕು, ಯಾವುದನ್ನು ತೆಗೆದುಕೊಂಡು ಹೋಗಬಾರದು ಎನ್ನುವ ಇನ್ನಿತರ ಮಾಹಿತಿ ನೀಡುತ್ತಿದ್ದಾರೆ.

ಇದನ್ನೂ ಓದಿ:ಕುಂಭಮೇಳದಲ್ಲಿ ಸ್ನಾನ ಮಾಡಿದವ್ರಿಗೆ ಹೊಸ ಆತಂಕ; ಪಿಸಿಬಿ ವರದಿ ಬಗ್ಗೆ ಏನಂದ್ರು CM ಆದಿತ್ಯನಾಥ್..?

publive-image

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ-

ಮಾರ್ಚ್​ 01- ಕನ್ನಡ, ಅರೇಬಿಕ್
ಮಾರ್ಚ್ 03- ಗಣಿತ, ಶಿಕ್ಷಣ ಶಾಸ್ತ್ರ, ವ್ಯವಹಾರ ಅಧ್ಯಯನ, ತರ್ಕಶಾಸ್ತ್ರ
ಮಾರ್ಚ್​ 04- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್​​ 05- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾರ್ಚ್​ 07- ಇತಿಹಾಸ, ಭೌತಶಾಸ್ತ್ರ
ಮಾರ್ಚ್​ 10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್​ 12- ಮನಃಶಾಸ್ತ್ರ, ಮೂಲ ಗಣಿತ, ರಸಾಯನಶಾಸ್ತ್ರ,
ಮಾರ್ಚ್​ 13- ಅರ್ಥ ಶಾಸ್ತ್ರ
ಮಾರ್ಚ್​ 15- ಇಂಗ್ಲೀಷ್
ಮಾರ್ಚ್​ 17- ಭೂಗೋಳಶಾಸ್ತ್ರ
ಮಾರ್ಚ್​ 18- ಜೀವಶಾಸ್ತ್ರ, ಸಮಾಜಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನಶಾಸ್ತ್ರ
ಮಾರ್ಚ್​ 19- ಮಾಹಿತಿ ತಂತ್ರಜ್ಞಾನ, ರೀಟೈಲ್, ಹಿಂದೂಸ್ತಾನಿ ಸಂಗೀತ, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್
ಮಾರ್ಚ್​ 20- ಹಿಂದಿ

10ನೇ ತರಗತಿ ವೇಳಾಪಟ್ಟಿ-

ಮಾರ್ಚ್ 21- ಪ್ರಥಮ ಭಾಷೆ
ಮಾರ್ಚ್ 24- ಗಣಿತ
ಮಾರ್ಚ್ 26- ದ್ವಿತೀಯ ಭಾಷೆ
ಮಾರ್ಚ್ 29- ಸಮಾಜ ವಿಜ್ಞಾನ
ಏಪ್ರಿಲ್ 2- ವಿಜ್ಞಾನ
ಏಪ್ರಿಲ್ 4- ತೃತೀಯ ಭಾಷೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment